ಆಳಂದ: ಬಾಯಿಂದ ಬಾಯಿಗೆ ಹರಿದು ಬಂದ ಜನಪದರು ಕಟ್ಟಿದ ಸಾಹಿತ್ಯವೇ ಜನಪದ ಸಾಹಿತ್ಯವಾಗಿದೆ ಎಂದು ಮಾದನ ಹಿಪ್ಪರ್ಗಿಯ ಅಭಿನವ ಶಿವಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ದರ್ಗಾ ಶಿರೂರ ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ವೀರಂತೇಶ್ವರ ಸಂಗೀತ ಸಂಸ್ಥೆ ಬಿಲಗುಂದಿ ಜಂಟಿಯಾಗಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಜಾನಪದ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಜಾನಪದ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವಿದೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಜಾನಪದ ಸಾಹಿತ್ಯ ಸರಳ ರೂಪದಲ್ಲಿ ಎಲ್ಲರಿಗೂ ದೊರೆಯುತ್ತದೆ. ಇತ್ತೀಚಿಗೆ ಸಿನಿಮಾ ರಂಗದವರು ಕೂಡಾ ಜಾನಪದ ಸಾಹಿತ್ಯಕ್ಕೆ ಮಾರು ಹೋಗಿದ್ದಾರೆ ಹೀಗಾಗಿ ಅದು ಇಂದು ಬಲಿಷ್ಟವಾಗಿ ಗುರುತಿಸಿಕೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಂತೇಶ್ವರ ಶಿವಾಚಾರ್ಯರು, ಮಹಾದೇವಿ ಘಂಟೆ, ಪರಮೇಶ್ವರ ಘಂಟೆ, ಶ್ರೀಶೈಲ ಘಂಟೆ, ವಿಠ್ಠಲರಾವ ಪಾಟೀಲ, ಸಿದ್ದಾರಾಮ ಪಾಟೀಲ, ಶಿವಲಿಂಗ ಘಂಟೆ, ಈಶ್ವರಪ್ಪ ಘಂಟೆ, ಅಪ್ಪಾರಾವ ಪಾಟೀಲ, ಕೈಲಾಸಯ್ಯ ಸ್ವಾಮಿ, ಪ್ರಕಾಶ ಮರಬ, ದಸ್ತಗೀರ ಜಮಾದಾರ, ಸಂಘದ ಅಧ್ಯಕ್ಷ ಹಣಮಂತರಾವ ಬೆಳಮಗಿ, ಕಾರ್ಯದರ್ಶಿ ಶಾಂತಬಾಯಿ ಮಠ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಪ್ರಶಾಂತಕುಮಾರ ಕಲಬುರಗಿ, ಬಾಬುರಾವ ಕೋಬಾಳ, ಗುರುಶಾಂತಪ್ಪ ಕುಂಬಾರ, ಮಹಾಂತಪ್ಪ ಮಂದೇವಾಲ, ರಾಜಕುಮಾರ ಮಾದನ ಹಿಪ್ಪರ್ಗಾ, ವೆಂಕಟೇಶ ಆಳಂದ, ಶಿವಶರಣಯ್ಯ ಬೀದಿಮನಿ, ಬಲಭೀಮ ನೆಲೋಗಿ, ಸ್ವಾತಿ ಕಲಬುರಗಿ, ಚೇತನ ಕೋಬಾಳ, ವೀರಭದ್ರಯ್ಯ ಜಿ ಎಸ್, ಶಾಂತಮಲ್ಲಪ್ಪ ಬಿರಾದಾರ, ಆನಂದರಾವ ಬಟ್ಟರಕಿ, ಇಸ್ಮಾಯಿಲಸಾಬ್ ಲದಾಫ್, ರಾಚಪ್ಪ ಜಿಡಗಿ, ಬಾಬುರಾವ ಪಾಟೀಲ, ಸಿದ್ರಾಮಪ್ಪ ನಿಂಬಾಜಿ, ಭೀಮಶ್ಯಾ ಭಕರೆ, ಭೀಮಾಶಂಕರ ಘಂಟೆ, ಸೇರಿದಂತೆ ಹಲವಾರು ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು.