ಅನುಭವ ಬದುಕಿಗೆ ದೊಡ್ಡ ಪಾಠ: ಡಾ. ಡಿ. ಶ್ರೀನಿವಾಸ್ ಮಣಗಳ್ಳಿ

0
79

ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ಯಾವೊಂದು ವಿಶ್ವವಿದ್ಯಾಲಯವು ಕಲಿಸದ ಪಾಠವನ್ನು ಮನುಷ್ಯನಿಗೆ ಅನುಭವವನ್ನು ಕಲಿಸಿ ಕೊಡುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಡಿ. ಶ್ರೀನಿವಾಸ್ ಮಣಗಳ್ಳಿ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡಿರುವ ಸ್ವಾಗತ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರ್ನಾಟಕದಲ್ಲಿ ಆರು ಸಾವಿರ ಪತ್ರಿಕೆಗಳು ಬಂದು ಹೋಗಿವೆ ಇವಾಗ ಕೆಲವೇ ಕೆಲವು ಪತ್ರಿಕೆಗಳು ಮಾತ್ರ ಉಳಿದುಕೊಂಡಿವೆ. ಇಂದು ಪತ್ರಿಕೋದ್ಯಮ ವೃತ್ತಿಪರ ಕೋರ್ಸ್ ಆಗಿರುವುದರಿಂದ ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವರು ಯಾರೋಬ್ಬರು ಕೂಡ ನಿರುದ್ಯೋಗಿ ಆಗಿ ಉಳಿಯುವುದಿಲ್ಲ. ಅವರಿಗೆ ಉದ್ಯೋಗಾವಕಾಶ ಸಾವಿರಾರು ಕೈಬೀಸಿ ಕರೆಯುತ್ತವೆ. ಇಂದು ದೇಶದಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು ಇದೆ. ಬದಲಾವಣೆ ತರುವ ಶಕ್ತಿ ಮಾಧ್ಯಮ ಲೋಕಕ್ಕೆ ಇದೆ. ಜಾತಿ, ಧರ್ಮ, ಸಂಸ್ಕೃತಿಯ ವಿವಿಧತೆಯಿಂದ ಕೂಡಿರುವ ಈ ದೇಶದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೇ ಪತ್ರಿಕೋದ್ಯಮ. ಪತ್ರಕರ್ತರು ಸಮಾಜ ಸುಧಾರಣೆಯ ರುವಾರಿಗಳು. ಇತಿಹಾಸವನ್ನು ತೆಗೆದು ನೋಡಿದಾಗ ಡಾ. ಅಂಬೇಡ್ಕರ್ ಅವರು ತಳ ಸಮುದಾಯದ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಪತ್ರಿಕೆ ಮುಖಾಂತರ ಧ್ವನಿ ಎತ್ತಿದರು. ಆದರೆ ಇಂದು ದೊಡ್ಡ ದುರಂತ ಎಂದರೆ ಜನಗಳಿಗೆ ಸರಿಯಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ಬದಲಾಗಿ ಸುಳ್ಳು ಸುದ್ದಿಯನ್ನು ಹೆಚ್ಚು ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಸಾರ್ವಜನಿಕರು ಮಾಧ್ಯಮದ ಮೇಲೆ ಇಟ್ಟಿರುವ ಭರವಸೆಯನ್ನು ಕಡಿಮೆ ಆಗುತ್ತಿದೆ ಎಂದು ಅವರು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಕರ್ತರು ಎಂದರೆ ಸತ್ಯವನ್ನೇ ಬರಿಬೇಕು. ಸತ್ಯದ ಪರವಾಗಿ ಇರುವವರು ಅವರು ನಿಜವಾದ ಪತ್ರಿಕೋದ್ಯಮಿಗಳು ಆಗುತ್ತಾರೆ. ನಿಜವಾದ ಪತ್ರಕರ್ತರನ್ನು ತಯಾರು ಮಾಡುವ ಕಾರ್ಖಾನೆ ಪತ್ರಿಕೋದ್ಯಮ ವಿಭಾಗದಿಂದ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳು ಪತ್ರಿಕೋದ್ಯಮದಲ್ಲಿ ಸಿಗುತ್ತವೆ. ಕಲ್ಯಾಣ ಕರ್ನಾಟಕ ಯಾವಾಗಲೂ ಅಡ್ವಾನ್ಸಡ್ ಏರೀಯಾ ಇದೆ. ಈ ನಮ್ಮ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ಅವರು ಹೇಳಿದರು.
ಪ್ರಸ್ತಾವಿಕವಾಗಿ ಡಾ. ಅಶೋಕ ದೊಡ್ಡಮನಿ ಮಾತನಾಡಿದರು. ಡಾ. ರಾಜಕುಮಾರ ಎಂ. ದಣ್ಣೂರ, ಆನಂದ ಯಾತನೂರ ಇದ್ದರು. ರಾಮಶೆಟ್ಟಿ ನಿರೂಪಿಸಿದರು ಹೊನ್ನಪ್ಪ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here