ಶಹಾಬಾದ ಕಸಾಪ ತಾಲೂಕ ಸಮ್ಮೇಳನ ಪೂರ್ವಭಾವಿ ಸಭೆ

0
82

ಶಹಾಬಾದ: ಪಕ್ಷಾತೀತ, ಜಾತ್ಯಾತಿತ, ಧರ್ಮಾತೀತವಾಗಿ ಕಸಾಪ ತಾಲೂಕಾ ಸಮ್ಮೇಳವನ್ನು ಒಂದಾಗಿ, ಚೆಂದಾಗಿ ಯಶಸ್ವಿಯಾಗಿ ಮಾಡೋಣ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು.

ಅವರು ನಗರದ ಪಾರ್ವತಿ ಕಲ್ಯಾಣಮಂಟಪದಲ್ಲಿ ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ಅಧ್ಯಕ್ಷತೆಯಲ್ಲಿ
ನಡೆದ ಶಹಾಬಾದ ಕಸಾಪ ತಾಲೂಕಾ ಸಮ್ಮೇಳನದ ನಿಮಿತ್ತ ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ಮೂಡಿ ಬರಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಸ್ವಾಗತ ಸಮಿತಿ ಅಧ್ಯಕ್ಷ, ಸಮ್ಮೇಳನದ ಅಧ್ಯಕ್ಷರ ಆಯ್ಕೆ ಸೇರಿದಂತೆ, ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ವಹಿಸಲಾಗುವುದು.ಅದಕ್ಕೆ ಪೂರಕವಂತೆ ತಾಲೂಕಿನ ಗ್ರಾಮದ ಕಲೆ.ಸಾಹಿತ್ಯ ಸಂಸ್ಕøತಿ ಬಿಂಬಿಸುವ, ಹಳ್ಳಿಗಳ ವಿಶೇಷತೆ ಸಾರುವ ಸ್ಥಬ್ದ ಚಿತ್ರಗಳನ್ನು ಹಾಗೂ ಸ್ಥಳೀಯ ಐತಿಹಾಸಿಕ ವಿಶೇಷತೆಯನ್ನು ಮೆರವಣಿಗೆಯಲ್ಲಿ ಪ್ರತಿಬಿಂಬಿಸುವ ಕೆಲಸ ಅರ್ಥಪೂರ್ಣವಾಗಿ ಮಾಡಬೇಕಿದೆ.ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಗಣ್ಯರಾದ ಅಣವೀರ ಇಂಗಿನಶೆಟ್ಟಿ ಮಾತನಾಡಿ, ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವುದು ನಮ್ಮೆಲ್ಲರಿಗೂ ಸಂತೋಷವಾಗಿದೆ. ಈ ಸಾಹಿತ್ಯ ಸಮ್ಮೇಳದಿಂದ ತಾಲೂಕಿನ ಮೆರುಗನ್ನು ಹೆಚ್ಚಿಸುವಂತವಾಗಬೇಕು.ಅದಕ್ಕೆ ಬೇಕಾದ ಯಶಸ್ವಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.

ಸಭೆಯಲ್ಲಿ ಅನೇಕ ಸದಸ್ಯರು ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕುರಿತು ಅಭಿಪ್ರಾಯ ಮಂಡಿಸಿದರು.ಸುಮಾರು 6 ಜನರ ಹೆಸರು ಕೇಳಿಬಂದವು.ನಂತರ ಕಸಾಪ ಸದಸ್ಯ ಪೀರಪಾಶಾ ಮಾತನಾಡಿ,ಅಧ್ಯಕ್ಷರ ಆಯ್ಕೆಗಾಗಿ ಸಮಿತಿ ರಚಿಸಲಾಗುವುದು. ಯಾವುದೇ ಟೀಕೆಗೆ ಒಳಗಾಗದ ಸಮ್ಮೇಳನ ಅಧ್ಯಕ್ಷರ ಆಯ್ಕೆ ಮಾಡುವ ಜವಾಬ್ದಾರಿಯನ್ನು
ಆ ಸಮಿತಿ ತೆಗೆದುಕೊಳ್ಳುತ್ತದೆ.ಆ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕು ಎಂದು ವಿಷಯವನ್ನು ಮೊಟಕುಗೊಳಿಸಿದರು.

ಸಭೆಯಲ್ಲಿ ಮೃತ್ಯುಂಜಯ ಸ್ವಾಮಿ ಹಿರೇಮಠ, ಭರತ ಧನ್ನಾ, ಸಿದ್ದುಗೌಡ ಅಫಜಲ್‍ಪೂರ, ಯಲ್ಲಾಲಿಂಗ ಹೈಯಾಳಕರ್, ಪಿ.ಎಸ್.ಮೇತ್ರೆ, ಕನಕಪ್ಪ ದಂಡಗುಲರಕ, ಎನ್.ಸಿ.ವಾರದ, ಚಂದ್ರಕಾಂತ ಗೊಬ್ಬುಕರ್, ಸಿದ್ದಲಿಂಗ ಬಾಳಿ, ಶರಣು ಪಗಲಾಪುರ, ರವಿ ಅಲ್ಲಂಶೆಟ್ಟಿ, ಶರಣಗೌಡ ಪಾಟೀಲ, ಗುಂಡಮ್ಮಾ ಮಡಿವಾಳ, ಎನ್.ಸಿ.ವಾರದ, ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಸಾಪ ಮಾಜಿ ಅಧ್ಯಕ್ಷ ಅನೀಲಕುಮಾರ ಇಂಗಿನಶೆಟ್ಟಿ, ನಗರದ ಪ್ರಮುಖರಾದ ಕಾಡಾ ಅಧ್ಯಕ್ಷ ಡಾ. ರಶೀದ ಮರ್ಚಂಟ್, ರಾಜು ಮೇಸ್ತ್ರಿ, ನಿಂಗಣ್ಣ ಹುಳಗೋಳ, ಶಿವರಾಜ ಇಂಗಿನಶೆಟ್ಟಿ, ಪ್ರಶಾಂತ ಮರಗೋಳ, ನಾಗಣ್ಣ ರಾಂಪೂರೆ, ಬಾಬುರಾವ ಪಂಚಾಳ, ಸಿದ್ದಲಿಂಗಯ್ಯ ಹಿರೇಮಠ, ಮಹ್ಮದ್ ಮಸ್ತಾನ, ಶರಣಗೌಡ ಪಾಟೀಲ, ಶರಣಗೌಡ ಪಾಟೀಲ ಗೋಳಾ(ಕೆ), ಭೀಮರಾವ ಸಾಳುಂಕೆ, ಕಿರಣ ಕೋರೆ, ಶರಣು ವಸ್ತ್ರದ ವಿಶ್ವರಾಧ್ಯ ಬಿರಾಳ, ಡಾ.ಅಹ್ಮದ ಪಟೇಲ್, ಶಂಕರ ಜಾನಾ, ನಿಂಗಣ್ಣ ಪೂಜಾರಿ, ಸೋಮಶೇಖರ ನಂದಿಧ್ವಜ, ಗಿರಿಮಲ್ಲಪ್ಪ ವಳಸಂಘ, ಜಗನ್ನಾಥ ಎಸ್.ಹೆಚ್, ಚಂದ್ರಕಾಂತ ಗೊಬ್ಬುರಕರ, ನಿಂಗಣ್ಣ ಸಂಗಾವಿಕರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here