ಸುರಪುರ: ನಗರದಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಿರ್ಮಿಸ ಬೇಕು,ಯಾವುದೇ ಕಾರಣಕ್ಕೂ ಕಾಮಗಾರಿ ಕಳಪೆಯಾಗದಂತೆ ನಿಗಾವಹಿಸಿ,ಒಂದು ವೇಳೆ ಕಾಮಗಾರಿ ಕಳಪೆ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
2023-24ನೇ ಸಾಲಿನ ಕೆಕೆಆರ್‍ಡಿಬಿ ಅನುದಾನದಲ್ಲಿ ಸುರಪುರ ನಗರದ ಕೆಂಭಾವಿ ರಸ್ತೆಯಲ್ಲಿನ ಸಿದ್ದಾಪುರ ಹನುಮಾನ ದೇವಸ್ಥಾನದ ಬಳಿಯ ಸಿಸಿ ರಸ್ತೆ ತಡೆಗೋಡೆ ಮತ್ತು ಬಾಕ್ಸ್ ಕನ್ವರ್ಟ್ ನಿರ್ಮಾಣ 2 ಕೋಟಿ ರೂಪಾಯಿ ಅನುದಾನದ ಕಾಮಗಾರಿ. ಕೆಕೆಆರ್‍ಡಿಬಿ ಯೋಜನೆಯ 1 ಕೋಟಿ ಅನುದಾನದಲ್ಲಿ ಸುರಪುರ ನಗರಸಭೆಯಿಂದ ರಂಗಂಪೇಟೆಯಾಟೋ ನಿಲ್ದಾಣದ ವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ.2ಕೋಟಿ ಅನುದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಟೈಲರ್ ಮಂಜಿಲ್ ವರೆಗಿನ ಸಿಸಿ ರಸ್ತೆ ನಿರ್ಮಾಣ,ಪಾಳದಕೇರಿಯಿಂದ ವೆಂಕಟಾಪುರ ವರೆಗೆ ಸಿಸಿ ರಸ್ತೆ ನಿರ್ಮಾಣ. 80 ಲಕ್ಷ ರೂಪಾಯಿ ಅನುದಾನದಲ್ಲಿ ವಾಗಣಗೇರಾ ಗ್ರಾಮದ ಬಳಿಯ ಅರಸಿಕೆರೆಯ ಸಮಗ್ರ ಅಭಿವೃಧ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರ.ಕಾರ್ಯದರ್ಶಿ ವಿಠ್ಠಲ್ ಯಾದವ್,ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ,ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಶಕೀಲ್ ಅಹ್ಮದ್,ಮಲ್ಲಣ್ಣ ಸಾಹುಕಾರ ನರಸಿಂಗಪೇಟ,ನಿಂಗರಾಜ ಬಾಚಿಮಟ್ಟಿ,ನಾಸೀರ ಕುಂಡಾಲೆ,ಶಿವಕುಮಾರ ಕಟ್ಟಿಮನಿ,ಮಹ್ಮದ್ ಗೌಸ್ ಕಿಣ್ಣಿ ಸೇರಿದಂತೆ ನಗರಸಭೆ ಅನೇಕ ಸದಸ್ಯರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತರರು ಭಾಗವಹಿಸಿದ್ದರು.