ಕಲಬುರಗಿ: ಸುಲ್ತಾನ್ ಹಿಂದ್ ಹಝ್ರತ್ ಖ್ವಾಜಾ ಮೊಯಿನುದ್ದೀನ್ ಚಿಷ್ಟಿ ಅಜ್ಮೇರಿಯವರ 813ನೇ ಉರುಸ್ ನಿಮಿತ್ತ ಹಝ್ರತ್ ಖ್ವಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿಗಳಾದ ಹಝ್ರತ್ ಸೈಯದ್ ಮುಹಮ್ಮದ್ ಅಲಿ ಹುಸೈನಿ ಅವರ ಭಾಗವಹಿಸಿದ್ದರು.
ಈ ವೇಳೆ ಹಝ್ರತ್ ಖ್ವಾಜಾ ಘರೀಬ್ ನವಾಜ್ (ರ.ಅ) ದರ್ಗಾದ ಪೀಠಾಧಿಪತಿ ಹಝ್ರತ್ ಸೈಯದ್ ಜೈನುಲ್ ಆಬಿದೀನ್ ಅಲಿ ಖಾನ್ ದರ್ಗಾದ ಜನಾಶೀನ್ ಸಜ್ಜದ ನಶೀನ್ ಹಝ್ರತ್ ಸೈಯದ್ ನಸೀರುದ್ದೀನ್ ಚಿಷ್ಟಿ, ಡಾ. ಸೈಯದ್ ಮುಸ್ತಫಾ ಹುಸೈನಿ ಹಿರಿಯ ಪುತ್ರ ಹಝ್ರತ್ ಸೈಯದ್ ಮುಹಮ್ಮದ್ ಸೈಯದ್ ಹುಸೈನಿ ಸೇರಿದಂತೆ ಇತರ ಮೌಲವಿಗಳು ಮತ್ತು ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು.