ಶಹಾಬಾದ: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳಲ್ಲಿ ಆಯೋಜಿಸಲು ಉದ್ದೇಶಿಸಿರುವ ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಅವರನ್ನು ಕಸಾಪ ಸಮ್ಮೇಳನ ಸಮಿತಿ ಸದಸ್ಯರೆಲ್ಲರೂ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಪ್ರಮುಖರಾದ ಮರೆಪ್ಪ ಹಳ್ಳಿ ತಿಳಿಸಿದರು.
ಅವರು ಮಂಗಳವಾರ ಕನ್ನಡ ಭವನದದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಕಳೆದ ಶನಿವಾರ ಕಸಾಪದ ಸರ್ವ ಸದಸ್ಯರ, ಪ್ರಮುಖರ, ಕನ್ನಡ ಪರ ಚಿಂತಕರ, ವಿವಿಧ ಸಂಘ ಸಂಸ್ಥೆಗಳ, ವ್ಯಾಪಾರಿಗಳ, ಕರವೇ ಸಂಘಟನೆ ಹಾಗೂ ಕನ್ನಡಪರ ಅಭಿಮಾನಿಗಳ ವಿಶೇಷ ಸಭೆ ಆಯೋಜನೆ ಮಾಡಲಾಗಿತ್ತು.
ಸಭೆಯಲ್ಲಿ ಸುಮಾರು ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಆರು ಹೆಸರುಗಳು ಸಭೆಯಲ್ಲಿದ್ದ ಸದಸ್ಯರು ಅಭಿಪ್ರಾಯವನ್ನು ಪ್ರಸ್ತಾಪಿಸಿದರು.ಅಲ್ಲದೇ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರ ಹಾಗೂ ಗೌರವಾಧ್ಯಕ್ಷರ ಆಯ್ಕೆ ಸಮಿತಿಯ ಪ್ರಮುಖರೆಲ್ಲರೂ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಅದಕ್ಕೆ ಎಲ್ಲರೂ ಬದ್ಧರಾಗಬೇಕೆಂದು ತಿಳಿಸಲಾಗಿತ್ತು. ಸಮಿತಿ ತಿರ್ಮಾನಕ್ಕೆ ಎಲ್ಲರೂ ಬದ್ದರಾಗಲು ಒಪ್ಪಲಾಯಿತು.
ನಂತರ ಪ್ರಮುಖರೆಲ್ಲರೂ ಸೇರಿ ಆರು ಜನರಲ್ಲಿ ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ನಗರದ ಜಿಇ ಕಾರ್ಖಾನೆಯ (ಎಬಿಎಲ್) ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತ ಸಾಹಿತ್ಯ ವಲಯದಲ್ಲಿ ತಮ್ಮನ್ನು ತಾವು ತೊಡಿಸಿಕೊಂಡ ಅವರು ಹೊಟ್ಟೆ ಬಾಕ ನರಿ, ಇನ್ನೀತರ ಕೃತಿಗಳನ್ನು ಬರೆದಿದ್ದಾರೆ.ಅಲ್ಲದೇ ಪತ್ರಕರ್ತರಾಗಿ ಸಾಮಾಜಿಕ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲೂ ಕೆಲಸ ಮಾಡಿದ್ದಾರೆ.ಶರಣ ಸಾಹಿತ್ಯದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದಾರೆ.ಯೋಗ ಶಿಬಿರ, ಮನೆಯಲ್ಲಿ ಮಹಾಮನೆ ಹಾಗೂ ಶಾಲೆಗಳಲ್ಲಿ ಜ್ಞಾನ ವಿಹಾರ ಕಾರ್ಯಕ್ರಮಗಳನ್ನು ನೀಡುತ್ತಾ ಸದಾ ಕ್ರೀಯಾಶೀಲ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಅಲ್ಲದೇ ಅವರೊಬ್ಬ ಸರಳ, ಎಲ್ಲರೊಂದಿಗೆ ಬೆರೆಯುವ ಹಾಗೂ ಎಲ್ಲರ ಅಭಿಪ್ರಾಯಗಳನ್ನು ಕೇಳುವ ಮನಸ್ಥಿತಿಯನ್ನು ಹೊಂದಿದ್ದಾರೆ.ಸಮಾಜದಲ್ಲಿ ಯಾರೊಬ್ಬರಿಂದಲೂ ಟೀಕೆಗೆ ಒಳಗಾಗದ ವ್ಯಕ್ತಿಯಾಗಿರುವುದರಿಂದ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕ ಅಧ್ಯಕ್ಷರಾಗ ಶರಣಬಸಪ್ಪ ಕೋಬಾಳ, ಅಣವೀರ ಇಂಗಿನಶೆಟ್ಟಿ, ಶರಣಗೌಡ ಪೆÇಲೀಸ್ ಪಾಟೀಲ, ಮೃತ್ಯುಂಜಯ ಸ್ವಾಮಿ ಹಿರೇಮಠ, ಪಿ.ಎಸ್.ಮೇತ್ರೆ, ಶರಣಗೌಡ ಪಾಟೀಲ, ನಾಗಣ್ಣ ರಾಂಪುರೆ ಅಜೀಮ್ ಸೇಠ, ಕನಕಪ್ಪ ದಂಡಗುಲಕರ್, ಶರಣು ವಸ್ತ್ರದ,ಬಾಬುರಾವ ಪಂಚಾಳ, ಡಾ.ಅಹ್ಮದ ಪಟೇಲ, ಗುಂಡಮ್ಮಾ ಮಡಿವಾಳ, ಗಿರಿಮಲ್ಲಪ್ಪ ವಳಸಂಗ ಇದ್ದರು.