ಜೈ ಕನ್ನಡಿಗರ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

0
15

ಕಲಬುರಗಿ: ನಗರದ ಜೀಮ್ಸ್ ಆಸ್ಪತ್ರೆಯಲ್ಲಿರುವ ಇಂದಿರಾ ಕ್ಯಾಂಟಿನ್‍ನಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಜೈ ಕನ್ನಡಿಗರ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಜಿಮ್ಸ್ ಆಸ್ಪತ್ರೆಯಲ್ಲಿರುವ ಇಂದಿರಾ ಕ್ಯಾಂಟಿನನಲ್ಲಿ ಸಂಪೂರ್ಣ ಕಳಪೆ ಆಹಾರ ಸರಬರಾಜು ಮಾಡುತ್ತಿದ್ದಾರೆ ನಮ್ಮ ಸಂಘಟನೆಯ ವತಿಯಿಂದ ಖುದ್ದಾಗಿ ಭೇಟಿ ನೀಡಿ ನೋಡಲಾಗಿ ಅಲ್ಲಿರುವಂತಹ ಪದಾರ್ಥಗಳಾದ ಸಾಂಬಾರನಲ್ಲಿ ಯಾವುದೇ ರೀತಿಯ ಪೌಷ್ಠಿಕವಾದ ತರಕಾರಿಗಳು ಇರುವುದಿಲ್ಲ ಈ ಸಾಂಬಾರ ಸಂಪೂರ್ಣವಾಗಿ ನೀರಿನಂತೆ ಕಾಣುತ್ತದೆ ವಿನಹ ಇದರಲ್ಲಿ ಒಂದು ಸ್ವಲ್ಪವೂ ಕೂಡಾ ಸ್ವಾದ ವಿರುವದಿಲ್ಲ. ಅನ್ನದಲ್ಲಿ ಸರಕಾರದ ಪ್ರಕಾರ ಕಳುಹಿಸುವಂತಹ ಅಕ್ಕಿ ಬಳಸದೆ ಅಗ್ಗವಾದ ಅಕ್ಕಿಯನ್ನು ಬಳಸುತ್ತಿದ್ದಾರೆ. ಚಪಾತಿ ತಯಾರಿಸುತ್ತಾರೆ ಅದು ಕೂಡಾ ಅರ್ಧಕ್ಕಿಂತ ಕಡಿಮೆ ಬೆಯಿಸಿ ಸಾರ್ವಜನಿಕರಿಗೆ ನೀಡಲು ಬಳಸುತ್ತಾರೆ.

Contact Your\'s Advertisement; 9902492681

ಯಾವುದೇ ರೀತಿಯ ತರಕಾರಿ ಪಲ್ಯ ಮಾಡಿದರು ಆ ತರಕಾರಿಯು ಒಂದು ರೀತಿಯಲ್ಲಿ ಧನಕರುಗಳಿಗು ಹಾಕಲು ಯೋಗ್ಯವಿರುವದಿಲ್ಲ. ಅಂತಹ ತರಕಾರಿಗಳನ್ನು ಬಳಸುತ್ತಾರೆ ಬೆಳಿಗ್ಗಿನ ಜಾವದ ತಿಂಡಿಯಲ್ಲಿ ಮಾಡುವಂತಹ ಉಪ್ಪಿಟ್ಟ ಮತ್ತು ಶೀರಾ ಕೂಡಾ ಒಂದು ದಿನ ಬಿಟ್ಟು ಒಂದು ದಿನ ನೀಡುತ್ತಾರೆ ಅದು ಕೂಡಾ ಸಂಪೂರ್ಣವಾಗಿ ನೀರಿನಿಂದ ಕೂಡಿರುತ್ತದೆ. ಬೆಳಗಿನ ಜಾವ ಒಂದು ದಿನ ತಿಂಡಿ ನಿಡದಿದಲ್ಲಿ ಆ ದಿನ ಅದರ ಹಿಂದಿನ ದಿನ ಒಳಿದ ಚಪಾತಿ ಪಲ್ಯ ಮತ್ತು ಅನ್ನ ನೀಡುತ್ತಾರೆ. ಒಟ್ಟಾರೆಲ್ಲಿಗಿ ಹೇಳಬೇಕಾದರೆ ಇವರು ಇಂದಿರಾ ಕ್ಯಾಂಟಿನಿನ ಮೆನ್ಯೂ ಕಾರ್ಡ ಪ್ರಕಾರ ಯಾವುದೇ ರೀತಿಯ ಆಹಾರ ಪದಾರ್ಥಗಳು ಸರಿಯಾಗಿ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿರುವದಿಲ್ಲ.

ಅದೇ ರೀತಿಯಾಗಿ ಕಲಬುರಗಿ ನಗರದ ಬಸ್ ನಿಲ್ದಾಣದ ಬಳಿಯಿರುವ ಇಂದಿರಾ ಕ್ಯಾಂಟಿನಿಗೆ ಭೇಟಿ ನೀಡಿದಾಗ ಆಹಾರ ಪದಾರ್ಥಗಳಲ್ಲಿ ಜಿರಳೆ ಮತ್ತು ಇನ್ನಿತರ ಅಪಾಯಕಾರಿ ಹುಳಗಳು ಅಡುಗೆಯಲ್ಲಿ ಬಿದ್ದಿದ್ದರು ಅದನ್ನೆ ಸಾರ್ವಜನಿಕರಿಗೆ ಆಹಾರ ಸರಬರಾಜು ಮಾಡುತ್ತಿದ್ದಾರೆ.

ಆದ್ದರಿಂದ ದಯಾಳುಗಳಾದ ತಾವುಗಳು ಈ ಹಿಂದೆ ನೀಡಿರುವ ಕಲಬುರಗಿ ನಗರದ 7 ಇಂದಿರಾ ಕ್ಯಾಂಟಿನಗಳ ಟೆಂಡರ್‍ನ್ನು ರದ್ದು ಪಡಿಸಿ ಒಳ್ಳೆಯ ನಿಷ್ಠಾವಂತ ಟೆಂಡರದಾರರಿಗೆ ಅಥವಾ ಒಬ್ಬ ಒಳ್ಳೆಯ ನೆಮ್ಮ ಸ್ಥಳಿಯ ಟೆಂಡರದಾರರಿಗೆ ಟೆಂಡರ ನೀಡಬೇಕೆಂದು ಜೈ ಕನ್ನಡಿಗರ ಸೇನೆ ಘಟಕದ ವತಿಯಿಂದ ಆಗ್ರಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ದತ್ತು ಭಾಸಗಿ, ಗೌರವ ಅಧ್ಯಕ್ಷರಾದ ಸುಭಾಷ ಬನ್ನಪಟ್ಟೆ, ಜಿಲ್ಲಾ ಉಪಾಧ್ಯಕ್ಷರಾದ ನವೀನಕುಮಾರ ದುಮ್ಮನಸೂರ, ಹುಸೇನ, ಸಾಗರ, ಅನೀಲ ತಳವಾರ, ಮಲ್ಲು ಆಲಗೂಡ, ಪ್ರಕಾಶ, ಗೌತಮ ಗೋರೆ, ಶಿವಪ್ರಕಾಶ ಕುಸ್ತಿ, ರೋಹನ ಇನ್ನೂ ಹಲವಾರು ಕಾರ್ಯಕರ್ತಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here