ಮಹಾರಾಷ್ಟ್ರ ರಾಜ್ಯಪಾಲರ ದ್ವಂದ್ವ ನೀತಿ; ಹಿರಿಯ ಪತ್ರಕರ್ತ ಅಜೀಜುಲ್ಲಾ ಸರಮಸ್ತ್

0
61

ಕಲಬುರಗಿ: ಮುಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನ ಮಾಡಿರುವ ರಾಮಗಿರಿ ಮಹಾರಾಜ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೆ ಮಹಾರಾಷ್ಟ್ರ ಸರ್ಕಾರವು ತನ್ನ ಸಂವಿಧಾನಿಕ ಜವಾಬ್ದಾರಿಯಿಂದ ಪಲಾಯನ ಮಾಡಿದೆ ಎಂದು ಮಹಮದಿ ಸೀರತ್ ಸಮಿತಿ ಕಲಬುರಗಿ ದಕ್ಷಿಣ ಅಧ್ಯಕ್ಷ ಹಿರಿಯ ಪತ್ರಕರ್ತ ಅಜೀಜುಲ್ಲಾ ಸರಮಸ್ತ್, ಅಭಿಪ್ರಾಯಪಟ್ಟರು.

ಮುಹಮ್ಮದ್ ಪೈಗಂಬರ್ ಅವರ ವಿರುದ್ದ ಅವಹೇಳನ ಮಾಡಿದ್ದ ರಾಮಗಿರಿ ಮಹಾರಾಜ್ ವಿರುದ್ಧ ಗುಲ್ಬರ್ಗಾ ದಕ್ಷಿಣದ ಮಹಮದಿ ಸೀರತ್ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರ್-ರಾಜ್ಯ ನಾತಿಯಾ, ಮುಶೈರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ರಾಜ್ಯದ ವಿವಿಧೆಡೆಗಳಲ್ಲಿ 67 ಎಫ್‌ಐಆರ್‌ಗಳನ್ನು ರಾಮಗಿರಿ ಮಹಾರಾಜ್ ವಿರುದ್ಧ ದಾಖಲಿಸಲಾಗಿದೆ ಎಂದು ಸರ್ಕಾರವೇ ಹೇಳಿದೆ. ಈ ಪ್ರಕರಣಗಳಾದರೂ ಕೂಡ, ರಾಮಗಿರಿ ಮಹಾರಾಜ್ ಅವರನ್ನು ಬಂಧಿಸಿಲ್ಲವೆಂದು ಅವರು ಹೇಳಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅವರು ಸಂವಿಧಾನಕ್ಕೆ ಪ್ರಮಾಣವಚನ ಸ್ವೀಕರಿಸಿ, ಮುಸ್ಲಿಂ ಸಮುದಾಯದ ಭಾವನೆಗಳನ್ನು ಧಕ್ಕೆ ತಂದಿರುವ ರಾಮಗಿರಿ ಮಹಾರಾಜ್ ರನ್ನು ರಕ್ಷಿಸುತ್ತಿದ್ದಾರೆ ಎಂದು ದುರಿದರು.

ಕರ್ನಾಟಕ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಡ ತರುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ರಾಜ್ಯಪಾಲರು ರಾಮಗಿರಿ ಮಹಾರಾಜ್ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ, ರಾಮಗಿರಿ ಮಹಾರಾಜ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.

ಈ ನಾತಿಯಾ ಮುಶೈರಾ ಕಾರ್ಯಕ್ರಮದ ಅಧ್ಯಕ್ಷತೆ ಪ್ರೊಫೆಸರ್ ಸೈಯದ್ ಶಾ ಮುಹಮ್ಮದ್ ಯೂಸುಫ್ ಹುಸೈನಿ ಅವರು ವಹಿಸಿದ್ದರು.

ನಯಾ ಸವೇರಾ ಸಂಘಟನೆಯ ಮುಖಂಡ ಮೋದಿನ್ ಪಟೇಲ್ ಅಣಬಿ ಸ್ವಾಗತಿಸಿದರು. ಆಲಂ ಪ್ರಭು ಪಾಟೀಲ್. ಹೈದರಾಬಾದ್‌ನ ದಬಸ್ತಾನ್ ಮಸ್ರೂರ್ ಅಧ್ಯಕ್ಷ ಖಾಜಿ ಅಜ್ಮತುಲ್ಲಾ ಜಾಫರಿ ನೂರಿ ಅಜ್ಮಿ ಅವರು ಪವಿತ್ರ ಕುರಾನ್ ಪಠಣದೊಂದಿಗೆ ಚಾಲನೆ ನೀಡಿದರು.

ಅಲಿ ಮಕ್ಬೂಲ್ ಖಾಜಿ ಅಜ್ಮತುಲ್ಲಾ ಜಾಫರಿ ನೂರಿ ಅಜ್ಮಿ ಜಹೂರ್ ಜಹೀರಾಬಾದಿ ಡಾ. ಖವಾಜಾ ಫರಿದುದ್ದೀನ್ ಸಾದಿಕ್ (ಹೈದರಾಬಾದ್) ಕವಿಗಳಾದ ನವೀದ್ ಅಂಜುಮ್ ಇದ್ರಿಸ್ ತಕ್ಸಿನ್ ಅಸ್ಮಾ ಆಲಂ ಜಾವೇದ್ ಇಕ್ಬಾಲ್ ಸಿದ್ದಿಬಾರಯ್ ಅಕ್ಬಾಲ್, ಹುಸೇನಿ ಸಬೀರ್ ಇಂಜಿನಿಯರ್ ಡಾ.ಸಖಿ ಸರ್ಮಸ್ತ್ ಇಸ್ಹಾಕ್ ಅಜೀಂ ಡಾ.ಸಬ್ರಿ ಡಾ.ಮಜೀದ್ ದಘಿ, ಡಾ.ಅಕ್ರಂ ನಕಾಶ್, ಹಾಗೂ ಮುಷೈರಾದ ಮೇಲ್ವಿಚಾರಕರಾದ ಪ್ರೊ.ಸೈಯದ್ ಷಾ ಮುಹಮ್ಮದ್ ಯೂಸುಫ್ ಹುಸೇನಿ, ಕಾಮಿಲ್ ಅವರು ನಾಟಿಯಾದಲ್ಲಿ ಪದಗಳನ್ನು ಹೇಳುವ ಸೌಭಾಗ್ಯವನ್ನು ಪಡೆದರು. ಮುಷೈರಾ ಉತ್ತಮ ರೀತಿಯಲ್ಲಿ ಆಡಳಿತಾತ್ಮಕ ಕರ್ತವ್ಯಗಳನ್ನು ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here