ಸ್ವಂತ ಖರ್ಚಿನಲ್ಲಿ ಶಾಲಾ ಸಮವಸ್ತ್ರ ವಿತರಿಸಿದ ಶ್ರೀಧರ ಪಾಟೀಲ

0
23

ಕಲಬುರಗಿ: ಗಾಂಧಿ ಜಯಂತಿಯ ಅಂಗವಾಗಿ ಗಣಜಲಖೇಡ ಗ್ರಾಮದ ಸರಕಾರಿ ಪ್ರೌಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಳ್ಳಿಯ ಅಭಿವೃದ್ದಿಯ ಕನಸ್ಸುಕಂಡ ಸೇವಕ ,ಯುವಕರ ಕಣ್ನಣಿ, ನೇರ ನುಡಿ, ಕಷ್ಟವೆ ಇರಲಿ ಸುಖಃವೇ ಇರಲಿ ಸದಾ ಅಭಿವೃದ್ದಿಗಾಗಿ ಶ್ರಮಿಸುವ, ಯುವ ಉತ್ಸಾಹಿಯವರಾದ ಕುಮಸಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ಪಾಟೀಲರ ಸ್ವಂತ ಖರ್ಚಿನಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀಧರ ಪಾಟೀಲ ಅವರು ಮಾತನಾಡುತ್ತಾ. ಯಾವುದೆ ಒಂದು ಹಳ್ಳಿ ಉದ್ದಾರವಾಗಬೇಕಾದರೆ ಮೂಲತಃವಾಗಿ ಅಲ್ಲಿ ಉತ್ತಮವಾದ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದ್ದು, ಸರಕಾರಿ ಶಾಲೆಗಳಲ್ಲಿ ಕಲಿತಂತಹ ಮಕ್ಕಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮದೆ ಆದ ಆಕರ್ಷಣೆ ಹೊಂದಬೇಕೆಂದರೆ ಮೂಲತಃವಾಗಿ ಆ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮವಾದ ಸಂಸ್ಕಾರದ ಜೋತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.

Contact Your\'s Advertisement; 9902492681

ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಮಟ್ಟಿಗೆ ಸರಕಾರಿ ಶಾಲೆಯ ಮಕ್ಕಳಿಗೆ ಅವರಿಗೆ ಅವಶ್ಯಕತೆ ಇರುವ ಸೌಲಭ್ಯವನ್ನು ಸಹಾಯ ಮಾಡಿದ್ದೇ ಆದಲ್ಲಿ ಸಮಾಜದ ಕಟ್ಟ ಕಡೆಯ ಬಡ ಮಕ್ಕಳು ಸಮಾಜಕ್ಕೆ ಮಾಧರಿಯಾಗುವ ರೀತಿಯಲ್ಲಿ ಬೆಲೆದು ತೊರಿಸುವಂತಹ ಸಾಮರ್ಥ್ಯ ಬಡ ಮಕ್ಕಳಲ್ಲಿದೆ, ಆದರೆ ದುರಾದೃಷ್ಟವಶಾತ ನಾವೆಲ್ಲರೂ ಆ ನಿಟ್ಟಿನಲ್ಲಿ ಗಮನ ಹರಸದೆ ಇರುವದು, ಉತ್ತಮವಾದ ಜೀವನದ ಕನಸ್ಸು ಕಂಡ ಎಷ್ಟೋ ಬಡ ಮಕ್ಕಳು ಉತ್ತಮವಾದ, ಉನ್ನತವಾದ ಸ್ಥಾನಮಾನದ ಕನಸ್ಸು ಭಗ್ನಗೊಳಿಸಿದಂತಾಗುತ್ತದೆ. ಆದರೆ ಪ್ರತಿಯೊಬ್ಬರು ತಮಗೆ ಭಗವಂತ ಕೊಟ್ಟ ಸಂಪತ್ತಿನಲ್ಲಿ ನಮ್ಮ ಅಕ್ಕಪಕ್ಕದಲ್ಲಿರುವಂತಹ ಬಡವನ್ನು ಸಹಾಯ ಮಾಡಿದ್ದೇ ಆದಲ್ಲಿ ಅವರು ಕೂಡಾ ಸಮಾಜದಲ್ಲಿ ಉತ್ತಮವಾದ ಜೀವನ ಕಟ್ಟಿಕೊಂಡು ಬದುಕು ಸಾಗಿಸಲು ಅನುಕೂಲವಾಗುತ್ತದೆ ಎಂದರು.

ನಾನು ನನ್ನ ಜೀವನಲ್ಲಿ ನನ್ನ ಹಳ್ಳಿಗಾಗಿ, ನನ್ನ ಹಳ್ಳಿಯ ಜನರ ಕಷ್ಟಕ್ಕೆ, ಯಾವುದೆ ಸಮಸ್ಯೆ ಇದ್ದರೆ ಹಗಲು ರಾತ್ರಿ ಯನ್ನದೆ ಸೇವೆ ಸಲ್ಲಿಸುವೆ, ಹಳ್ಳಿಯ ಜನರ ಸೇವೆ ಸಲ್ಲಿಸುವ ಭಾಗ್ಯ ನನಗೆ ಭಗವಂತ ನೀಡಿದ್ದು ನನ್ನ ಪುಣ್ಯ ಇಂತಹ ಪುಣ್ಯದ ಕೆಲಸವನ್ನು ನನ್ನ ಜೀವನದುದ್ದಕ್ಕು ಮಾಡುವೆ ಎಂದು ಶಾಲಾ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಥಾನ ಮಾತನ ಶಾಶ್ವತವಲ್ಲ ನಾವು ಮಾಡಿರುವ ಒಳ್ಳೆಯ ಕೆಲಸ, ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಮಟ್ಟಿಗೆ ನಾವು ಮಾಡಿರುವ ಸಹಾಯ, ಹಿರಿಯರ ಆಶಿರ್ವಾದ, ಒಳ್ಳೆಯದು, ಕೆಟ್ಟದ್ದು ಮಾತ್ರ ನಮ್ಮ ಜೋತೆಗೆ ಬರುತ್ತದೆ, ಅನ್ಯಾಯವೆಂಬ ಅಸ್ಟ್ತ ಶಾಶ್ವತವಲ್ಲ ಯಾರು ಯಾರನ್ನು ಅನ್ಯಾಯ ಮಾಡಬಾರದು, ನಾವು ಇಂದು ಒಬ್ಬರನ್ನು ಅನ್ಯಾಯ ಮಾಡಿದರೆ, ನಾಲೆ ನಮಗೆ ಅನ್ಯಾಯ ಮಾಡುವವರು ಮತ್ತೊಬ್ಬರು ಇರುತ್ತಾರೆ.

ಅದಕ್ಕಾಗಿ ಶಾಲಾ ಮಕ್ಕಳು ನ್ಯಾಯ ಬದ್ದವಾದ ಆಯ್ಕೆಯನ್ನು ಮಾತ್ರ ತೆಗೆದುಕೊಳ್ಳಬೇಕು, ಇಂದಿನ ಮಕ್ಕಳು ನಾಲಿನ ಪ್ರಜೆಗಳು ಎಂಬ ನಮ್ಮ ಭಾರತದ ಘೋ಼ಷ್‌ ವ್ಯಾಕ್ಯವನ್ನು ತಾವುಗಳು ಸಾಕಾರಗೊಳಿಸಬೇಕಾದರೆ, ಇಂದಿನಿಂದಲೆ ನ್ಯಾಯಬದ್ದವಾದ ಮಾರ್ಗವನ್ನು ಆಯ್ದುಕೊಂಡು, ಶ್ರಮಜೀವಿಗಳಾಗಿ ತಮ್ಮ ತಮ್ಮ ವಿದ್ಯಾಬ್ಯಾಸವನ್ನು ಮಾಡಬೇಕು, ಓದಿನಲ್ಲಿ ಯಾರಿಗೆ ಸಹಾಯ ಬೇಕಾದರೆ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ ನನ್ನ ಸ್ವಂತ ಖರ್ಚಿನಲ್ಲಿ ಆರ್ಥಿಕ ಸಹಾಯದ ಜೋತೆಗೆ, ಯುವ ಉತ್ಸಾಹ ತುಂಬುವೆ ಎಂದರು.

ಗಣಜಲಖೇಡ ಪ್ರೌಡ ಶಾಲಾ ಮಕ್ಕಳಿಗೆ ತನ್ನ ಸ್ವಂತ ಖರ್ಚಿನಲ್ಲಿ ಶಾಲಾ ಸಮವಸ್ತ್ರ ವಿತರಿಸಿದ ಪರಿ ಕುಮಸಿ ಗ್ರಾಮ ಪಂಚಾಯತ ಅದ್ಯಕ್ಷರಾದ ಶ್ರೀಧರ ಪಾಟೀಲರ ಅವರಿಗೆ ಪ್ರೌಡ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮ ಮೊದಲಿಗೆ ಮಾಹಾತ್ಮಗಾಂಧಿಜೀಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಪ್ರಾರಂಭಿಸಲಾಗಿತು. ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರೌಡ ಶಾಲಾ ಮುಖ್ಯಗುರುಗಳು, ಹಾಗೂ ಸಹ ಶಿಕ್ಷಕರು, ಎಸ್‌ ಡಿ ಎಮ್‌ ಸಿ ಅಧ್ಯಕ್ಷ ಶಿವಕೂಮಾರ,ಚವ್ಹಾಣ, ಬಸವರಾಜ ಗುಮ್ಮಾ, ಪೀರಪ್ಪಾ, ಹೀರಾಬಾಯಿ ಸೇರಿದಂತೆ ಊರಿನ ಗ್ರಾಮಸ್ಥರೆಲ್ಲರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here