ಭಾರತದ ಸಂಸ್ಕøತಿ ಜನಪದ ಕಲೆಯಲ್ಲಿ ಅಡಗಿದೆ; ಡಾ. ದಾಕ್ಷಾಯಿಣಿ ಎಸ್.ಅಪ್ಪ

0
32

ಕಲಬುರಗಿ: ಪ್ರತಿಯೊಬ್ಬರೂ ಸಾಧಿಸುವ ಪಣ ತೊಡಬೇಕು ಇದರಿಂದ ಆತ್ಮಬಲ ಮತ್ತು ದೃಢಸಂಕಲ್ಪ ಹೆಚ್ಚಿಸುತ್ತದೆ ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ ಹೇಳಿದರು.

ಮಹದೇವಿ ನಾದ ಮಧುರ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಮ|| ಮಹಾದೇವಿ ಎನ್. ಮುರಡಿ ಪ್ರಕಾಶನ ಕಲ್ಬುರ್ಗಿ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ನಗರದ ಪತ್ರಿಕ ಭವನದಲ್ಲಿ ಹಮ್ಮಿಕೊಂಡಿದ್ದ ಆದರ್ಶ ದಂಪತಿಗಳಿಗೆ ಹಾಗೂ ಸಾಧಕರಿಗೆ ಪ್ರಶಸ್ತಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ಡೋಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಪರಿಸ್ಥಿತಿ ಹೇಗೆ ಇರಲಿ ದೃಢಸಂಕಲ್ಪ ಮಾಡಿ ಸಾಧನೆಯತ್ತ ಮುನ್ನಗಬೇಕು ಸಂಘ-ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಹೊತ್ತಿಕೊಂಡು ನಾಲ್ಕು ಜನರಿಗೆ ದಾರಿ ದೀಪವಾಗಬೇಕು ಎಂದರು. ಸಿಂಡಿಕೇಟ್ ಸದಸ್ಯ ಎಸ್.ಪಿ. ಸುಳ್ಳದ, ಹಿರಿಯ ಹೋರಾಟಗಾರ ಡಾ. ಲಕ್ಷ್ಮಣ್ ದಸ್ತಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವ್ ಕುಮಾರ್ ಅತಿವಾಳೆ, ಡಾ. ಸುನಿಲ್ ಕುಮಾರ್ ಒಂಟಿ ಮಾತನಾಡಿದರು ರವಿಚಂದ್ರನ್ ಮಯೂರ್ ಗಂಗಾಧರ್ ಕಂದುಕುರ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷತೆ ಮಹದೇವಿ ಮುರುಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಇದೇ ಸಂದರ್ಭದಲ್ಲಿ ಶ್ರೀಮತಿ ಭುವನೇಶ್ವರಿ ಮುರುಡಿ ಅವರು ಬರೆದಿರುವ ಇನ್ ಸೈಡ್ ಮೈ ಪ್ರೆಟ್ಟಿ ಲಿಟಲ್ ಹೆಡ್ ಇಂಗ್ಲಿಷ (iಟಿsiಜe mಥಿ ಠಿಡಿeಣಣಥಿ ಟiಣಣಟe heಚಿಜ) ಪುಸ್ತಕವನ್ನು ಮಾತೋಶ್ರೀ ದಾಕ್ಷಾಯಿಣಿ ಎಸ್ ಅಪ್ಪ ಅವರು ಬಿಡುಗಡೆಗೊಳಿಸಿದರು.

ಪುಸ್ತಕ ಪರಿಚಯ ದೇವಿಂದ್ರಪ್ಪ ಗುಂಡಾಪುರವರು ಮಾಡಿದ್ದರು. ಆದರ್ಶ ದಂಪತಿಗಳ ಪ್ರಶಸ್ತಿಗೆ ಆಯ್ಕೆಯಾದ ಶ್ರೀಮತಿ ಭಾಗಮ್ಮ ರಾಜಕುಮಾರ ಉದನೂರ, ಶ್ರೀಮತಿ ಪುತಳಾಬಾಯಿ ಶಾಂತಪ್ಪ ಸಂಗಾವಿ, ಶ್ರೀಮತಿ ಜಯಶ್ರೀ ಡಾ.ಸುನಿಲಕುಮಾರ್ ವಂಟಿ, ಶ್ರೀಮತಿ ಜ್ಯೋತಿ ಡಾ. ವಾಸುದೇವ ಸೇಡಂ ಹೀಗೆ ಸುಮಾರು 21 ದಂಪತಿಗಳಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹೋರಾಟಗಾರ ಲಿಂಗರಾಜ್ ಸಿರಗಾಪುರ್, ಶಿವಲಿಂಗಪ್ಪ ಹಾದಿಮನಿ, ಶ್ರೀಧರ್ ಹೊಸಮನಿ, ಸಿದ್ದಾರ್ಥ್ ಚಿಮ್ಮ ಇದಲಾಯಿ, ಪ್ರಕಾಶ ಪೂಜಾರಿ, ಡಾ. ಗಾಂಧೀಜಿ ಮೋಳಕರೆ, ಶಂಕರ್ ಎಚ್ ರಾಮಣ್ಣ ಮಯೂರ್ ಇತರರಿಗೆ ಗೌರವಿಸಲಾಯಿತು. ಅವಳಿ ಸಂಸ್ಥೆಯ ಕಾರ್ಯದರ್ಶಿಯಾದ ಎಂ ಬಿ .ನಿಂಗಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಗಾಂಧೀಜಿ ಮೊಳಕೆರೆ ನಿರೂಪಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here