ಚಿಂಚೋಳಿ: 12 ನೆಯ ಶತಮಾನದ ಬಸವಾದಿ ಶರಣರು ಕಾಯಕದಲ್ಲಿನ ಅಸಮಾನತೆಯನ್ನು ತೊಡೆದು ಹಾಕಿ, ಸರ್ವ ಕಾಯಕ ವರ್ಗದವರಿಗೂ ಸಮಾನವಾದ ಗೌರವವನ್ನು ನೀಡಿದ್ದರೆoದು ಸೇಡoನ ನರ್ಮದಾದೇವಿ ಗಿಲ್ಡ ಮಹಿಳಾ ಪದವಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಪ್ರೊ. ಆರತಿ ಕಡಗಂಚಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬುಧವಾರ ಇಲ್ಲಿನ ಮಾತೃ ಮಂದಿರ ಪ್ರೌಢ ಶಾಲೆಯಲ್ಲಿ, ಸುಲೇಪೇಟದ ಲಿಂಗೈಕ್ಯ ಜಗದೇವಿ ಹನುಮಂತಪ್ಪ ಬೇಮಳಗಿ ಸ್ಮರಣಾರ್ಥ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಚಿಂಚೋಳಿ ತಾಲೂಕ ವತಿಯಿಂದ ಆಯೋಜಿಸಿದ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಕಾಯಕದಲ್ಲಿ ಮೇಲು ಕೀಳು ಎಂಬುವುದಿಲ್ಲ. ಆಸೆ ಎಂಬುದು ಅರಸಂಗಲ್ಲದೆ ಶಿವ ಭಕ್ತರಿಗುoಟೆ ಅಯ್ಯ ? ರೋಷವೆಂಬುದು ಯಮದೂತರಿದಲ್ಲದೆ ಅಜಾತರಿಗುoಟೆ ಅಯ್ಯ? ಈಸಕ್ಕಿ ಆಸೆ ನಿಮಗೆ ? ಈಶ್ವರನೊಪ್ಪ ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ ಎನ್ನುವ ಆಯ್ದಕ್ಕಿ ಲಕ್ಕಮ್ಮನ ವಚನ, ಲೋಕದ ಡೊಂಕು ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಹಾಗೂ ದಯವಿಲ್ಲದ ಧರ್ಮ ಅದೇವುದಯ್ಯ, ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ…. ಎನ್ನುವ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ ಮಾತನಾಡಿದರು.
ಕಾಯಕದಲ್ಲಿ ನಿರತನಾದೊಡೆ ಗುರು ದರ್ಶನವಾದರೂ ಮರೆಯಬೇಕು, ಲಿಂಗ ಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದ್ದಡೆಯೂ ಹಂಗು ಹರಿಯಬೇಕು, ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯುತ್ತಾದಡೆಯೂ ಕಾಯಕದೊಳಗು ಎನ್ನುವ ಆಯ್ದಕ್ಕಿ ಮಾರಯ್ಯನ ವಚನದ ಅರ್ಥವನ್ನು ವಿವರಿಸಿ, ಧನಾತ್ಮಕ ಚಿಂತನೆಗಳು ಇಂದಿನ ಅಗತ್ಯವಾಗಿವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಚಿಂಚೋಳಿ ಪುರಸಭೆಯ ಅಧ್ಯಕ್ಷರಾದ ಆನಂದ್ ಟೈಗರ್, ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಅ ಭಾ ಶ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಪಾಲಾಮೂರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅ ಭಾ ವೀ ಶೈ ಮಹಾಸಭಾ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ, ದತ್ತಿ ಸ್ಥಾಪಕರು ಹಣಮಂತಪ್ಪ ಬೇಮಳಗಿ, ನಿವೃತ್ತ ಮು ಗು ಮಹಿಪಾಲರೆಡ್ಡಿ ಪಾಟೀಲ, ನಾಗಪ್ಪ ಮೈಲ್ವಾರ ಮು ಗು, ಹಾಸ್ಯ ಕಲಾವಿದ ರಾಚಯ್ಯ ಸ್ವಾಮಿ ಖಾನಾಪುರ, ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಸುಜಾತಾದೇವಿ ನಿರ್ಣೀ, ಋಷಿಕೇಶ ದಂತಕಾಳೆ ಕಲಬುರಗಿ, ರಾಜಶೇಖರ ಕೊಳ್ಳುರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು. ಶರಣಯ್ಯ ಸ್ವಾಮಿ ಐನೂಲಿ ಹಾಗೂ ಗುರುರಾಜ ಜೋಶಿಯವರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಹೇಶ ಬೇಮಳಗಿ ಸ್ವಾಗತಿಸಿದರು.
ಶರಣ ಸಾಹಿತ್ಯ ಪರಿಷತನ ಅಧ್ಯಕ್ಷ ಬಸವರಾಜ ಐನೋಳಿ ನಿರೂಪಿಸಿ ವಂದಿಸಿದರು.