ಸುರಪುರ: ಭಾರತ ದೇಶ ಸ್ವಾತಂತ್ರ್ಯ ದೊರೆಯುವಲ್ಲಿ ವiಹಾತ್ಮ ಗಾಂಧಿಜಿಯವರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್ ಆವರಣದಲ್ಲಿ ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ,ನಾವು ಎಲ್ಲರು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ಮರೆಯುವಂತಿಲ್ಲ.ಅಲ್ಲದೆ ಇಂದು ಇಬ್ಬರು ಮಹನಿಯರ ಜಯಂತಿ ಆಚರಣೆ ಜೊತೆಗೆ ಸ್ವಾತಂತ್ರ್ಯ ಪೂರ್ವದಲ್ಲಿ 1924 ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಇಂದು ನಮ್ಮ ಕಾಂಗ್ರೇಸ್ ಪಕ್ಷದ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರ ನಿರ್ದೇಶನದಂತೆ ಇಂದು ಗಾಂಧಿ ಭಾರತ ಪಾದಯಾತ್ರೆ ಹಾಗೂ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಯಾದವ್ ಮಾತನಾಡಿ,ಬ್ರಿಟೀಷರನ್ನು ಈ ದೇಶ ದಿಂದ ತೊಲಗಿಸಲು ಮಹಾತ್ಮ ಗಾಂಧೀಜಿಯವರು ಅಹಿಂಸಾ ಮಾರ್ಗದ ಹೋರಾಟವನ್ನು ದೇಶದಾದ್ಯಂತ ನಡೆಸಿದರು.ಅದರಂತೆ ನಮ್ಮ ಕರ್ನಾಟಕಕ್ಕೂ ಗಾಂಧೀಜಿಯವರು ಭೇಟಿ ನೀಡಿದ್ದರು.1924ರ ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೇಶ್ ಸಮಾವೇಶವೂ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖವಾದ ಪಾತ್ರವಹಿಸಿತ್ತು.ಅಂತಹ ಅಧಿವೇಶನ ನಡೆದು ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಇಂದು ನಾಡಿನಾದ್ಯಂತ ಗಾಂಧಿ ಭಾರತ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾಜಿ ಪುರಸಭೆ ಸದಸ್ಯ ಅಹ್ಮದ್ ಪಠಾಣ್,ಮುಖಂಡರಾದ ಚಂದ್ರು ದನಕಾಯಿ ಮಾತನಾಡಿದರು.ಮುಖಂಡ ಮಾನಪ್ಪ ಸೂಗೂರ ನಿರೂಪಿಸಿ ಸ್ವಾಗತಿಸಿ,ವಂದಿಸಿದರು.ವೇದಿಕೆಯಲ್ಲಿ ರಾಜಾ ಲಕ್ಷ್ಮೀನಾರಾಯಣ ನಾಯಕ,ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ,ಶಕೀಲ್ ಅಹ್ಮದ್,ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ),ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ಬಸವರಾಜ ಜಮದರಖಾನಿ,ಶರಣು ದಂಡಿನ್,ಗುಂಡಪ್ಪ ಸೋಲಾಪುರ,ರಾಜಾ ವಾಸುದೇವ ನಾಯಕ,ರಾಜಾ ಸಂತೋಷ ನಾಯಕ,ರಾಜಾ ಸುಶಾಂತ ನಾಯಕ, ರಮೇಶ ದೊರೆ ಆಲ್ದಾಳ,ಅಬ್ದುಲ್ ಗಫೂರ ನಗನೂರಿ,ವೆಂಕಟೇಶ ಹೊಸ್ಮನಿ,ಗೋಪಾಲದಾಸ್ ಲಡ್ಡಾ,ಭಂಡಾರೆಪ್ಪ ನಾಟೇಕಾರ್,ಸುವರ್ಣ ಸಿದ್ರಾಮ ಎಲಿಗಾರ,ಲಕ್ಷ್ಮೀ ಮಲ್ಲು ಬಿಲ್ಲವ್,ಬೀರಲಿಂಗ ಬಾದ್ಯಾಪುರ,ಮರೆಪ್ಪ ದೇವಾಪುರ,ಹುಲಗಪ್ಪ ಪೂಜಾರಿ,ಬಸನಗೌಡ ದೇವಾಪುರ,ಹೈಯ್ಯಾಳಪ್ಪ ಕಕ್ಕೇರಾ,ದುರ್ಗಪ್ಪ ಗೋಗಿಕೇರಾ,ತಿಪ್ಪಣ್ಣ ಹುಣಸಗಿ,ಮಲ್ಲಣ್ಣ ಸಾಹುಕಾರ ನರಸಿಂಗಪೇಟ,ಶಾಂತಪ್ಪ ಮಲಗಲದಿನ್ನಿ,ಸುರೇಶ ತಂಬಾಕೆ,ದೊಡ್ಡ ದೇಸಾಯಿ ದೇವರಗೋನಾಲ,ರವಿಚಂದ್ರ ಸಾಹುಕಾರ ಆಲ್ದಾಳ,ಅಬ್ದುಲ್ ಮಾಜೀದ್,ಕಮ್ರುದ್ದಿನ್,ಜುಮ್ಮಣ್ಣ ಕೆಂಗುರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,ನೂರಾರು ಜನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣ ದಿಂದ ಪ್ರಮುಖ ಬೀದಿಗಳ ಮೂಲಕ ಕಾಂಗ್ರೆಸ್ ಕಚೇರಿ ವಸಂತ ಮಹಲ್ ಆವರಣದ ವರೆಗೆ ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರು ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ ನೀಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.