ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಳ್ಳಲು ಬಡಿಗೇರ ಕರೆ

0
79

ಕಲಬುರಗಿ: ಇಂದು ಚಿಂಚೋಳಿಯ ಹೈ. ಕ. ಶಿ. ಸಂಸ್ಥೆಯ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ದಲ್ಲಿ.  ಬಿ. ಎ/ಬಿ.ಕಾಂ 3 ಮತ್ತು 5ನೆಯ ಸೆಮಿಸ್ಟರ್ ವಿದ್ಯಾರ್ಥಿಗಳಿಗಳಿಂದ ಬಿ. ಎ/ಬಿ.ಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸುರೇಶ್ ಬಡಿಗೇರ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು ಹಾಗೂ ಸದಸ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು  ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು “ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ  ಶಿಸ್ತು ಮತ್ತು ಶಿಕ್ಷಕ  ಶಿಕ್ಷಣದ ಬಗ್ಗೆ ಗೌರವ ಬೆಳೆಸಿಕೊಳ್ಳಲು ಕರೆ ನೀಡಿದರು. ಈ ಸಂದರ್ಭದಲ್ಲಿ  ಇತ್ತೀಚೆಗೆ ನಡೆದ ಗುಲಬರ್ಗಾ ವಿಶ್ವ ವಿದ್ಯಾಲಯದ ಅಂತರ್ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ ದಲ್ಲಿ  ಮಹಾ ವಿದ್ಯಾಲಯದ 5ನೆಯ ಸೆಮಿಸ್ಟರ್ ವಿದ್ಯಾರ್ಥಿನಿ ಕುಮಾರಿ ಅಂಕಿತಾ  ಗುಂಡು ಎಸೆತ ದಲ್ಲಿ ದ್ವಿತೀಯ ಸ್ಥಾನ ಮತ್ತು ಚಕ್ರ ಎಸೆತ ದಲ್ಲಿ ನಾಲ್ಕನೆಯ ಸ್ಥಾನ ಪಡೆಯದುದ್ದಕ್ಕೆ ಮತ್ತು ಕ್ರೀಡಾ ನಿರ್ದೇಶಕರು ಅವರಿಗೆ ಸನ್ಮಾನಿಸಲಾಯಿತು.

Contact Your\'s Advertisement; 9902492681

ಪ್ರಾಚಾರ್ಯರು ಡಾ ಶ್ರೀಶೈಲ ನಾಗರಾಳ ಅವರು ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಜೀವನದ ಮೌಲ್ಯಗಳನ್ನು ಕುರಿತ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ  ಸಿ ವಿ ಕಲಬುರ್ಗಿ ಮುಖ್ಯಸ್ಥರು ಗ್ರಾಮೀಣ ಅಭಿವೃದ್ಧಿ ಮತ್ತು ಮಹಾವಿದ್ಯಾಲಯದ  NAAC  Cell ನ ಸಂಯೋಜಕರು, ಪ್ರೊ  ಶಿವರಾಜ ಜಿ. ಮಠ ಮುಖ್ಯಸ್ಥರು ಇತಿಹಾಸ ವಿಭಾಗ  ಮತ್ತು ರಾ. ಸೇ. ಯೋ. ಅಧಿಕಾರಿಗಳು. ಡಾ ಮಾಣಿಕಮ್ಮ ಸುಲ್ತಾನಪುರೆ ಮುಖ್ಯಸ್ಥರು ಸಮಾಜಶಾಸ್ತ್ರ ವಿಭಾಗ ಮತ್ತು ಮಹಾವಿದ್ಯಾಲಯದ  IQAC Cell  ನ ಸಂಯೋಜಕರು. ಡಾ ಸಿದ್ದಣ್ಣ ಕೊಳ್ಳಿ ಸಹಾಯಕ ಕನ್ನಡ ಪ್ರಾಧ್ಯಾಪಕರು. ಆಂತರಿಕ ಕಿರು ಪರೀಕ್ಷೆ  ಸಂಯೋಜಕರು  ಡಾ ಲಕ್ಷ್ಮಣ ಟಿ ರಾಠೋಡ ಮುಖ್ಯಸ್ಥರು ವಾಣಿಜ್ಯವಿಭಾಗ ಮತ್ತು 2019-20 ನೇ ಸಾಲಿನ ವಿದ್ಯಾರ್ಥಿ ಸಂಘದ ಸಲಹೆಗಾರರು  ಇದ್ದರು  ತ್ರತೀಯ ಮತ್ತು ಐದನೆಯ  ಸೆಮಿಸ್ಟರ್ ವಿದ್ಯಾರ್ಥಿಗಳಳು

ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಾಣಿಕೆ ನೀಡಿ ಸ್ವಾಗತ ಕೋರಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here