ನೇಕಾರ ಸಮುದಾಯದ ನ್ಯಾಯವಾದಿಗಳ ಸಭೆ

0
42

ಕಲಬುರಗಿ: ಜಿಲ್ಲಾ ನೇಕಾರರ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರಾದ ಚಂದ್ರಶೇಖರ್ ಸುಲ್ತಾನಪೂರ ನೇತೃತ್ವದಲ್ಲಿ ನಗರದ ನ್ಯಾಯಲಯದ ಹೊಸ ವಕೀಲರ ಸಂಕೀರ್ಣದಲ್ಲಿ ನೇಕಾರ ಸಮುದಾಯದ ನ್ಯಾಯವಾದಿಗಳ ಸಭೆ ಜರುಗಿತು.

ಸಭೆಯಲ್ಲಿ ಮಾತನಾಡಿದ ಅವರು ನೇಕಾರರ ಸಂಘಟಿತ ಶಕ್ತಿ ಒಗ್ಗೂಡಿಸಿ, ನವರಾತ್ರಿ ಈ ಸಂದರ್ಭದಲ್ಲಿ ಹೊಸ ಇತಿಹಾಸಕ್ಕೆ ಮುನ್ನಡಿ ಬರೆಯಬೇಕು ಎನ್ನುವ ಅಭಿಲಾಷೆ ಉಂಟಾಗಿದೆ, 30 ವರ್ಷಗಳ ಕಾಲ ಸಮಾಜ ಸೇವೆ ಮಾಡಿದ್ದೇನೆ, ಇದರ ಲಾಭ ನಮ್ಮ ಸಮುದಾಯಕ್ಕೆ ಆಗಲೇಬೇಕು, ಒಂದು ಕೋಟಿ ರಸ್ತೆ ಅಭಿವೃದ್ಧಿ ಯೋಜನೆ ದೇವರ ದಾಸಿಮಯ್ಯ ನಗರಕ್ಕೆ ದೊರಕಿಸಿದ್ದೇನೆ, ಅದೇ ರೀತಿಯಲ್ಲಿ ಒಂದು ನೂತನ ಸಮುದಾಯದ ಭವನಕ್ಕೆ ಪ್ರಯತ್ನ ಮಾಡುತ್ತಿದ್ದೇನೆ ಅದು ಕೂಡಾ ಸ್ವಲ್ಪವೇ ದಿನಗಳಲ್ಲಿ ಸಾಕಾರ ವಾಗಲಿದೆ ಎಂದು ತಿಳಿಸಿದರು,

Contact Your\'s Advertisement; 9902492681

ಇನ್ನೊಂದು ಅಚಲ ಇಚ್ಛೆ, ನಮ್ಮ ಸಮಾಜಕ್ಕೆ ಹೊಂದಿಕೊಂಡ ಸರಕಾರಿ ಜಮೀನು 2 ಎಕರೆ ನಮ್ಮ ಧರ್ಮ ಗುರು ಶ್ರೀ ದಾಸಿಮಯ್ಯ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಪಡೆದುಕೊಂಡು, ಉಳಿದ 11 ಎಕರೆ ಭೂಮಿಯನ್ನು ಕಾನೂನಾತ್ಮಕವಾಗಿ ನೋಂದಣಿ ಗೊಳಿಸಿ, ನಮ್ಮ ಸಮುದಾಯದ ಒಂದು ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯ ಹುಟ್ಟು ಹಾಕಲು ನಿಮ್ಮಂತಹ ನಿಷ್ಠಾವಂತ ಸೇವಕರ ಸಮಿತಿ ರಚಿಸಬೇಕೆನ್ನುವ ನಿರ್ಣಯ ಸಮಾಜ ತೆಗೆದುಕೊಳ್ಳುವ ನಿರ್ಧಾರಕ್ಕೆ ಬರಲು ಕೋರಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ವಕೀಲರಾದ ರಾಜಗೋಪಾಲ ಭಂಡಾರಿ, ಸಂತೋಷ ಗುರುಮೀಟಕಲ, ನ್ಯಾಯವಾದಿ ಜೇನವೆರಿ ವಿನೋದ ಕುಮಾರ, ನೇಕಾರ ಸಮಾಜದ ವಕೀಲರು ಮತ್ತು ಡಾ. ಸಾಧಿಕ ಶಾ, ಪತ್ರಿಕಾ ಛಾಯಾಗ್ರಾಹಕ ರಾಜು ಕೋಷ್ಟಿ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here