ಕಲಬುರಗಿ: ಕರ್ನಾಟಕ ರಾಜ ಸಹಕಾರ ಮಹಾಮಂಡಳದಿಂದ ಅತ್ಯುತ್ತಮ ಸೇವಾ ಪ್ರಶಸ್ತಿ ಪಡೆದ ಆದರ್ಶ ನಗರದ ಕರ್ನಾಟಕ ಇನ್ಸ್ ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೆಜ್‌ಮೆಂಟ್ ಕಛೇರಿಯಲ್ಲಿ ಪ್ರಥಮವಾಗಿ ಆಗಮಿಸಿದ ಯಾದಗಿರ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ದರ್ಶನಾಪೂರವರಿಗೆ ಸನ್ಮಾನಿಸಲಾಯಿತು.
ಕರ್ನಾಟಕ ರಾಜ ಸಹಕಾರ ಮಹಾಮಂಡಳ ನಿ ಬೆಂಗಳೂರು ಇದರ 2023 2024 ನೇ ಸಾಲಿನ ಯಾದಗಿರಿ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟಕ್ಕೆ ರಾಜ್ಯ ಸಹಕಾರ ಮಹಾಮಂಡಳ ವತಿಯಿಂದ ಜಿಲ್ಲೆಯಲ್ಲಿ ಶಿಕ್ಷಣ ನಿಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಕಡ 90% ರಷ್ಟು ರಾಜ್ಯ ಸಹಕಾರ ಮಹಾಮಂಡಳಕ್ಕೆ ಯಾದಗಿರಿ ಜಿಲ್ಲಾ ಕೇಂದ್ರದಿಂದ ಉತ್ತಮವಾಗಿ ಶಿಕ್ಷಣ ನಿಧಿಯನ್ನು ಪಡೆಯುವ ಮುಖಾಂತರ ಯಾದಗಿರಿ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ಎಸ್ ದರ್ಶನಾಪೂರವರಿಗೆ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ರಾಜ್ಯದಲ್ಲಿಯ ಉತ್ತಮವಾಗಿ ಕೆಲಸ ಮಾಡುವ ಮುಖಾಂತರ 2023 2024ರ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ನಿಡಿ ಗೌರವಿಸಿದ ಪ್ರಥಮವಾಗಿ ಆಗಮಿಸಿದರುವದರಿಂದ ಕರ್ನಾಟಕ ಇನ್ಸ್ ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೆಜ್‌ಮೆಂಟ್ ಕಛೇರಿಯಲ್ಲಿ ಗೌರವ ಸನ್ಮಾನ ಮಾಡಿದರು.
ಇದೆ ಸಂದರ್ಭದಲ್ಲಿ ಸಹಕಾರಿ ಒಕ್ಕೂಟದ ಎಸ್ಟೇಟ್ ಅಧಿಕಾರಿಯಾದ ಲಕ್ಷ್ಮಿಕಾಂತ ಕಟ್ಟಿಮನಿ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಅರಣುಕುಮಾರ ಬಿ ಅರಸುರ ಜಿಲ್ಲಾ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶೈಲಾಜಾ ಚವ್ಹಾಣ ಎನ್ ಸಿ ಯು ಐ ಯೋಜನೆ ಅಧಿಕಾರಿಯಾದ ಎಸ್ ಜಿ ರಾಮಚಂದ್ರ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಮಂಜುಳಾ ಎಸ್ ಬಿರದಾರ ಕೆಂಚಪ್ಪ ನಗನೂರ ನೀಲಕಂಠ ಕಾಳೆ ವೈಜನಾಥ ಪಾಟೀಲ್ ತುಮಕೂರು .ರೇಖಾ ಗಾಯಕವಾಡ್ ಸಹಕಾರಿ ಶಿಕ್ಷಕರಾದ ಕಲ್ಪನ ಅನೇಕರು ಇದ್ದರು.