ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧೀಜಿ

0
26

ಶಹಾಬಾದ: ಮಹಾತ್ಮ ಗಾಂಧೀಜಿ ಸತ್ಯ, ಶಾಂತಿ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆದು ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ಚೇತನ ಎಂದು ತಹಸೀಲ್ದಾರ ಜಗದೀಶ ಚೌರ್ ಹೇಳಿದರು.

ಅವರು ಬುಧವಾರ ನಗರದ ತಹಸೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗಾಂಧೀ ಜಯಂತಿ ಹಾಗೂ ಲಾ¯ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ದೇಶವು ಈ ದಿನ ಇಬ್ಬರು ಮಹಾನ್ ವ್ಯಕ್ತಿಗಳಾದ ಮಹಾತ್ಮ ಗಾಂಧಿ ಹಾಗೂ ದಿವಂಗತ ಮಾಜಿ ಪ್ರಧಾನಿ ಲಾಲಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸುತ್ತಿದೆ. ಮಹಾತ್ಮಗಾಂಧಿಯವರು ಈ ದೇಶವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಿ ಸ್ವಾತಂತ್ರ್ಯ ತಂದು ಕೊಟ್ಟರು. ಸ್ವಾತಂತ್ರ್ಯದೊಂದಿಗೆ ಸ್ವಚ್ಛತಾ ಮಂತ್ರವನ್ನು ಸಹ ಉಚ್ಛರಿಸಿದರು.

ಅಲ್ಲದೇ ತಾವೇ ಶೌಚಾಲಯವನ್ನು ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾದರು ಎಂದು ಹೇಳಿದರು.ಅಲ್ಲದೇ ಲಾಲ್‍ಲಾಲಾಬಹಾದ್ದೂರ್ ಶಾಸ್ತ್ರಿ ಅವರು ಪ್ರಾಮಾಣಿಕ, ಸತ್ಯ ಇದನ್ನು ಮೈಗೂಡಿಸಿಕೊಂಡು ರಾಜಕೀಯ ಜೀವನದಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಂಡರು. ಇವರಂಥ ಆದರ್ಶ ವ್ಯಕ್ತಿಗಳನ್ನು ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಹಾಗೂ ಸ್ವಚ್ಛತೆಯ ಬಗ್ಗೆ ಕನಸನ್ನು ಕಂಡವರು ಗಾಂಧೀಜಿ. ಅವರ ಕನಸನ್ನು ನನಸು ಮಾಡಬೇಕಾದರೆ ನಮ್ಮ ಮನೆಗಳನ್ನಷ್ಟೇ ಅಲ್ಲದೇ ನಮ್ಮ ಸುತ್ತಮುತ್ತಲಿನ ಪರಿಸರ, ಗ್ರಾಮ ಹಾಗೂ ನಗರಗಳ ಸ್ವಚ್ಛತೆ ಕಾಪಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಕಚೇರಿಯ ಸಿಬ್ಬಂದಿ ವರ್ಗದವರು ಇದ್ದರು..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here