ಕಲಬುರಗಿ: ಕಮಲಾಪೂರ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಿರ್ಮಲಾ ವೀರಭದ್ರಪ್ಪ ದೇಸಾಯಿ ಇವರ ವಯೋನಿವೃತ್ತಿ ನಿಮಿತ್ಯ ಬಿಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.
ಕಾಳಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಧ್ಯಕ್ಷ ಶರಣಗೌಡ ಪಾಟೀಲ, ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ ಭಂಡೆ, ಅಮರಯ್ಯ ಕುಮಸಿ, ನಂದಲಾಲ್ ಕಟಕೆ, ಸುನಿತಾ ಹೆಚ್.ಎಂ, ಶಾರದಾ, ಹಣಮಂತ ಸಿಆರ್ಪಿ, ಲಕ್ಷ್ಮೀ, ಅಕ್ಕನಾಗಮ್ಮ ಸೇರಿದಂತೆ ಇತರರು ಇದ್ದರು.