ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯಲ್ಲಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ 18ನೇ ಕಂತು ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರದ ವಿಕ್ಷಣೆ ಹಾಗೂ ಮಾದರಿ ದ್ವೀದಳ ಧಾನ್ಯಗಳ ಗ್ರಾಮ ಯೋಜನೆ ಅಡಿಯಲ್ಲಿ ಫಲಾನುಭವಿ ರೈತರಿಗೆ ಪಲ್ಸ್ ಮ್ಯಾಜಿಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಾರಂಭದಲ್ಲಿ ಸಂಜೀವ್‌ಕುಮಾರ್ ಪಾಟೀಲ್ ತಾಂತ್ರಿಕ ಅಧಿಕಾರಿರವರು ಅತಿಥಿ ಗಣ್ಯರನ್ನು ವೇದಿಕೆಗೆ ಸ್ವಾಗತಿಸಿದರು ಹಾಗೂ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಕೇಂದ್ರದ ಮುಖ್ಯಸ್ಥರಾದ ಡಾ.ಪಿ.ವಾಸುದೇವ ನಾಯ್ಕ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿ, ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಬಹುಮುಖ್ಯವಾದದ್ದು ಆದ್ದರಿಂದ ದೇಶದ ಪ್ರಧಾನಿಯವರು ರೈತರ ಏಳಿಗೆಗಾಗಿ 18ನೇ ಕಂತಿನ ಹಣ ಬಿಡುಗಡೆ ಮಾಡುತ್ತಿರುವುದು ಒಂದು ಸಂತಸದ ವಿಚಾರವೆಂದು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಾ. ಚೇತನ್, ಟಿ. ತೋಟಗಾರಿಕೆ ವಿಜ್ಞಾನಿ, ಮಾದರಿ ದ್ವಿದಳ ಧಾನ್ಯಗಳ ಗ್ರಾಮ ಯೋಜನೆಯ ಉದ್ದೇಶಗಳನ್ನು ತಿಳಿಸುತ್ತಾ ಮತ್ತು ಅದರ ಸದುಪಯೋಗಗಳನ್ನು ಗ್ರಾಮದ ರೈತರು ಪಡೆಯಬೇಕೆಂದು ತಿಳಿಸಿದರು. ತದನಂತರ ಡಾ.ಮಲ್ಲಪ್ಪ ವಿಜ್ಞಾನಿ (ಬೇಸಾಯಶಾಸ್ತ್ರ) ದ್ವಿದಳ ಮತ್ತು ಎಣ್ಣೆಕಾಳು ಬೆಳೆಗಳ ಸಮಗ್ರ ನಿರ್ವಹಣೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಅನೂಸೂಯ ಹೂಗಾರ ಉಪ ಕೃಷಿ ನಿರ್ದೆಶಕರು ಜಿಲ್ಲೆ ಇವರು ಕೃಷಿ ಇಲಾಖೆಯ ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಎಲ್ಲ ರೈತರು ಅದರ ಸದುಪಯೋಗ ಪಡೆಯಬೇಕೆಂದು ಮನವರಿಕೆ ಮಾಡಿಕೊಟ್ಟರು. ಇನ್ನೋರ್ವ ಅಥಿತಿಗಳಾದ ಸಿದ್ದಲಿಂಗಯ್ಯಾ ಹೀರೆಮಠ ಅಧ್ಯಕ್ಷರು ಗ್ರಾಮ ಪಂಚಾಯತ್ ದೇಸಣಗಿ ಇವರು ರೈತರ ಏಳಿಗೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ತದನಂತರ ಫಲಾನಭವಿ ರೈತರಿಗೆ ಪಲ್ಸ್ ಮ್ಯಾಜಿಕ್ ವಿತರಿಸಿದರು. ಕಾರ್ಯಕ್ರಮದಲ್ಲಿ ಭಾಗಣ್ಣ ದೇಸಾಯಿ ಎಸ್ ಡಿ ಎಮ್ ಸಿ ಅಧ್ಯಕ್ಷರು ದೇಸಣಗಿ ಗ್ರಾಮ, ಎನ್ ಆರ್ ಎಲ್ ಎಮ್ ಸಂಯೋಜಕರಾದ ಅಶ್ವಿನಿ, ಜೇರಟಗಿ ರೈತ ಉತ್ದಾದಕ ಸಂಸ್ತೆಯ ಸಿಇಒ ಶರಣಬಸಪ್ಪ ನಾಗಾವಿ, ತಾಲ್ಲೂಕಿನ ಕೃಷಿ ಸಖಿಯರು, ವಿವಿಧÀ ಗ್ರಾಮಗಳ ರೈತರು ಮತ್ತು ಯುವಕರು, ಮತ್ತು ತಾಂತ್ರಿಕೇತರ ಸಿಬ್ಬಂದಿಗಳು ಇದಕ್ಕೆ ಸಾಕ್ಷಿಯಾಗಿದ್ದರು ಕೊನೆಯಲ್ಲಿ ಡಾ. ಚಂದ್ರಕಾಂತ ವಿಜ್ಞಾನಿ (ಮಣ್ಣು ವಿಜ್ಞಾನ) ವಂದನಾರ್ಪಣೆ ಸಲ್ಲಿಸಿದರು.