ಸುರಪುರ: ತಾಲೂಕಿನ ಆಲ್ದಾಳ ಗ್ರಾಮದ ಮಹರ್ಷಿ ವಾಲ್ಮೀಕಿ ನಾಯಕ ಯುವಕ ಸಂಘದ ವತಿಯಿಂದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹಣಮಂತ್ರಾಯ ಮುದನೂರು ಮಾತನಾಡಿ ವಾಲ್ಮೀಕಿ ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬಹಳಷ್ಟು ಹಿಂದುಳಿದಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಸಮಾಜವನ್ನು ಬಲಿಷ್ಠಗೊಳಿಸಲು ಕರೆ ನೀಡಿದರು, ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಕಾರಣ ಸಮುದಾಯದ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಹಾಗೂ ಸರಕಾರದ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಜಾಗೃತರಾಗಿ ಅವುಗಳ ಸೌಲಭ್ಯಗಳ ಸದುಪಯೋಗ ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಮುಂದುವರೆಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ರಾಜಗೋಪಾಲ ನಾಯಕ, ಖಜಾಂಚಿ ಬಸಪ್ಪ ಇಟಗಿ, ಗ್ರಾ ಪಂ ಅಧ್ಯಕ್ಷ ವೈಜನಾಥ ಸಾಹುಕಾರ, ಸದಸ್ಯ ಲಾಡ್ಲೆ ಪಟೇಲ, ಊರಿನ ಪ್ರಮುಖರಾದ ರವಿಚಂದ್ರ ಹುದ್ದಾರ ಸಾಹುಕಾರ, ದುರಗಪ್ಪ ಯಳಮೇಲಿ, ಬಸಪ್ಪ ಜಂಬಲದಿನ್ನಿ, ಭೀಮಣ್ಣ ದೊರೆ, ಕೃಷ್ಟಪ್ಪ ದೊರೆ, ರಾಜಶೇಖರ ನಾಯಕ, ಪ್ರೌಢಶಾಲೆಯ ಪ್ರ ಗು ರಾಜು ಬಿತ್ತಿಕೊಪ್ಪದ ಹಾಗೂ ಇತರರಿದ್ದರು.