ಕಲಬುರಗಿ: ಬಹಿರಂಗದ ಸೌಂದರ್ಯಕ್ಕಾಗಿ ಸೀರೆ, ಆಭರಣ ಎಷ್ಟು ಮುಖ್ಯವೋ ಅಂತರಂಗದ ಆನಂದ ಅನುಭವಿಸಲು ಕದಳಿ ಮಹಿಳಾ ಸಂಘಟನೆ ಕೂಡ ಅಷ್ಟೇ ಅಗತ್ಯ ಎಂದು ಬೆಳಗಾವಿಯ ಪ್ರೇಮಕ್ಕ ಅಂಗಡಿ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೈಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ಶನಿವಾರದಿಂದ ನಡಡಯುತ್ತಿರುವ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದಲ್ಲಿ ‘ಕದಳಿ ಮಹಿಳಾ ವೇದಿಕೆ ಸಂಘಟನೆ ಮತ್ತು ಸವಾಲುಗಳು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಂಘಟನೆಯಿಂದ ಏನು ಲಾಭ ಎನ್ನುವುದಕ್ಕಿಂತ ಮಹಿಳೆಯಾಗಿ ನಾವೆಷ್ಟು ಸಾರ್ಥಕವಾಗಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಅಗತ್ಯ ಎಂದು ತಿಳಿಸಿದರು.
ಅಕ್ಕ ಕೌಶಿಕನ ಮುಖಕ್ಕೆ ಎಸೆದ ದಿನ, ಬಂಗಾರದ ಒಡವೆಯನ್ನು ಕಸದಲ್ಲಿ ದಬ್ಬಿದ ಸತ್ಯಕ್ಕ ಮುಂತಾದವರು ನಮಗೆ ವಾರಸುದಾರರಾಗಬೇಕು ಎಂದು ಹೇಳಿದರು.
ಹೆಣ್ತನದ ಕಹಳೆ ಊದುವುದು ನಮ್ಮೆದುರಿಗಿರುವ ಸವಾಲು ಎಂದು ತಿಳಿಸಿದರು.
ರಾಯಚೂರಿನ ಸರ್ವ ಮಂಗಳಾ ಸಕ್ರಿ, ಡಾ. ಫರ್ವಿನ್ ಸುಲ್ತಾನ, ಡಾ. ಮೀನಾಕ್ಷಿ ಬಾಳಿ ಉಪಸ್ಥಿತರಿದ್ದರು. ಮೈಸೂರಿನ ಎಚ್.ಟಿ. ಶೈಲಜಾ ಅಧ್ಯಕ್ಷತೆ ವಹಿಸಿದ್ದರು.
ಡಾ. ಶಿವಶರಣಪ್ಪ ಮೋತಕಪಲ್ಲಿ ನಿರೂಪಿಸಿದರು. ಡಾ. ಚಿತ್ಕಳಾ ಮಠಪತಿ ಸ್ವಾಗತಿಸಿದರು. ಶರಣಗೌಡ ಪಾಟೀಲ ಪಾಳಾ ವಂದಿಸಿದರು.