ಡಾ. ಶರಣಮ್ಮ ಗೊರೆಬಾಳ ಅವರ ಮತ್ತೆ ನಕ್ಕಿತು ಭೂಮಿ ಕವನ ಸಂಕಲನದ ಬಿಡುಗಡೆ

0
16

ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಡಾ. ಶರಣಮ್ಮ ಗೋರೆಬಾಳ ರಚಿಸಿದ ಮತ್ತೆ ನಕ್ಕಿತು ಭೂಮಿ ಕವನ ಸಂಕಲನವನ್ನು
ಡಾ. ಎಂ ಎಂ ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರು ದತ್ತಿ ಉಪನ್ಯಾಸ ಉದ್ಘಾಟಿಸಿ ಪುಸ್ತಕ ಬಿಡುಗಡೆಗೊಳಿಸಿ ಕಾವ್ಯ ಜೀವನಾನುಭವಗಳ ಸುಂದರ ಅಭಿವ್ಯಕ್ತಿ, ಲೇಖಕಿ ತಮ್ಮ ಜೀವನದ ನೋವು ನಲಿವು, ಪ್ರೀತಿ, ಪ್ರೇಮಗಳನ್ನು ಕವನದಲ್ಲಿ ಹಿಡಿದಿಟ್ಟಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿದ ಶರಣಮ್ಮ ರೈತರ ಕಷ್ಟ ಸುಖ, ಆತಂಕಗಳನ್ನು ಕಣ್ಣಾರೆ ಕಂಡವರು, ರೈತನ ಮುಖದಲ್ಲಿ ನಗು ಬರಲು ಮಳೆ ಬೇಕು, ಬೆಳೆ ಬರಬೇಕು, ಅಂದಾಗ ಪ್ರತಿಯೊಬ್ಬನ ಮುಖದಲ್ಲಿ ಮಂದಹಾಸ ಕಾಣುತ್ತದೆ ಎಂಬ ಆಶಾ ಭಾವವನ್ನು ತಮ್ಮ ಕವನದಲ್ಲಿ ವ್ಯಕ್ತಪಡಿಸಿದ್ದಾರೆ ತಿಳಿಸಿದರು .
ಬಸವ ಅಂತರಾಷ್ಟ್ರೀಯ ತಿಳುವಳಿಕೆ ಕೇಂದ್ರ ಪುಣೆ ಇದರ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು ಕೃತಿ ಪರಿಚಯ ಮಾಡಿ, ಮಹಿಳೆಯ ಬದುಕೇ ಒಂದು ಕಾವ್ಯ, ಲೇಖಕಿ ಆಂತರಿಕ ತಲ್ಲಣಗಳಿಗೆ, ತಮ್ಮ ನೋವು ನಲಿವುಗಳಿಗೆ ಕವನದ ರೂಪ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಡಾ.ಶ್ರೀಧರ್ ಹೆಗಡೆ ಬಧ್ರನ್ ಅವರು ಅನ್ಯ ನಿರೂಪಣಾ ಆತ್ಮಕಥನಗಳು ತಾತ್ವಿಕ ಚಿಂತನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಜೀವನದಲ್ಲಿ ಸಾಧನೆ ಮಾಡಿದ ಎಷ್ಟೋ ಮಹಾನ್ ವ್ಯಕ್ತಿಗಳು ಅನಕ್ಷರಸ್ಥರಾಗಿದ್ದು ಆತ್ಮಕಥೆಗಳನ್ನು ಬೇರೆಯವರ ಕಡೆ ಬರೆಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಆತ್ಮಕಥೆಗಳನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಅದರ ಹಕ್ಕು ಆತ್ಮಕಥೆಗಾರನದು ಅಥವಾ ನಿರೂಪಣ ಮಾಡಿದ ಲೇಖಕರದು ಎಂಬ ಗೊಂದಲ ಉಂಟಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಡಾ. ಲಿಂಗರಾಜ್ ಅಂಗಡಿಯವರು ಲೇಖಕಿಯ ಕುರಿತು ಮಹಿಳೆಯರ ಜೀವನದ ಹೋರಾಟದ ಕುರಿತು ಅತ್ಯಂತ ಆತ್ಮೀಯವಾದ ನುಡಿಗಳನ್ನಾ ಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಶರಣಮ್ಮ ಗೊರೆಬಾಳ ಅವರ ಕವನ ಸಂಕಲನದ ಕೆಲವು ಕವನಗಳನ್ನು ಡಾ. ಜ್ಯೋತಿ ಲಕ್ಷ್ಮಿ ಡಿಪಿ ಅವರು ರಾಗ ಸಂಯೋಜನೆ ಮಾಡಿ ಹಾಡಿದರು. ಕುಮಾರಿ ಲಕ್ಷ್ಮಿ ಹಳ್ಳೂರ ಪ್ರಾರ್ಥಿಸಿದಳು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಡಾ.ಶರಣಮ್ಮ ಗೋರೆಬಾಳ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಂತೇಶ್ ನರೇಗಲ್ ವಂದಿಸಿದರು. ಶ್ರೀಮತಿ ಮೇಘಾ ಹುಕ್ಕೇರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾದೇವ ಹೊರಟ್ಟಿ , ಡಾ .‌ಎಸ್ ಎಸ್ ದೊಡಮನಿ, ವೆಂಕಟೇಶ್ ಮಾಚಕನೂರ, ಮೃತ್ಯುಂಜಯ ಶೆಟ್ಟರ್, ಡಾ. ಶಿವಾನಂದ ಶೆಟ್ಟರ್, ಎ ಎಲ್ ಗೊರೆಬಾಳ, ಸೋಮಶೇಖರ ದೇವಲಾಪುರ, ಉಮಾ ಬಾಗಲಕೋಟೆ , ಶಾಂತವೀರ ಬೆಟಗೇರಿ, ಚೆನ್ನಪ್ಪ ಅಂಗಡಿ, ಎಸ್ ಎಚ್ ಪ್ರತಾಪ್,ಪ್ರಮಿಳಾ ಜಕ್ಕನ್ನವರ, ಗೀತಾ ಕುಲಕರ್ಣಿ,ಮಾರ್ತಾಂಡ ಪ್ಪಾ ಕತ್ತಿ, ಎಫ್ ಬಿ ಕಣವಿ, ಬಸವರಾಜ ಗಂಟೆ ಗೊರವರ, ಸಿ ಎಮ್ ಕೆಂಗಾರ, ಮುಂತಾದವರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here