ಕಲಬುರಗಿ: ನಗರದ ಪತ್ರಕರ್ತರ ಸಾಂಸ್ಕøತಿಕ ಭವನದಲ್ಲಿ ಮಹಾನಗರ ಪಾಲಿಕೆಯ ಎಲ್ಲಾ ಪೌರಕಾರ್ಮಿಕರ ಕೆಲಸದ ಖಾಯಮ್ಮಾತಿಗಾಗಿ ಒತ್ತಾಯಿಸಿ, ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಸೈಯದ್ ಮುಜೀಬ್ ಅವರು ಮಾತನಾಡುತ್ತಾ, ಪೌರಕಾರ್ಮಿಕರ ನೌಕರಿ ಕಾಯಂ ಆಗಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು ಹಾಗೂ ಗುತ್ತಿಗೆ ಪದ್ಧತಿ ನಿಯಂತ್ರಣ ಮತ್ತು ನಿಷೇಧ ಕಾಯ್ದೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಕಳೆದ ಏಳು ವರ್ಷಗಳಿಂದ ಆಯ್ಕೆಯಾದ ಪೌರ ಕಾರ್ಮಿಕರ ಪಟ್ಟಿಯನ್ನು ರದ್ದುಗೊಳಿಸಿದ ಕ್ರಮ ಸರಿಯಲ್ಲ ಎಂದು ಹೇಳಿದರು.
ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ನೇರ ನೇಮಕಾತಿಯ ಆಯ್ಕೆಯ ಪಟ್ಟಿಯಲ್ಲಿರುವವರಿಗೆ ಆದೇಶ ಪತ್ರ ಕೊಟ್ಟು ಇನ್ನುಳಿದ ಎಲ್ಲರಿಗೂ ಕೆಲಸದ ಖಾಯಮ್ಮಾತಿಗಾಗಿ ನೋಟಿಫಿಕೇಶನ ಹೊರಡಿಸಬೇಕಿತ್ತು. ಹೀಗೆ ಮಾಡದೆ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಮತ್ತು ಅವರನ್ನು ಅತ್ಯಂತ ಕಡಿಮೆ ಕೂಲಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಇದು ತಪ್ಪಬೇಕೆಂದರೆ ಎಲ್ಲ ಪೌರಕಾರ್ಮಿಕರು ಬಲಿಷ್ಠವಾದ ಸಂಘಟನೆ ಕಟ್ಟಿಕೊಂಡು ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಇನ್ಬೊಬ್ಬ ಅತಿಥಿಗಳಾದ ಕೆ ನೀಲಾ ಇವರು ಮಾತನಾಡಿ, ಪೌರ ಕಾರ್ಮಿಕರ ನಗರದ ಜನತೆಯ ಆರೋಗ್ಯ ಕಾಪಾಡುವವರು. ಅವರು ನಗರ ಸ್ವಚ್ಛಗೊಳಿಸಿ ತಾವು ಕಡು ಬಡತನದಲ್ಲಿ ನೊಂದವರು. ಸರಕಾರವು ಅವರ ಸಮಸ್ಯೆಗಳನ್ನು ಸಂಪೂರ್ಣ ಪರಿಹರಿಸುವ ಧೋರಣೆ ಹೊಂದಿಲ್ಲ. ಆದ್ದರಿಂದಲೇ ಕಳೆದ ಏಳು ವರ್ಷಗಳಿಂದ ಅವರೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘವನ್ನು ಬಲಿಷ್ಠಗೊಳಿಸಿ ಹೋರಾಟದೊಂದಿಗೆ ಮುನ್ನಡೆಯುವ ತೀರ್ಮಾನ ಮಾಡಿದ್ದು ಶ್ಲ್ಯಾಘನೀಯವಾಗಿದೆ. ಐಕ್ಯತೆಯಿಂದ ಪೌರ ಕಾರ್ಮಿಕರು ಸಮಸ್ಯೆಗಳ ಪರಿಹಾರಕ್ಕೆ ಹೋರಾಡಬೇಕು. ಕಾನೂನಿನ ನೆರವಿನೊಂದಿಗೂ ಹೋರಾಟದ ಶಕ್ತಿಯಿಂದಲೂ ಗೆಲುವು ಪಡೆಯಲು ಸಾಧ್ಯವಾಗಬೇಕು ಎಂದು ಕರೆ ನೀಡಿದರು.
ಶರಣು ಅತನೂರ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರೂ ಸಂಘಟಿತರಾಗಿ ನ್ಯಾಯಕ್ಕಾಗಿ ಹೋರಾಡೋಣ ಎಂದು ಹೇಳಿದರು.
ಸುಧಾಮ ಧನ್ನಿ ಅವರು ಸ್ವಾಗತ ಮಾಡಿದರು. ಪಾಂಡುರಂಗ ಮಾವಿನಕರ್ ನಿರ್ವಹಣೆ ಮಾಡಿದರು. ಚಂದಮ್ಮ ಗೋಳಾ ಅಧ್ಯಕ್ಷತೆ ವಹಿಸಿದರು.
ಲವಿತ್ರ ವಸ್ತ್ರದ್, ಸುಜಾತಾ ಹಾಗೂ ಲೋಹಿತ, ಸಾಯಬಣ್ಣಾ ಗುಡುಬಾ, ನದೀಂ, ವಿಠ್ಠಲ ವಗ್ಗನ, ಮಹೇಶ, ಶಾಮ, ಮಲ್ಲಮ್ಮ, ಶಾಲುಬಾಯಿ, ಅಂಬವ್ವ, ಕವಿತಾ, ಲಕ್ಷ್ನಿಬಾಯಿ, ಸವಿತಾ, ಕಮಲಾಬಾಯಿ, ಮಲ್ಲಿಕಾರ್ಜುನ್, ಸರಸ್ವತಿ ಮುಂತಾದವರು ವೇದಿಕೆಯ ಮೇಲಿದ್ದರು.