ಕಲಬುರಗಿ: ಮಂಗಳವಾರ ಕಲಬುರಗಿ ನಗರದ ಹೊರವಲಯದ ಕಪನೂರ ಪ್ರದೇಶದಲ್ಲಿರುವ ಕಲಬುರಗಿ ಗ್ರಾಮಾಂತರ ಮತ್ತು ನಗರ ತಾಲೂಕು ಎಮ್.ಎಸ್.ಪಿ.ಸಿ (ಮಹಿಳಾ ಪೂರಕ ಪೌಷ್ಠಿಕ ಆಹಾರ ತರಬೇತಿ ಹಾಗೂ ತಯ್ಯಾರಿಕೆ ಕೇಂದ್ರ)ಕ್ಕೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಪೌಷ್ಠಿಕ ಅಹಾರ ಪದಾರ್ಥಗಳ ದರ ಮತ್ತು ಮೆನು ನಿಗದಿಯ ಮೇಲ್ಚಿಚಾರಣಾ ಸಮಿತಿಯ ಅಧ್ಯಕ್ಷ ಸುಬೋಧ ಯಾದವ ಅವರು ಭೇಟಿ ನೀಡಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಲಾಗುತ್ತಿರುವ ಅಹಾರ ಪದಾರ್ಥಗಳನ್ನು ಪರಿಶೀಲಿಸಿದರು.
ಆಹಾರ ಪದಾರ್ಥಗಳ ತಯ್ಯಾರಿಕೆ, ಗುಣಮಟ್ಟ ಮತ್ತು ಸಾಗಾಣಿಕೆ ಕುರಿತು ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡ ಅವರು ನಂತರ ಕಪನೂರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಪೌಷ್ಠಿಕ ಅಹಾರ ಸರಿಯಾದ ರೀತಿಯಲ್ಲಿ ವಿತರಣೆ ಮಾಡುತ್ತಿರುವ ಕುರಿತು ಖುದ್ದಾಗಿ ವೀಕ್ಷಿಸಿದರು.
ಇದಲ್ಲದೆ ಕಲಬುರಗಿ ಗ್ರಾಮೀಣ ಯೋಜನೆಯ ಮಾದರಿ ಶಾಲಾ ಪೂರ್ವ ಶಿಕ್ಷಣ ನಡೆಯುವ ತಾವರಗೇರಾ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿದ ಸುಬೋಧ ಯಾದವ ಅವರು ಅಲ್ಲಿನ ಮಕ್ಕಳ ಕಲಿಕಾ ಚಟುವಟಿಕೆಗಳ ಕುರಿತು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಡಾ. ರಾಜಾ ಪಿ., ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರವೀಣಕುಮಾರ ಹೇರೂರ, ಮತ್ತು ತಿಪ್ಪಣ್ಣ ಹಾಜರಿದ್ದರು.