ಡಿಜಿಟಲ್ ವ್ಯಾಪಾರಿಕರಣಕ್ಕೆ ತರಬೇತಿ ಶಿಬಿರ

0
35

ಕಲಬುರಗಿ: ಇಲ್ಲಿನ ಕೆಕೆಸಿಸಿಐ ಸಭಾಂಗಣದಲ್ಲಿ ಕೆಕೆಸಿಸಿಐ ಆಶ್ರಯದಲ್ಲಿ ಜಿಎಸ್‍ಟಿ ಸಂಬಂಧಿತ ಟ್ಯಾಲಿ ಪ್ರೈಮ್ 5.0 ವಿಶಿಷ್ಟ ಸಾಫ್ಟವೇರ್ ಡೆವಲಪೇರ್ ನಿರ್ವಹಣೆ ಕುರಿತು ಸಂವಾದ ಹಾಗೂ ಮಹಿಳಾ ಉದ್ದಿಮೆದಾರರ ಜಾಗೃತಿ ತರಬೇತಿ ಶಿಬಿರ ನಡೆಯಿತು.

ಈ ವೇಳೆ ಅಧ್ಯಕ್ಷತೆವಹಿಸಿದ್ದ ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಬಿ. ಪಾಟೀಲ್, ಕೌಶಲ್ಯ ಆಧಾರಿತ ಗುಡಿ ಕೈಗಾರಿಕೆ ಆರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಪ್ರೋತ್ಸಾಹದಾಯಕ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಉದ್ದಿಮೆದಾರರು ಹೊಸ ಹೊಸ ಕೌಶಲ್ಯ ಬೆಳೆಸಿಕೊಂಡು ಆರ್ಥಿಕ ಸೌಲಭ್ಯ ಪಡೆದುಕೊಳ್ಳಬೇಕು ಎಂದು ವಿವರಿಸಿದರು.

Contact Your\'s Advertisement; 9902492681

ಕೆಕೆಸಿಸಿಐ ತೆರಿಗೆ ನಿರ್ವಹಣಾ ಸಮಿತಿ ಸಹ ಮುಖ್ಯಸ್ಥ, ಕೆಕೆಸಿಸಿಐ ಖಜಾಂಚಿ ಸಿ.ಎ. ಉತ್ತಮ ಬಜಾಜ್ ಮಾತನಾಡಿ, ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ ಬಳಸಿಕೊಂಡು ವ್ಯಾಪಾರ ವಹಿವಾಟು ಡಿಜಿಟಲಕರಣಗೊಳಿಸಬೇಕು. ಗ್ರಾಹಕರ ಮತ್ತು ವ್ಯಾಪಾರ ದೃಷ್ಟಿಕೋನದಿಂದ ಡಿಜಿಟಲ್ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಬೆಳೆಯುತ್ತಿದೆ ಎಂದು ಹೇಳಿದರು.

ವಾಣಿಜ್ಯ ಮತ್ತು ಗುಡಿ ಕೈಗಾರಿಕೆಗಳಲ್ಲಿ ಮಹಿಳಾ ಉದ್ದಿಮೆದಾರರು ಬಂಡವಾಳ ಹೂಡಲು ತೆರಿಗೆ ವಿನಾಯಿತಿ, ಸಹಾಯಧನ ಸೌಲಭ್ಯಗಳು ಹೆಚ್ಚಿವೆ. ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಎಫ್‍ಓಡಬ್ಲೂಇ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಸಮಾಜ ಸೇವಕಿ ಶ್ರೀದೇವಿ ಪಾಟೀಲ್ ಮಾತನಾಡಿ, ಮಹಿಳೆಯರು ಸಬಲೆಯರಾಗಲು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಣ್ಣ, ಗುಡಿ ಕೈಗಾರಿಕೆ ಆರಂಭಿಸುವ ಮೂಲಕ ಆರ್ಥಿಕ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ಕೆಕೆಸಿಸಿಐ ಮಾಜಿ ಅಧ್ಯಕ್ಷ ಪ್ರಶಾಂತ ಮಾನಕರ್, ಕೆಸಿಸಿಐ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ತೆರಿಗೆ ಉಪ ಸಮಿತಿ ಅಧ್ಯಕ್ಷ ವೆಂಕಟ್ ಚಿಂತಾಮಣಿರಾವ್, ಷಣ್ಮುಖ ಸಿ.ಜೆÉ ಸೇರಿ ಅನೇಕ ಉದ್ದಿಮೆದಾರರು, ವರ್ತಕರು, ವ್ಯಾಪಾರಸ್ಥರು ಪಾಲ್ಗೊಂಡು ಸಲಹೆ ಸೂಚನೆ ಪಡೆದುಕೊಂಡರು.

ಎಫ್‍ಓಡಬ್ಲ್ಯೂಇ ಅಧ್ಯಕ್ಷೆ ರೂಪಾರಾಣಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಿಂದ ಸ್ವಯಂ ಉದ್ಯೋಗ ಮಾಡುವ ಮಹಿಳೆಯರು ಅನೇಕ ಸೌಲಭ್ಯಗಳ ಜೊತೆಗೆ ತೆರಿಗೆ ವಿನಾಯಿತಿ, ಸಹಾಯಧನ ಸಿಗಲಿವೆ. ಸಣ್ಣ ಪ್ರಮಾಣದಲ್ಲಿ ಬಂಡವಾಳ ಹೂಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನಮ್ಮ ಸಂಸ್ಥೆಯು ನಿರಂತರ ಪ್ರೋತ್ಸಾಹ, ಸೂಕ್ತ ತರಬೇತಿ, ಮಾರ್ಗದರ್ಶನ ನೀಡಲಿದೆ. ಮಹಿಳಾ ಉದ್ದಿಮೆದಾರರು ಇದರ ಲಾಭಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here