ಕೆಎಚ್‌ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಜನಪದ ಸಂಗೀತ ಸಂಭ್ರಮ

0
7

ಕಲಬುರಗಿ: ಮನುಷ್ಯನ ಮಲಿನದ ಮನಸ್ಸು ಸ್ವಚ್ಛಗೊಳಿಸಿ ಸರ್ವರನ್ನು ಒಂದುಗೂಡಿಸುವ ಶಕ್ತಿ ಸಂಗೀತಕ್ಕಿದೆ ಎಂದು ಕೆಎಚ್‌ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಂಜೀವಕುಮಾರ ಶೆಟ್ಟಿ ಹೇಳಿದರು.

ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಶ್ರೀ ದೇವಿ ಸರಸ್ವತಿ ಕಲಾ ಬಳಗ ಸಂಘ(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ “ಜನಪದ ಸಂಗೀತ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಕಲಾವಿದರು ಹಗಲಿರಳು ಸೇವೆ ಮಾಡಿ ಜನಪದ ಸಾಹಿತ್ಯ ಉಳಿಸುವುದರೊಂದಿಗೆ ಸಮಾಜದ ಆಸ್ತಿಯಾಗಿದ್ದರೆ. ಅವರನ್ನು ಗೌರವಿಸಿ ವೇದಿಕೆ ಕೊಡುವುದರೊಂದಿಗೆ ಸಮಾಜಕ್ಕೆ ಪರಿಚಯಿಸುವ ಕಾರ್ಯ ನಿರಂತರವಾಗಿ ಸಾಗಬೇಕು ಎಂದು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಹಲವಾರು ಜನ ಕಲಾವಿದರು ಕಷ್ಟದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಂತಹವರಿಗೆ ಸರಕಾರ ಗುರುತಿಸಿ ಪ್ರತಿ ತಿಂಗಳು ಮಾಶಾಸನ ಕೊಡುವುದರೊಂದಿಗೆ ಕಷ್ಟಕ್ಕೆ ಸ್ಪಂದಿಸಲಿ ಎಂದು ಹೇಳಿದರು.

ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಕುಲಕರ್ಣಿ ಅಧ್ಯಕ್ಷತೆ ವಹಿಸಿದರು. ರವೀಂದ್ರ ಗುತ್ತೇದಾರ, ದಿಲೀಪಕುಮಾರ ಭಕ್ರೆ, ವಿನೋದ ಪಡನೂರ, ವೀರೇಶ ಬೋಳಶೆಟ್ಟಿ, ಶಿವಕಾಂತ ಚಿಮ್ಮಾ, ಸಂಜೀವಕುಮಾರ ಖೊಬರೆ, ಸಂಗಮೇಶ ಸರಡಗಿ, ಶ್ರೀನಿವಾಸ ಬುಜ್ಜಿ, ಸುರೇಖಾ ಸಾವಳಗಿ, ಲಲಿತಾ ಗೋಲಗೇರಿ, ಶರಣಬಸಪ್ಪ ದೇಶಟ್ಟಿ, ಸಂತೋಷಕುಮಾರ ಧೂಪದ,ಸಂಘದ ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಸೂರ್ಯಕಾಂತ ಶಾಸ್ತ್ರಿ ದುತ್ತರಗಾಂವ, ವೀರಯ್ಯ ಮಠಪತಿ, ರವಿ ಸ್ವಾಮಿಗೋಟೂರ, ಶ್ರೀಶೈಲ ಯಳಸಂಗಿ, ವೀರಭದ್ರಯ್ಯ ಸ್ಥಾವರಮಠ, ಗಂಗಾಂಬಿಕ ಮಠಪತಿ, ಪವಿತ್ರಾ ಮಠ, ಸೂರ್ಯಕಾಂತ ಪೂಜಾರಿ, ಪರಶುರಾಮ ಗರೂರ,ಲೀಲಾವತಿ ಚಂದ್ರಕಾಂತ,ರಾಧಿಕಾ ಹೆಬ್ಬಾಳಕರ,ರಾಜು ಹೆಬ್ಬಾಳ ಸೇರಿದಂತೆ ಅನೇಕ ಜನ ಕಲಾವಿದರು ನೆರೆದವರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಬಡಾವಣೆಯ ಅನೇಕ ಜನ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here