- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ; ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.
ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ ದೇವಪ್ಪ ನಂದೂರಕರ್ ಅವರ ಸೇವಾ ನಿವೃತ್ತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಗಳಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಯಾವ ರೀತಿ ಪ್ರೀತಿಸುತ್ತಾರೆ ಅದೇ ರೀತಿ ದೇವಪ್ಪ ನಂದೂರಕರ್ ಅವರು ಸಹ ಒಡಹುಟ್ಟಿದ ಮಕ್ಕಳಂತೆ ಕಂಡು ಶಿಕ್ಷಣ ನೀಡಿದ್ದರಿಂದ ಹಳೆಯ ವಿದ್ಯಾರ್ಥಿಗಳು ಹಾಗೂ ಇಂದಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಸಾಕ್ಷಿ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾತನಾಡಿ, ದೇವಪ್ಪ ನಂದೂರಕರ್ ಅವರು ಶಿಕ್ಷಕರಾಗಿ 29 ವರ್ಷಗಳ ಸುಧೀರ್ಘವಾದ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿದ್ದಾರೆ. ಇಂತಹ ಶಿಕ್ಷಕರ ಸೇವೆ ಸಮಾಜಕ್ಕೆ ಹಾಗೂ ವಿದ್ಯಾರ್ಥಿ ಲೋಕಕ್ಕೆ ಅತಿ ಅವಶ್ಯಕ. ನಂದೂರಕರ್ ಸರ್ ಎಲ್ಲರೊಂದಿಗೆ ಬೆರೆಯುವ, ಸದಾ ಸಕಲರ ಒಳಿತನ್ನೇ ಬಯಸಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಮತ್ತು ಇಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ಭೂ ದಾನಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಶಿಕ್ಷಕ ದೇವಪ್ಪ ನಂದೂರಕರ್ ಅವರಂತಹ ಶಿಕ್ಷಕ ಸಿಗುವುದು ನಿಜಕ್ಕೂ ವಿರಳ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಹಾಗೂ ಮಾರ್ಗದರ್ಶನ ಇಲಾಖೆಗೆ ಸದಾ ಇರಲಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಂಜುಳಾ ಎಮ್ ಅಚಿಕೇರಿ ಅಧ್ಯಕ್ಷತೆ ವಹಿಸಿದ್ದರು.
ಇದೇ ವೆಳೆ ದೇವಪ್ಪ ನಂದೂರಕರ್ ಅವರಿಗೆ ಕಲಿಸಿದ ಮೊದಲ ಗುರು ರಾಮಣ್ಣ ತಗಡಿಗರ್ ಅವರಿಗೆ ದೇವಪ್ಪ ನಂದೂರಕರ್ ಅವರು ಹಣ್ಣು ಹಂಪಲುಗಳ ಮೂಲಕ ತುಲಾಭಾರ ಮಾಡಿದರು.
ಪತ್ನಿ ಶಂಕುತಲಾ ನಂದೂರಕರ್, ನ್ಯಾಯವಾದಿ ಶ್ರೀನಿವಾಸ ಜೋಶಿ, ಕ್ರೈಂ ಪಿಎಸ್’ಐ ಚಂದ್ರಾಮಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ, ನಿವೃತ್ತ ಮುಖ್ಯಗುರುಗಳಾದ ಶಂಕರ್ ಮೊದಲೆ, ಸರಸ್ವತಿ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಶಿವಾನಂದ ನಾಲವಾರ, ಮಹಾಂತೇಶ ಪಂಚಾಳ, ಶಿವಪುತ್ರ ಕರಣಿಕ, ಖಾಸಾಗಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶರಣಬಸಪ್ಪ ಬಮ್ಮನಳ್ಳಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಪಶ್ಚಿಮ ವಲಯ ಸಿ.ಆರ್.ಸಿ ಕವಿತಾ ದೊಡ್ಮನಿ ಸೇರಿದಂತೆ ಅನೇಕ ಮುಖಂಡರು, ಶಿಕ್ಷಕರು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು. ವಿಷ್ಣುವರ್ಧನ್ ರೆಡ್ಡಿ ನಿರೂಪಿಸಿದರು. ಸುರೇಶ ಸರಾಫ್ ವಂದಿಸಿದರು.