ಶಹಾಬಾದ: ತಮ್ಮ ದೂರದೃಷ್ಟಿ ಮತ್ತು ಉತ್ಸಾಹದಿಂದ ಭಾರತವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ವ್ಯಕ್ತಿ ರತನ್ ಟಾಟಾ ಅವರು ಎಂದು ಉದ್ಯಮಿ ನರೇಂದ್ರ ವರ್ಮಾ ಹೇಳಿದರು.
ಅವರು ಗುರುವಾರ ನಗರದ ವೃತ್ತದಲ್ಲಿ ರತನ್ ಟಾಟಾ ಅವರಿಗೆ ಆಯೋಜಿಸಲಾದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾವಿರಾರು ಕೈಗಾರಿಕೋದ್ಯಮಿಗಳಿಗೆ ಸ್ಫೂರ್ತಿ ನೀಡಿದ ವ್ಯಕ್ತಿ. ಹಲವು ತಲೆಮಾರುಗಳಿಗೆ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ ಜನರಿಗೆ ಆಸರೆಯಾಗಿದ್ದರು.ಬಡವರ ಬಂಧು, ಕಲಿಯುಗದ ಕರ್ಣ, ಅನ್ನದಾತ, ಕೈಗಾರಿಕೋದ್ಯಮಿ, ಮಾನವತಾವಾಧಿ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದಂತಹ ಪ್ರಪಂಚದಾದ್ಯಂತ ಟಾಟಾ ಸಮೂಹ ಕಂಪನಿಗಳಿಗೆ ಉತ್ತಮ ಹೆಸರನ್ನು ತಂದುಕೊಟ್ಟವರು.
ದೇವರನ್ನು ಯಾರು ಕಂಡಿಲ್ಲ. ಆದರೆ ನಾವು ಮಾಡುವ ಪ್ರಾಮಾಣಿಕತೆಯ ದುಡಿಮೆಯೇ ನಿಜವಾದ ದೇವರು. ಕಷ್ಟದಲ್ಲಿರುವ ಜನರಿಗೆ ಆಸರೆಯಾದರೆ ಅದೇ ಧರ್ಮದ ಕಾರ್ಯ ಎಂದು ನಂಬಿ ಬದುಕಿದವರು. ಇತಿಹಾಸದಲ್ಲಿ ಇಂತಹ ಕೈಗಾರಿಕೋದ್ಯಮಿ, ಕರುಣಾಮಯಿ ವ್ಯಕ್ತಿ ನಾವೆಂದು ಕಾಣಲ್ಲ. ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ನಿಂಗಣ್ಣ ಹುಳಗೋಳಕರ, ಚಂದ್ರಕಾಂತ ಗೊಬ್ಬೂರಕರ, ಅಶೋಕ ಜಿಂಗಾಡೆ, ಸಿದ್ರಾಮ ಕುಸಾಳೆ, ದೀನೇಶ ಗೌಳಿ, ಬಸವರಾಜ ಬಿರಾದಾರ, ಬಸವರಾಜ ಸಾತ್ಯಾಳ, ರಾಮು ಕುಸಾಳೆ, ಶರಣು ಕೌಲಗಿ, ಸಚಿನ್ ಹಂಚಾಟೆ, ಬಾಬು ಕೊಬಾಳ, ಲೊಹಿತ ಮಳಖೇಡ, ಉದಯ ನಂದಗೌಳಿ, ಮಹೇಶ ಪ್ಯಾರಸಾಬಾದ, ಅಮೂಲ ಪೆÇದ್ದಾರ, ರಾಜಶೇಖರ ಬಡಿಗೇರ, ಅವಿನಾಶ್ ಮಾಳಿ, ಸತೀಶ್ ಯಾಧವ, ಸಿದ್ದು ಸೊನಾರ ಹಾಗೂ ವ್ಯಾಪಾರಸ್ಥರು ಉಪಸ್ಥಿತರಿದ್ದರು.