ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ನೇತ್ರತ್ವದಲ್ಲಿ ಶುಕ್ರವಾರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆಗೆ ಆಗ್ರಹಿಸಿ ಧ್ವಜ ಪ್ರದರ್ಶಿ ಪ್ರತಿಭಟನೆ ನಡೆಸುತ್ತಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದಿರುವ ಘಟನೆ ಜರುಗಿತ್ತು. ಯತ್ನಿಸಿ
ಕರ್ನಾಟಕ ರಾಜ್ಯೋತ್ಸವದ ದಿನಾಚರಣೆ ಅಂಗವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಎಲ್ಲಾ ರಿತಿಯಿಂದ ಆಗುತ್ತಿರುವ ಅನ್ಯಾಯ ಖಂಡಿಸಿ ನಗರದ ಸರ್ದಾರ ವಲ್ಲಬಬಾಯಿ ಪಟೇಲ ವೃತ್ತದಲ್ಲಿ ಕ ಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ತೆರಳತ್ತಿದ್ದ ಹೋರಾಟಗಾರರನ್ನುಪೊಲೀಸರು ವಶಕ್ಕೆ ತೆಗೆದುಕೊಂಡು ಸಂದರ್ಭದಲ್ಲಿ ಮಾತನಾಡಿದ ಎಂ ಎಸ್ ಪಾಟೀಲ ನರಿಬೋಳ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರ ಅನ್ಯಾಯವಾಗುತ್ತಿದೆ 371 ಜೆ ಕಲಂ ಸಂಪುರ್ಣ ಕಾರ್ಯರೂಪಕ್ಕೆ ಬರುತ್ತಿಲ್ಲಾ ಉದ್ದೇಶ ಪೂರ್ವಕ ಸಂಪೂರ್ಣ ಜಾರಿಯಾಗಲು ಕ ಕ ಹೋರತು ಪಡಿಸಿದ ಜನಪ್ರತಿನಿದಿಗಳು ಕೇಲ ಕುತಂತ್ರಿ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದರು.
ನಮ್ಮ ಭಾಗದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲ ನಮ್ಮ ಪ್ರದೇಶದ ಪ್ರಮುಖ ಬೆಳೆಗಳಾದ ತೊಗರಿ ಜೋಳಕ್ಕೆ ಬೆಂಬಲ ಬೇಲೆ ನೀಡದ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕಾವೇರಿಗೆ ಆರತಿ ಮಾಡುತ್ತೆವೆ ಎನ್ನವ ಸರ್ಕಾರ ತುಂಗಬದ್ರಾ ಕಷ್ಣಾ ಭೀಮಾ ಪ್ರಮುಖ ನದಿಗಳ ಬಗ್ಗೆ ಮಲತಾಯಿ ದೋರಣೆ ತಾಳಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕ.ಕ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯವೆ ಮದ್ದು ಎಂದು ಮನಗಂಡು ಇಂದು ರಾಜ್ಯೊತ್ಸವ ದಿನದಂದೆಕ ಕ ಪ್ರತ್ಯೇಕ ಧ್ವಜಾರೋಹಣ ಮಾಡುವ ಮುಖಾಂತರ ರಾಜ್ಯ ಕೆಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಮುಂದಿನ ದಿನಗಳಲ್ಲಿ ಕ ಕ ಪ್ರದೇಶದ ಎಲ್ಲಾ ಜಿಲ್ಲೆ ತಾಲೂಕು ಹಳ್ಳಿ ಹೋಬಳಿ ಮಟ್ಟದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ತೆಲಂಗಾಣ ಮಾದರಿ ಹೋರಾಟ ಮಾಡುತ್ತೆವೆ ಎಂದು ತಿಳಿಸಿದರು.
ಸರ್ಕಾರ ಪೊಲೀಸರ ಮುಖಾಂತರ ಹೋರಾಟ ಅತ್ತಿಕ್ಕಿಸುವ ಪ್ರಯತ್ನ ಮಾಡಿದೆ ಇದನ್ನು ಖಂಡಿಸಿಸುತ್ತೆವೆ ಬಂಧನಕ್ಕೆ ಹೆದರಿ ಹೋರಾಟ ಕೈಬಿಡದೆ ಮುಂದೆ ಉಗ್ರ ಹೋರಾಟ ಮಾಡುತ್ತೆವೆ ಎಂದು ಹೇಳಿದರು .
ಹೋರಾಟದಲ್ಲಿ ವಿನೋದ ಕೂಮಾರ ಜನೆವರಿ, ಲಕ್ಮೀಕಾಂತ ಸ್ವಾದಿ, ಗ್ರಾಮಿಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ನಾಯಕ, ಶರಣಗೌಡ ಪೊಲೀಸ್ ಪಾಟೀಲ ನರಿಬೋಳ, ಉದಯಕೂಮಾರ ಜೇವರ್ಗಿ, ಸೋಮಶೇಖರ ಸ್ವಾಮಿ, ಸಂಗಣಗೌಡ ಪಾಟೀಲ, ಸುಮಾ ಕವಲ್ದಾರ, ಅನುರಾದ ಹೂಗಾರ, ಶಮಿನಾ ಬೆಗಂ, ಶಹನಾ ಶೇಖ, ವಿಶ್ವರಾಧ್ಯ ಬಡಿಗೇರ ,ಸಿದ್ದಣ್ಣ ನಾಯಕ, ನಿಂಗಣ್ಣ ಚಿಗರಹಳ್ಳಿ,ದೌಲತರಾಯ್ಯ ನೀರಲಕೋಡ. ಸುನಿಲ್ ಶಿರ್ಕೆ. ಶರಣು ಮಳಕೇಡ್. ಸಂಗು ಕಾಳನೂರ್. ಚಿದಾನಂದ ಸ್ವಾಮಿ.ಪ್ರಶಾಂತ್ ಶಿರೂರ್ ಇನ್ನಿತರರಿದ್ದರು.