ಕಲಬುರಗಿ: ಹೈ.ಕ.ಶಿ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯ ವತಿಯಿಂದ ಉನ್ನತ ಭಾರತ ಅಭಿಯಾನದ ಆಡಿಯಲ್ಲಿ ಗ್ರಾಮೀಣ ಜನಜಾಗೃತಿ ಜಾಥಾಕ್ಕೆ ಹಾಗರಗಾ ಗ್ರಾಮದಲ್ಲಿ. ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಮಲ್ಲಿಕಾರ್ಜುನ ಗಿರಿ ಹಾಗೂ ಗ್ರಾ.ಪ.ಅದ್ಯಕ್ಚರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.
ಮಹಾವಿದ್ಯಾಲಯದ ವಿದ್ಯಾರ್ಥಿ ನಿಯರು ಗ್ರಾಮದಲ್ಲಿ ಪಥ ಸಂಚಲನದ ಮೂಲಕ ಜನರಿಗೆ ಪ್ಲಾಸ್ಟಿಕ್ ಬಳಕೆಯ ನಿಷೇಧ ಹಾಗೂ ಸೌರ. ಶಕ್ತಿ ಬಳಕೆಯ ಮಹತ್ವವನ್ನು ಬಿತ್ತಿಪತ್ರಗಳೊಂದಿಗೆ ಪ್ರಾತ್ಯಕ್ಚತೆಯನ್ನು ಪ್ರದರ್ಶಿಸುತ್ತಾ ಜನರಿಗೆ ತಿಳಿಯಪಡೆಸಿದರು ಜಾಥಾದಲ್ಲಿಮಾಹವಿದ್ಯಾಲಯದ ಅಭಿಯಾನದ ಸಂಯೋಜನಾಧಿಕಾರಿಗಳಾದ ಡಾ. ಶಾರದಾ ಬೇಕನಾಳ, ಡಾ.ಮೀನಾಕ್ಷಿ ಬಾಳಿ, ಡಾ.ನೀಲಕಂಠ ವಾಲಿ, ಡಾ.ಮೋಹನರಾಜ ಪತ್ತಾರ, ಡಾ.ಮಹೇಶ ಗಂವ್ಹಾರ,ಡಾ.ಶರಣಮ್ಮ ಕುಪ್ಪಿ,.ಡಾ.ಪ್ರವೀಣ,ಡಾ.ರೇಣುಕಾ,ಶ್ರೀಮತಿ ಮಂಗಲಾ ಬಿರಾದಾರ,ಡಾ.ಶಿಲ್ಪಾ.ಬಿ. ಮಹಾವಿದ್ಶಾಲಯದ ರಾ.ಶಿ.ಯೋಜನೆ ಅಧಿಕಾರಿಯಾದ ಡಾ.ಮೋಹನರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.