ಗಾಂಧೀಜಿಗೆ ಸತ್ಯಹರಿಶ್ಚಂದ್ರನ ಕಥೆಯೇ ಪ್ರೇರಣೆ

0
21

ಶಹಾಪುರ: ಮಹಾತ್ಮ ಗಾಂಧೀಜಿಯವರಿಗೆ ಈ ದೇಶದ ಮಕ್ಕಳಿಗೆ ಹಾಗೂ ಪುರಾತನ ಭಾರತೀಯ ರಾಜ್ಯ ಮತ್ತು ಸತ್ಯವಂತ ನಾಯಕರು ಆಗಿದ್ದ ಸತ್ಯ ಹರಿಶ್ಚಂದ್ರನ ಬದುಕಿನ ಕಥೆಯೆ ಪ್ರೇರಣೆಯಾಗಿತ್ತು ಎಂದು ಆರೋಗ್ಯ ಅಧಿಕಾರಿ ಮಲ್ಲಪ್ಪ ಕಾಂಬಳೆ ಹೇಳಿದರು.

ನಗರದ ಹೊರವಲಯದಲ್ಲಿರುವ ಜನನಿ ಪೂರ್ವ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಸಯೋಗದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಸವರಾಜ ಶಿನ್ನೂರ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಸತ್ಯಹರಿಶ್ಚಂದ್ರನ ಬದುಕು ಹಾಗೂ ನೀತಿ ಕಥೆಗಳನ್ನು ಹೇಳುವುದರ ಜೊತೆಗೆ ಮಾನವಿಯ ಮೌಲ್ಯಗಳನ್ನು ಬಿತ್ತಬೇಕು ಎಂದು ಸಲಹೆ ನೀಡಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶರಣು ಕಾಡಮಿಗೇರಿ ಮಾತನಾಡಿ ಮಕ್ಕಳಿಗೆ ಸಾಂಸ್ಕೃತಿಕ ಸಂಸ್ಕಾರ ಇತಿಹಾಸದ ಪರಂಪರೆ ಹಾಗೂ ದೇಶದ ನಾಡಿನ ಬಗ್ಗೆ ಮಹಾತ್ಮರ ಜೀವನದ ಆದರ್ಶಗಳು ಮಕ್ಕಳಿಗೆ ತಿಳಿಪಡಿಸಬೇಕು ಎಂದು ನುಡಿದರು.

ಈ ಸಮಾರಂಭದ ವೇದಿಕೆ ಮೇಲೆ ತಿಪ್ಪಣ್ಣ ಕ್ಯಾತನಾಳ, ಶಿಕ್ಷಕಿ ಲಕ್ಷ್ಮಿ ಶಕುಂತಲಾ ಜೊತೆಗೆ ಇತರರು ಉಪಸ್ಥಿತರಿದ್ದರು ನಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಮೌನೇಶ್ ಸ್ವಾಗತಿಸಿದರು, ಹುಲಿಗೆಪ್ಪ ನಿರೂಪಿಸಿ,ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here