ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ದಿನಾಂಕ 04 ರಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡಿದ ಛಲವಾದಿ ನಾರಾಯಣ ಸ್ವಾಮಿ, ಎನ್. ಮಹೇಶ, ಮತ್ತು ಎನ್. ರವಿಕುಮಾರ್ ಇವರಿಗೆ ನನ್ನದೊಂದು ಪ್ರಶ್ನೆ. ಕಲಬುರಗಿ ಜಿಲ್ಲೆಯಲ್ಲಿ ಮೀಸಲು ಕ್ಷೇತ್ರವಾಗಿರುವ ಚಿತ್ತಾಪುರ, ಚಿಂಚೋಳಿ, ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಾಗಿದ್ದು, ಹಾಗೂ ಲೋಕಸಭಾ ಕ್ಷೇತ್ರ ಕೂಡಾ ಮೀಸಲು ಕ್ಷೇತ್ರ ಆಗಿರುತ್ತದೆ, ಆದರೆ ಈ ಮೂರು ಕ್ಷೇತ್ರಗಳಲ್ಲಿ ಛಲವಾದಿ ನಾರಾಯಣ ಸ್ವಾಮಿಯವರೇ ನೀವು ಯಾವ ಸಮುದಾಯದ ಹೆಸರು ಹೇಳಿಕೊಂಡು ಬೆಳದಿದ್ದೀರಿ ಆ ಸಮುದಾಯಕ್ಕೆ ಬಿಜೆಪಿ ಪಕ್ಷದಿಂದ ಒಂದಾದರೂ ಟಿಕೇಟ್ ನೀಡಿದ್ದೀರಾ? ಟಿಕೆಟ್ ಹಂಚಿಕೆಯ ವಿಚಾರದಲ್ಲಿ ನೀವು ಒಂದೇ ಒಂದು ದಿನ ನಮ್ಮ ಸಮುದಾಯಕ್ಕೆ ಒಂದು ಟಿಕೆಟ್ ಕೊಡಿ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಕೇಳುವ ತಾಕತ್ತು ಮತ್ತು ಬಿಜೆಪಿಯ ಹೈಕಮಾಂಡಗೆ ಪ್ರಶ್ನೆ ಮಾಡುವ ಧಮ್ಮು ನಿಮಗೆ ಇದಿಯಾ, ಸ್ವಾಭಿಮಾನವಿಲ್ಲದ ಸ್ವಾರ್ಥ ನಾಯಕ ನೀವು? ತಾವುಗಳು ಮೂಲತಃ ಎಲ್ಲಿಂದ ರಾಜಕೀಯಕ್ಕೆ ಬಂದಿದ್ದಿರಿ, ಮತ್ತು
ಕಲ್ಬುರ್ಗಿ ಜಿಲ್ಲೆಯ ಮತದಾರರನ್ನು ಬಿಟ್ಟು ನಿಮ್ಮನ್ನು ರೈಲ್ವೆ ಬೋರ್ಡ್ ಚೇರ್ಮನ್ ಮಾಡಿದ್ದರು ಆದರೂ ಮಾಡಿದವರ ಬಗ್ಗೆ ಅರಿವಿಲ್ಲವೆ? ಛಲವಾದಿ ನಾರಾಯಣ ಸ್ವಾಮೀಯವರೆ ತಮಗೆ ರಾಜಕೀಯಲ್ಲಿ ಅತ್ಯಂತ ಎತ್ತರವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದೆ ಕಾಂಗ್ರೇಸ್ ಪಕ್ಷ ಅನ್ನೋದು ಮರೆತ್ತಿದ್ದಿರಿ ಎಂದು ಕಾಂಗ್ರೆಸ್ ಪಕ್ಷದ ಎಸ್ಸಿ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ನೀಲೂರ ಅವರು ವ್ಯಂಗ್ಯವಾಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,ಇತ್ತಿಚೀಗೆ ನಗರಕ್ಕೆ ಆಗಮಿಸಿದ ಛಲವಾದಿ ನಾರಾಯಣ ಸ್ವಾಮೀಯವರೆ ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದರು ? ಕಲಬುರ್ಗಿ ನಗರಕ್ಕೆ ಬಂದು ಎನ್. ಮಹೇಶ ರವರೇ ನೀವು ಬಿ.ಎಸ್.ಪಿ ಪಕ್ಷದಲ್ಲಿದ್ದಾಗ ತಮಗೆ ನಮ್ಮ ಸಮಾಜದ ವಿದ್ಯಾವಂತರು ಯುವಕರು ಬುದ್ಧಿಜೀವಿಗಳು ಸಾಮಾಜಿಕ ಕಾರ್ಯಕರ್ತರು ಅದೆಷ್ಟೋ ಪಕ್ಷದ ಲಕ್ಷಾಂತರ ಸದಸ್ಯರು ನಿಮ್ಮನ್ನು ನಂಬಿ ನಿಮಗೆ ಆರಿಸಿಕೊಂಡು ಬಂದಿದ್ದರು ಆದರೆ ನೀವು ಬಾಬಾ ಸಾಹೇಬ್ ಅವರ ತತ್ವ ಸಿದ್ದಾಂತಗಳ ವಿರೋಧಿಯಾಗಿರುವ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ತಮಗೆ ನಂಬಿರುವ ಕರ್ನಾಟಕದ ದಲಿತ ಮತ್ತು ಹಿಂದುಳಿದ ಜನರಿಗೆ ದ್ರೋಹ ಮಾಡಿದ್ದಿರಿ. ಈಗ ಕಲಬುರಗಿ ನಗರಕ್ಕೆ ಬಂದು ರಾಜ್ಯ ಕಂಡ ಅತ್ಯಂತ ಜನಪ್ರಿಯ ನಾಯಕರಾದ ಅದರಲ್ಲೂ ದಲಿತ ನಾಯಕರಾದ ಸನ್ಮಾನ್ಯ ಪ್ರಿಯಾಂಕ ಖರ್ಗೆಜಿ ಅವರ ವಿರುದ್ಧ ಪ್ರತಿಭಟನೆ ಮಾಡಲು ನಾಚಿಕೆ ಬರಲಿಲ್ಲವೇ? ‘ಎನ್. ರವಿಕುಮಾರ ಕಲಬುರಗಿ ಜಿಲ್ಲೆಯಾದ್ಯಂತ ನಗರದಲ್ಲಿ 5 ಕ್ಷೇತ್ರಗಳಲ್ಲಿ ಒಂದಾದರೂ ನೀವು ಹುಟ್ಟಿದ ಸಮಾಜದ ಜನರಿಗೆ ಬಿಜೆಪಿಯಿಂದ ಒಂದಾದರೂ ಟಿಕೆಟ್ ಕೊಡಿಸಿದ್ದಿರಾ? ಇದು ನಿಮ್ಮ ಸಮಾಜಕ್ಕೆ ಮಾಡಿದ ಘೋರ ಅನ್ಯಾಯವಾಗಿರುತ್ತದೆ.
ಎನ್. ರವಿಕುಮಾರ ರವರೇ ನೀವು ನಿಮ್ಮ ಸಮಾಜಕ್ಕೆ ನ್ಯಾಯ ಕೂಡಿಸಲು ಆಗಿಲ್ಲ. ಆದರೆ ಬೇರೆ ಸಮಾಜದ ಬಗ್ಗೆ ಮಾತನಾಡಿ ನ್ಯಾಯ ಏನು ಕೊಡಿಸ್ತಿರಾ ಸ್ವಾಮಿ ಹೀಗಾಗಿ ಕಲಬುರಗಿ ಬಂದು ಬೊಗಳೆ ಭಾಷಣ ಮಾಡವುದು ಬಿಟ್ಟು, ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಸಮಾಜದವರಿಗೆ ಉದ್ದಾರ ಮಾಡವುದು ಕಲಿತುಕೊಳ್ಳಿ ಎಂದು ಅವರು ಸಲಹೆ ನೀಡಿದರು.ಛಲವಾದಿ ನಾರಾಯಣ ಸ್ವಾಮಿ, ಮತ್ತು ಎಸ್. ಮಹೇಶ, ಎನ್. ರವಿಕುಮಾರ್ ನೀವು ಮೂರು ಜನರು ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ಆದರೆ ನಮ್ಮ ಡಾ. ಮಲ್ಲಿಕಾರ್ಜುನ ಖರ್ಗೆಜೀ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯವರು ಕಲ್ಯಾಣ ಕರ್ನಾಟಕ್ಕೆ ಅವರು ಮಾಡಿದ ಅಭಿವೃದ್ಧಿ ಕೆಲಸ ಮತ್ತು ಕೊಡುಗೆ ಜನತೆ ಯಾವತ್ತಿಗೂ ಮರೆಯವುದಿಲ್ಲ ಎಂದು ಅವರು ತಿಳಿಸಿದರು.