SSLC ಎಸ್ಎ-1 ಫಲಿತಾಂಶ ವಿಶ್ಲೇಷಣೆ ದಸರಾ ರಜೆಯ ನಂತರ ಮಾಡಿ; ನಮೋಶಿ

0
24

ಕಲಬುರಗಿ: 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಡೆಸಲಾದ ಎಸ್ ಎ 1 ಪರೀಕ್ಷಾ ಫಲಿತಾಂಶ ವಿಶ್ಲೇಷಣೆಯನ್ನು ಮುಂದೂಡಬೇಕೆಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಆಗ್ರಹಿಸಿದ್ದಾರೆ.

ಅವರು ಕರ್ನಾಟಕ ಪರೀಕ್ಷಾ ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದು 2024-25 ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲ ಸರ್ಕಾರಿ,ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ 24 ರಿಂದ 30ರವರೆಗೆ ನಡೆಸಲಾದ ಎಸ್ ಎ 1 ಪರೀಕ್ಷಾ ಫಲಿತಾಂಶ ವಿಶ್ಲೇಷಣೆಯನ್ನು ಕೈಗೊಳ್ಳುವಂತೆ  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ರಾಜ್ಯದ ಶಿಕ್ಷಕರು , ಸಿಬ್ಬಂದಿ ವರ್ಗದವರು ದಸರಾ ರಜೆಯಲ್ಲಿ ಇದ್ದಾರೆ, ಸಾಲು ಸಾಲು ದೊಡ್ಡ ಹಬ್ಬಗಳು ಬರುತ್ತಿವೆ ಇದರಿಂದಾಗಿ ಶಿಕ್ಷಕರಿಗೆ ತೊಂದರೆ ಆಗುತ್ತದೆ.ಉತ್ತರ ಪತ್ರಿಕೆಗಳ  ವಿಶ್ಲೇಷಣೆಯನ್ನು ಮತ್ತು ಕಾರ್ಯಯೋಜನೆ ರೂಪಿಸಲು ಇದು ಸರಿಯಾದ ಸಮಯವಲ್ಲ. ಆದ್ದರಿಂದ ಈ ಯೋಜನೆಗೆ ಸಮಯಾವಕಾಶ ನೀಡಿ ದಸರಾ ರಜೆಯ ನಂತರ ಎಸ್ ಎ 1 ಪರೀಕ್ಷಾ ಫಲಿತಾಂಶ ವಿಶ್ಲೇಷಣೆಯನ್ನು  ನಿರ್ವಹಿಸಲು ಅವಕಾಶ ಕಲ್ಪಿಸಿಕೊಡವಂತೆ ಅಧ್ಯಕ್ಷರು ಕ್ರಮ ವಹಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here