ಯುವ ಸ್ಪಂದನ ಯೋಜನೆಯ ಸದುಪಯೋಗಪಡಿಸಿಕೊಳ್ಳಿ

0
116

ಕಲಬುರಗಿ: 15ರಿಂದ 30 ವರ್ಷದವರೆಗಿನ ಯುವಕರ ಜೀವನ ನಿರ್ಮಾಣಕ್ಕಾಗಿ ಅವರಿಗೆ ಸೂಕ್ತ ಮಾರ್ಗದರ್ಶನ, ಕೌಶಲಗಳನ್ನು ನೀಡಿ, ಸದೃಢ ಮಾನವ ಸಂಪನ್ಮೂಲವನ್ನಾಗಿಸುವ ಸರ್ಕಾರದ ಮಹತ್ವಕಾಂಕ್ಷೆಯ ’ಯುವ ಸ್ವಂದನ’ಯ ಬಗ್ಗೆ ಎಲ್ಲಾ ಯುವಕರು ತಿಳಿದುಕಂಡು ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಯವ ಪರಿವರ್ತಕಿ ಆಶಾ ಭಾಗವಾಲೆ ಕರೆ ನೀಡಿದರು.

ಅವರು ಸೇಡಂ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನಿಮ್ಹಾನ್ಸ್ ಸಹಯೋಗದ ಯೋಜನೆಯಾದ ’ಯುವ ಸ್ವಂದನ ಅರಿವು ಕಾರ್ಯಕ್ರಮ’ದಲ್ಲಿ ಮಾತನಾಡುತ್ತಿದ್ದರು. ಯುವ ಸ್ಪಂದನ ಯೋಜನೆಯು ಸಂಬಂಧಗಳು, ಸುರಕ್ಷತೆ, ಸಂವಹನೆ, ಲಿಂಗ ಲೈಂಗಿಕತೆ, ಮಾರ್ಗದರ್ಶನ, ಶಿಕ್ಷಣ, ಬೆಳವಣಿಗೆ, ಆರೋಗ್ಯ ಜೀವನಶೈಲಿ, ಸಬಲೀಕರಣ, ಭಾವನೆಗಳಿಗೆ ಸಂಬಂಧಿದಂತೆ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ. ಇದು ವೈಕ್ತಿಕೆ ಹಾಗೂ ದೂರವಾಣಿ ಬೆಂಬಲ, ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ, ಸಮಾಲೋಚನಾ ಸೇವೆಗಳು, ವ್ಯಕ್ತಿತ್ವ ಬೆಳವಣಿಗೆ, ಭಾವನಾತ್ಮಕ ನಿಯಂತ್ರಣ, ಬಿಕ್ಕಟ್ಟು ನಿರ್ವಹಣೆ, ಸಂವಹನದ ಮುಂತದ ಸೇವೆಗಳು ಉಚಿತವಾಗಿ ನೀಡಲಾಗುತ್ತದೆ. ಇದು ದೇಶದಲ್ಲಿಯೇ ಯುವಜನರಿಗಾಗಿ ಅನುಷ್ಠಾನಗೊಂಡ ಮೊದಲ ಕಾರ್ಯಕ್ರಮ ಇದಾಗಿದೆಯೆಂದು ವಿವರಿಸಿದರು.

Contact Your\'s Advertisement; 9902492681

ಕಾಲೇಜಿನ ಪ್ರಾಂಶುಪಾಲ ಬನ್ಸಿಲಾಲ್ ಚವ್ಹಾಣ ಮಾತನಾಡಿ, ಸರ್ಕಾರ ಯುವ ಜನತೆಗಾಗಿ ಈ ಯೋಜನೆ ಜಾರಿಗೊಳಿಸಿದ್ದು, ಇದರ ಬಗ್ಗೆ ನಿರ್ಲಕ್ಷ ವಹಿಸದೆ ಉಪಯೋಗ ಪಡೆದುಕೊಳ್ಳಬೇಕೆಂದು ನುಡಿದರು.

ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಮಾತನಾಡಿ, ಇಂದಿನ ಯುವಕರು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅಮೂಲ್ಯವಾದ ಮಾನವ ಸಂಪನ್ಮೂಲವನ್ನಾಗಿಸುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಕೇವಲ ವಿಷಯದ ಜ್ಞಾನ ಪಡೆದರೆ ಸಾಲದು. ಬದಲಿಗೆ ಪಡೆದ ಜ್ಞಾನವನ್ನು ಕಾರ್ಯರೂಪದಲ್ಲಿ ತರುವ ಕೌಶಲಗಳನ್ನು ಅಳವಡಿಸಿಕೊಂಡರೆ, ಸ್ವಾವಲಂಬನೆಯುತವಾದ ಜೀವನ ಸಾಗಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಂಗಾಧರ ಕಣ್ಣಿ, ಶ್ರೀಶೈಲಪ್ಪ ಬೋನಾಳ್, ಸಂಜೀವಪ್ಪ ಯಾಧವ, ಡಾ.ಸಿದ್ದಲಿಂಗ ಶಖಾಪೂರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here