ಜನಪದ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿಗೆ ಪುಣ್ಯಶೆಟ್ಟಿ ಕಾರ್ಯಾಧ್ಯಕ್ಷರಿಗೆ ಆಹ್ವಾನ

0
128

ಕಲಬುರಗಿ : ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸಲು ಉದ್ದೇಶಿಸಿರುವ ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಿವೃತ್ತ ಕೃಷಿ ಅಧಿಕಾರಿ ಬಿ.ಎನ್. ಪುಣ್ಯಶೆಟ್ಟಿ ಅವರಿಗೆ ನಗರದ ಕನ್ನಡ ಭವನದಲ್ಲಿ ಸತ್ಕರಿಸಿ ಗೌರವಿಸಲಾಯಿತು.

ಹಿರಿಯ ಸಾಹಿತಿ ಪ್ರೊ. ಶೋಭಾ ದೇವಿ ಚೆಕ್ಕಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದ್ದು. ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಪರಿಷತ್ತ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಅದರ ಮೌಲ್ಯ ಹೆಚ್ಚಲು ಜನಪದವೇ ತಾಯಿ ಬೇರು. ಜನಸಾಮಾನ್ಯರ ನಾಲಿಗೆಯ ತುದಿಯಲ್ಲಿ ತೇಲಿ ಬರುವ ಜನಪದ ಹಾಡುಗಳು ನಮ್ಮ ಜೀವನವನ್ನು ಕಟ್ಟಿಕೊಟ್ಟಿವೆ. ಆ ಜನಪದ ಸಾಹಿತ್ಯ ಹಾಗೂ ಕಲೆಗಳು ಆಧುನೀಕತೆಯಿಂದ ನಶಿಸಿ ಹೋಗುತ್ತಿವೆ. ಮತ್ತೇ ನಮ್ಮ ಯುವ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜನಪದ ಸಾಹಿತ್ಯದ ಸೊಗಡನ್ನು ಸಮ್ಮೇಳನದ ಮೂಲಕ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದರು.

Contact Your\'s Advertisement; 9902492681

ಈ ದಿಸೆಯಲ್ಲಿ ಬಸವರಾಜ ಪುಣ್ಯಶೆಟ್ಟಿ ಅವರ ಜನಪದರ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವ ಗುರುತಿಸಿ ಕಾರ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು.

ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಎಂ ಎನ್ ಸುಗಂಧಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ರಮೇಶ ಡಿ ಬಡಿಗೇರ, ರೇವಣಸಿದ್ದಪ್ಪ ಜೀವಣಗಿ, ಶಿವಶರಣ ಬಡದಾಳ, ವಿನೋದಕುಮಾರ ಜೇನವೇರಿ, ಗಣೇಶ ಚಿನ್ನಾಕಾರ, ಸಿದ್ಧಲಿಂಗ ಜಿ ಬಾಳಿ, ಚಂದ್ರಕಾಂತ ಸೂರನ್, ನಾರಾಯಣ ಜೋಶಿ, ಶಿಲ್ಪಾ ಜೋಷಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here