ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ ಅಲ್ಲಮ ಪ್ರಭು ಪಾಟೀಲ್ ರವರು ಉದ್ಘಾಟಿಸಿದರು.
ಹೊಸ ಉದ್ಯೋಗಾವಕಾಶಗಳನ್ನು ಸ಼ೃಷ್ಟಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕತೆ ಇದ್ದುಈ ಭಾಗದಲ್ಲಿ ಅತಿ ಅವಶ್ಯಕತೆ ಇದ್ದ ಹೊಸ ಉದ್ದಿಮೆಗಳಿಗೆ ಈ ಕಾರ್ಯಕ್ರಮ ಮೆಟ್ಟಿಲಾಗಲಿದೆ.ಎಂದು ಹೇಳಿದರು.
ಕಾರ್ಯಕ್ರಮ ಅದ್ಯಕ್ಷತೆ ವಹಿಸಿದ್ದ ಸಹ ಆಯೋಜಕ ಸಂಸ್ಥೆಯಾದಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅದ್ಯಕ್ಷರಾದಶಶೀಲ್ ಜಿ ನಮೋಶಿ ನವೋದ್ಯಮಗಳ ಉತ್ತೇಜನ ಮತ್ತು ಹೊಸ ಉದ್ಯೋಗ ಸೃಷ್ಟಿಸಲು ನಮ್ಮ ಸಂಸ್ಥೆಬ್ಯಸಿನೆಸ್ ಇನ್ಕಿಬ್ಯೇಶನ್ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ಯೋಜನೆಗೆ ಮನವಿ ಸಲ್ಲಿಸಲಾಗುವುದು ಹಾಗು ಈಗಾಗಲೇ ಹೊಸ ಉದ್ಯಮಗಳಿಗೆ ಎದುರಾಗಿರುವ ಪ್ರಾಥಮಿಕ ತೊಂದರೆಗಳನ್ನು ಹೊಡೆದುಹಾಕಲು ನಮ್ಮ ಸಂಸ್ಥೆ ಈ ಭಾಗದ ಯುವೋದ್ಯಮಿಗಳ ಜೊತೆ ಎಂದಿಗೂ ನಿಂತಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹೊಸ ಉದ್ಯಮಗಳ ಸೃಷ್ಟಿಸಲು ಬೇಕಾಗಿರುವ ಸವಲತ್ತುಗಳು, ಹೊಸ ಆವಿಶ್ಕಾರ, ನೆಟ್ವರ್ಕಿಂಗ್, ಹೊಸ ಉದ್ಯಮ ಮತ್ತು ಉದ್ಯಮವಕಾಶಗಳ ಕುರಿತು ಚರ್ಚಿಸಲಾಯಿತು ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಫೌಂಡೇಶನ್ ಪರವಾಗಿಬಸವರೆಡ್ಡಿಶ್ರೀಶೈಲ ಪಟಾಟೆಯವರೂ ಈ ವಿಷಯಗಳ ಕುರಿತು ಈ ಭಾಗದ ಯುವ ಉದ್ಯಮಿಗಳಿಗೆ ಸಹಕಾರ ನೀಡುವ ಸಲುವಾಗಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಆಡಳಿತ ಮಂಡಳಿ ಸದಸ್ಯರಾದ ಡಾ ಅನಿಲಕುಮಾರ ಪಟ್ಟಣ, ಡಾ ಎಸ್ ಆರ್ ಹರವಾಳ, ಸ್ಪಾರ್ಟ ಅಪ್ ಸಿಇಓ ಬಸವರೆಡ್ಡಿ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್,ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ, ಡಾ ಭಾರತಿ ಹರಸೂರ, ಡಾ ನಾಗೇಶ್ ಸಾಲಿಮಠ ಉಪಸ್ಥಿತರಿದ್ದರು.