20 ರಂದು “ಜನಪದ ಭಕ್ತಿಗೀತೆ ಹಾಗೂ ರೈತನ ಬಾಳು ಒಕ್ಕಲಿಗ ಸಿದ್ದಣ್ಣ” ಕೃತಿ ಲೋಕಾರ್ಪಣೆ

0
38

ಕಲಬುರಗಿ: ತಾಲೂಕಿನ ಓಂಕಾರ (ವೆಂಕಟ) ಬೇನೂರ ಗ್ರಾಮದ ಕವಿಗಳಿಂದ ರಚಿಸಲ್ಪಟ್ಟ ಮಹಾಲಿಂಗೇಶ್ವರ ನಾಮಾಂಕಿತವುಳ್ಳ “ಜನಪದ ಭಕ್ತಿಗೀತೆಗಳು ಮತ್ತು ರೈತನ ಬಾಳು ಅರ್ಥಾತ್ ಒಕ್ಕಲಿಗ ಸಿದ್ದಣ್ಣ” ಎಂಬ ಎರಡು ಜನಪದ ಕೃತಿಗಳ ಲೋಕಾರ್ಪಣೆ ಸಮಾರಂಭ ಇದೇ 20 ರಂದು ರವಿವಾರ ಮುಂಜಾನೆ 10 ಗಂಟೆಗೆ ಕಲಬುರಗಿ ಡಾ. ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಗ್ರಾಮದ ಗುರು ಮಹಾಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸಿದ್ಧ ರೇಣುಕ ಶಿವಾಚಾರ್ಯರು ಸಂಪಾದಕರಾದ  ಶ್ರೀ ಮಹಾಲಿಂಗಪ್ಪ ಪೊಲೀಸ ಪಾಟೀಲ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪೂಜ್ಯ ಶ್ರೀ ಸಿದ್ಧ ರೇಣುಕ ಶಿವಾಚಾರ್ಯರ ಸಾನಿಧ್ಯದಲ್ಲಿ ಜರುಗುವ ಸಮಾರಂಭವನ್ನು ಮುಗುಳನಾಗಾಂವನ ಪೂಜ್ಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಉದ್ಘಾಟಿಸಲಿದ್ದು ಭರತನೂರ ವಿರಕ್ತ ಮಠದ ಪೂಜ್ಯ ಶ್ರೀ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು ಮತ್ತು ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ಡಾ. ಅಪ್ಪಾರಾವ ದೇವಿ ಮುತ್ಯಾ ರವರು ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ.  ವೆಂಕಟ ಬೇನೂರಿನ ಮೌಲಾಲಿ ದರ್ಗಾದ ಡಾ. ಸೈಯದ ಮುರಶದ ಪೀರ ಸಾಹೇಬರು ಉಪಸ್ಥಿತಿ ವಹಿಸಲಿದ್ದು ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ ಅಧ್ಯಕ್ಷತೆ ವಹಿಸಲಿದ್ದಾರೆ.

Contact Your\'s Advertisement; 9902492681

ಶಾಸಕರುಗಳಾದ ಬಸವರಾಜ ಮತ್ತಿಮೂಡ, ಡಾ. ಅಜಯ ಸಿಂಗ್, ಬಿ.ಜಿ. ಪಾಟೀಲ, ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಮಾರುತಿ ಮಾನ್ಪಡೆ  ವಿಶೇಷ  ಆಹ್ವನಿತರಾಗಿ  ಆಗಮಿಸಲಿದ್ದು ಜಿಲ್ಲಾ

ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ ಜಗನ್ನಾಥ ಗೋದಿ, ರಾಜಕೀಯ ಧುರೀಣರಾದ ಕರಿಸಿದ್ದಪ್ಪಾ ಪಾಟೀಲ ಹರಸೂರ, ಸೋಮಶೇಖರ ಗೋನಾಯಕ, ಅರುಣಕುಮಾರ ಪಾಟೀಲ, ವಿಜಯಕುಮಾರ ಜಿ. ರಾಮಕೃಷ್ಣ, ಶರಣಬಸಪ್ಪ ಪಾಟೀಲ ಅಷ್ಟಗಾ ಸೇರಿದಂತೆ ರಾಜಕೀಯ ಧುರೀಣರು, ಉದ್ದಿಮೆದಾರರು, ಕವಿ ಕಲಾವಿದರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ವೆಂಕಟ ಬೇನೂರ ಗ್ರಾಮದಲ್ಲಿ ಪೂರ್ವದಿಂದಲೂ ಕಲಾವಿದರು, ಸಾಹಿತಿಗಳು ಬಹುದೊಡ್ಡ ಸಾಹಿತ್ಯವನ್ನು ಸಾಹಿತ್ಯ ಪ್ರಪಂಚಕ್ಕೆ ಕಲಾವಿದರು ಕಲಾ ಪ್ರಪಂಚಕ್ಕೆ ಅಮೂಲ್ಯವಾದ ಕಾಣಿಕೆಯನ್ನು ನೀಡುತ್ತ ಹೊರಟಿದ್ದಾರೆ.  ಪ್ರಸ್ತುತ ಎರಡು ಕೃತಿಗಳು ಶ್ರೇಷ್ಠ ಕವಿ ಲಿಂ|| ಭವನ್‌ಸಿಂಗ್ ದಾದಾ ಅವರ ಸಾಹಿತ್ಯವಾಗಿದ್ದು ಈಗ ಆ ಸಾಹಿತ್ಯವನ್ನು ಒಟ್ಟುಗೂಡಿಸಿ ಕೃತಿ ರೂಪದಲ್ಲಿ ಹೊರಬರುತ್ತಿದೆ ಎಂದು ವಿವರಿಸಿದರು.  ಈಗಾಗಲೇ ವೆಂಕಟ ಬೇನೂರ ಗ್ರಾಮ ಕಲಾವಿದರ ತವರು ಮನೆಯಾಗಿದ್ದು ಡಪ್ಪಿನಾಟ, ಕೋಲಾಟ ಸೇರಿದಂತೆ ಜನಪದ ಕಲೆಗೆ ಹೆಸರುವಾಸಿಯಾಗಿದ್ದು ಹೀಗಾಗಿ ಆ ಅಮೂಲ್ಯವಾದ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡುವ ನಿಟ್ಟಿನತ್ತ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಗ್ರಾಮದ ಹಿರಿಯರಾದ ಭೀಮರಾವ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿ, ಉದ್ದಿಮೆದಾರ ಬಸವರಾಜ ಮಹಾಲಿಂಗಪ್ಪ ಪಾಟೀಲ, ಸಾಗರ ಸ್ಥಾವರಮಠ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here