ಚಿಂಚೋಳಿ: ಅತೀ ಹೆಚ್ಚು ಸದಸ್ಯತ್ವ ಮಾಡಿದವರಿಗೆ ಪಕ್ಷದಲ್ಲಿ ಆದ್ಯತೆ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.
ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ, ಇಂದು ಚಿಮ್ಮನಚೋಡ ಜಿ.ಪಂ.ಕ್ಷೇತ್ರದ ಗ್ರಾ.ಪಂ ಕೇಂದ್ರದಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ನಂತರ ಮಾತಾನಾಡಿ ಇಂದಿನಿಂದ 13,14,15 ತಾರೀಖಿನವರೆಗೆ ಸದಸ್ಯತ್ವದ ಅಭಿಯಾನದ ಕೊನೆಯ ದಿನಗಳಾಗಿದ್ದು, 15 ದಿನಾಂಕದ ವರೆಗೆ ಯಾರು ಹೆಚ್ಚು ಹೆಚ್ಚು ಸದಸ್ಯತ್ವ ಮಾಡಿಸುತ್ತಾರೆಯೋ ಅಂತವರಿಗೆ ಪಕ್ಷದಲ್ಲಿ ಮೊದಲ ಆದ್ಯತೆ ನೀಡಲಾಗುವುದೇಂದು ಪಕ್ಷದ ರಾಜ್ಯಾಧ್ಯಕ್ಷರಾದ ವಿಜೇಯಂದ್ರ ಆವರ ಆದೇಶವಾಗಿದ್ದು ದಯವಿಟ್ಟು ಪಕ್ಷದ ಮುಖಂಡರು ತಮ್ಮ ತಮ್ಮ ಭೂತಗಳಲ್ಲಿ 300 ಕ್ಕೂ ಹೆಚ್ಚು ಸದಸ್ಯತ್ವ ಮಾಡಿಸಿ ಕಾರ್ಯಪ್ರವತ್ತರಾಗಬೇಕು. ಈಗಿನಿಂದಲೇ ಮುಖಂಡರು ಮುಂದಿನ ಮೂರು ದಿನಗಳಲ್ಲಿ ಆಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಗೇ ಸದಸ್ಯತ್ವವನ್ನು ಮಾಡಿಸಿ ಎಂದು ಮುಖಂಡರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ *ಅಧ್ಯಕ್ಷರಾದ ವಿಜಯಕುಮಾರ ಚೆಂಗಟಿ, ಪಕ್ಷದ ಗ್ರಾಮಾಂತರ ಮಾಜಿ ಉಪಾಧ್ಯಕ್ಷ ಶಾಂತರೆಡ್ಡಿ ನರನಾಳ, ಪಕ್ಷದ ಮುಖಂಡರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಜಗದೀಶ ಮರಪಳ್ಳಿ, ಪಕ್ಷದ ಮುಖಂಡ ಹಾಗೂ ಆರ್ಯ ಈಡಿಗಾ ಸಮಾಜದ ತಾಲೂಕಾ ಅದ್ಯಕ್ಷ ಚಂದ್ರಶೇಖರ ಗುತ್ತೆದಾರ, ಪಕ್ಷದ ಮುಖಂಡರಾದ ಮೋತಿರಾಮ ನಾಯಕ, ಬಂಡರೆಡ್ಡಿ ಆಡಕಿ, ಹೀರಾಸಿಂಗ್, ಗೋಪಾಲ ಮಾಸ್ತರ,ಪಟರೆಡ್ಡಿ, ಆನಂದ ಮಾಸ್ತರ,ಜಗದೀಶ ತೆಲ್ಕಪಳ್ಳಿ,ಶಶಿಕಾಂತ ಬಸವಂತಪೂ, ಯುವ-ಮುಖಂಡರಾದ ಮಲ್ಲು ಕೊಡಂಬಲ್,ಶರಣು ಭಕ್ತಂಪಳ್ಳಿ, ತಾ.ಪಂ.ಮಾಜಿ ಸದಸ್ಯ ಪ್ರೇಮಸಿಂಗ್ ಜಾಧವ, ಪುರಸಭೆ ಮಾಜಿ ಉಪಾಧ್ಯಕ್ಷ *ರಾಜುಕುಮಾರ ಪವಾರ, ಪಕ್ಷದ ಪ್ರಧಾನ ಕಾರ್ಯದರ್ಶಿ *ರಾಮರೆಡ್ಡಿ ಪಾಟೀಲ, ಪಕ್ಷದ ಮುಖಂಡರು ಕಾರ್ಯಕರ್ತರು ಮುಂತಾದವರಿದ್ದರು.