ಪಿಡಿಎ ಇಂಜಿನಿಯರಿಂಗ್ ಕಾಲೇಜು ಐಐಐಟಿ ರಾಯಚೂರು ನಡುವೆ ನಯನ 2.0 ಜ್ಞಾಪನಾ ಒಪ್ಪಂದ

0
29

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜು ಹಾಗೂ ಐಐಐಟಿ ರಾಯಚೂರು ನಡುವೆ ನಯನ 2.0 ಮೆಮರೊಂಡಮ್ ಆಫ್ ಅಸೋಸಿಯೇಷನ್ ( ಜ್ಞಾಪಕ ಪತ್ರ ಸಹಯೋಗ) ಒಪ್ಪಂದ ನಡುವೆ ನಡೆಯಿತು.

ಈ ಜ್ಞಾಪಕ ಪತ್ರ ಸಹಯೋಗದಿಂದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವಾಗುವದರ ಜೋತೆಗೆ ಉನ್ನತ ಶಿಕ್ಷಣ ಅನುಕೂಲವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.

Contact Your\'s Advertisement; 9902492681

ಈ ಎರಡು ಸಂಸ್ಥೆಗಳ ಒಪ್ಪಂದ ಸಂದರ್ಭದಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್,ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ ಪ್ರಾಧ್ಯಾಪಕರಾದ ಡಾ ನಾಗೇಶ್ ಸಾಲಿಮಠ ಡಾ ನಾಗೇಂದ್ರ ಎಚ್ ರಾಯಚೂರು ಐಐಟಿ ನಿರ್ದೇಶಕರಾದ ಶ್ರೀ ಹರೀಶ್ ಕುಮಾರ್ ಸರ್ಡಾನಾ, ಡಾ ದುಬಚರ್ಲಾ ಜ್ಞಾನೆಶ್ವರ, ಡಾ ನಟೇಶ್ ಮತ್ತು ಕರ್ನಾಟಕ ಸ್ಟಾರ್ಟ್ ಅಫ್ ನ ಸಹಾಯಕ ವ್ಯವಸ್ಥಾಪಕ ಎಚ್ ಎಸ್ ಶಶಾಂಕ್ ಎಚ್ ಎಸ್ ಉಪಸ್ಥಿತರಿದ್ದರು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪತ್ರಿಕಾ ಮಾಧ್ಯಮ ಸಂಯೋಜಕ ಶ್ರೀ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here