ಯಾದಗಿರಿ: ಸ್ವಂತ ತಂದೆಯನ್ನೇ ಕೊಲೆ ಮಾಡಿ ಮರಣ ಹೊಂದಿದ್ದಾಗಿ ನಂಬಿಸಿ ಆಸ್ತಿಯೆಲ್ಲ ತನ್ನ ಹೆಸರಿಗೆ ಮಾಡಿಕೊಂಡ ಸಹೋದರಿಯವ ವಿರುದ್ಧ ಇನ್ನೊಬ್ಬ ಸಹೋದರಿ ತನಿಖೆಗೆ ಆಗ್ರಹಿಸಿ ನಡೆಸಿದ ಅಮರಣ ಉಪವಾಸ ಸತ್ಯಾಗ್ರಹ ಸಹಾಯಕ ಆಯುಕ್ತರ ಭರವಸೆ ಮೇರೆಗೆ ಹಿಂದಕ್ಕೆ ಪಡೆದಳು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ನಡೆದ ಅಮರಣ ಉಪವಾಸ ಸ್ಥಳಕ್ಕೆ ಬಂದ ಸಹಾಯಕ ಆಯುಕ್ತರು ಮನವಿ ಸ್ವೀಕರಿಸಿ ಸೂಕ್ತ ತನಿಖೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಉಪವಾಸ ಹೋರಾಟ ಅಂತ್ಯಗೊಳಿಸಿದ್ದಾಗಿ ನಿಂಗಮ್ಮ ಪ್ರಕಟಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಆಸ್ತಿಗಾಗಿ ಕೊಲೆ ಮಾಡಿದ ಸಹೋದರಿ ಹಾಗೂ ಆಕೆಯ ಗಂಡನ ವಿರುದ್ದ ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸಬೇಕು, ತಂದೆ ಸತ್ತನೆಂದು ನಂಬಿಸಿ ಮಣ್ಣು ಮಾಡಿದ ಎರಡೇ ತಿಂಗಳಲ್ಲಿ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದು ಇದರ ಅವ್ಯವಹಾರದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಜೀಜ್ ಐಕೂರು, ಭೀಮಣ್ಣ ಹುಣಸಗಿ, ಭಿಮಣ್ಣ ಕ್ಯಾತನಾಳ, ಮಲ್ಲಿಕಾರ್ಜುನ ಆಶನಾಳ, ಶರಣಪ್ಪ ಉಳ್ಳೆಸುಗೂರು, ಶರಣಪ್ಪ ಕುರಕುಂದಿ ಇನ್ನಿತರರು ಇದ್ದರು.