ಸುರಪುರ: ಈಬಾರಿ ಎಲ್ಲರು ಸೇರಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸೋಣ ಎಂದು ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ತಿಳಿಸಿದರು.
ನಗರದ ತಹಸಿಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ನಡೆದ ರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ನವೆಂಬರ್ 1 ರಂದು ಬೆಳಿಗ್ಗೆ 8 ಗಂಟೆ ಒಳಗಾಗಿ ಎಲ್ಲಾ ಕಚೇರಿ,ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಷ್ಟ್ರ ಧ್ವಜಾರೋಹಣ ಮಾಡಬೇಕು.ನಂತರ 10 ಗಂಟೆಗೆ ತಹಸಿಲ್ ಕಚೇರಿ ಆವರಣದಲ್ಲಿ ತಾಲ್ಲೂಕ ಆಡಳಿತ ದಿಂದ ರಾಜ್ಯೋತ್ಸವ ಆಚರಿಸಲಿದ್ದು ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸಿದರು.ಅಲ್ಲದೆ ರಾಜ್ಯೋತ್ಸವದ ಕುರಿತು ಉಪ ಖಜಾನೆ ಪತ್ರಾಂಕಿತ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರವೇ ತಾಲ್ಲೂಕ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ,ತಾಲ್ಲೂಕಿನ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ತಾಲ್ಲೂಕ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸುವಂತೆ ಮನವಿ ಮಾಡಿದರು.ಮನವಿಗೆ ಸ್ಪಂಧಿಸಿದ ತಹಸಿಲ್ದಾರರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರಿಂದ ಪರವಾನಿಗೆ ಪಡೆದು ಸನ್ಮಾನ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾದ ಶಿವಮೋನಯ್ಯ ಎಲ್.ಡಿ.ನಾಯಕ,ಭೀಮು ನಾಯಕ ಮಲ್ಲಿಬಾವಿ,ಯಲ್ಲಪ್ಪ ನಾಯಕ ಕಬಾಡಗೇರಾ,ವೆಂಕಟೇಶ ಪ್ಯಾಪ್ಲಿ,ನಿಂಗಪ್ಪ ನಾಯಕ ಬಿಜಾಸಪುರ,ಭೀಮನಗೌಡ ಲಕ್ಷ್ಮೀ ಹೆಮನೂರ,ಮಲ್ಲಪ್ಪ ನಾಯಕ ಕಬಾಡಗೇರ,ಭಾಗನಾಥ ನಾಯಕ ರುಕ್ಮಾಪುರ,ಮಲ್ಲು ವಿಷ್ಣು ಸೇನಾ,ಅಯ್ಯಪ್ಪ ವಗ್ಗಾಲಿ ಉಸ್ತಾದ ವಜಾಹತ್ ಹುಸೇನ್ ಹಾಗೂ ಅಧಿಕಾರಿಗಳಾದ ತಾ.ಪೋ ಇಓ ಬಸವರಾಜ ಸಜ್ಜನ್,ಟಿಹೆಚ್‍ಓ ಡಾ.ಆರ್.ವಿ.ನಾಯಕ,ಬಿಇಓ ಯಲ್ಲಪ್ಪ ಕಾಡ್ಲೂರ,ಪಿಎಸ್‍ಐ ಸಿದ್ದಣ್ಣ ಂiÀiಡ್ರಾಮಿ,ಗ್ರಾ.ಕು.ನೀ.ಸರಬರಾಜು ಎಇಇ ಹಣಮಂತ್ರಾಯ ಪಾಟೀಲ್,ಸಿಡಿಪಿಒ ಅನಿಲಕುಮಾರ ಕಾಂಬ್ಳೆ ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿಗಳು ಹಾಗೂ ಅನೇಕ ಜನ ಸಂಘಟಕರು ಭಾಗವಹಿಸಿದ್ದರು.
ಸಾಹಿತ್ಯ,ಕಲೆ,ಸಮಾಜ ಸೇವೆ,ರೈತ,ಮಾಧ್ಯಮ,ಸಂಗೀತ,ರಂಗಭೂಮಿ ರಂಗಗಳಲ್ಲಿನ ಸಾಧಕರಿಗೆ ಹಾಗೂ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು- ಹುಸೇನಸಾಬ್ ಎ.ಸರಕಾವಸ್ ತಹಸಿಲ್ದಾರ್