ನಮ್ಮ ನಾಡಿನ ಹೆಮ್ಮೆಯ ಮಹಿಳಾ ಮಣಿ ಕಿತ್ತೂರು ರಾಣಿ ಚನ್ನಮ್ಮ:ಮಹಾದೇವ ಬಡಾ

0
137

ಕಲಬುರಗಿ: ನಮ್ಮ ಕನ್ನಡ ನಾಡು ಹಿಂದಿನಿಂದಲೂ ಸಾಕಷ್ಟು ವೀರರು, ಶೂರರು ಇದ್ದಂತ ನಾಡು. ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗವೂ ಗಂಡುಗಲಿಗಳ ನಾಡೆಂದು ಪ್ರಸಿದ್ಧಿ ಪಡೆದಿದೆ. ಅಂಥವುದರಲ್ಲಿ ಕಿತ್ತೂರು ಸಂಸ್ಥಾನವನ್ನಾಳಿದ ವೀರ ಮಹಿಳೆ ಚನ್ನಾಮಾಜಿಯೂ ಒಬ್ಬಳು ಎಂದು ಪ್ರಾಚಾರ್ಯ ಮಹಾದೇವ ಬಡಾ ಹೇಳಿದರು.

ಮಹಾಗಾಂವ ಕ್ರಾಸದಲ್ಲಿನ ಮೌಂಟ್ ವೇವ್ ಪದವಿ ಪೂರ್ವ ಕಾಲೇಜಿನಲ್ಲಿಂದು ವೀರರಾಣಿ ಕಿತ್ತೂರು ಚನ್ನಮ್ಮನವರ ಜಯಂತಿಯನ್ನು ಆಚರಿಸುತ್ತ ಮಾತನಾಡಿದ ಅವರು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬ್ರಿಟೀಷರ ವಿರೂದ್ಧ ರಣ ಕಹಳೆ ಮೊಳಗಿಸಿದ ನಮ್ಮ ನಾಡಿನ ಹೆಮ್ಮೆಯ ಮಹಿಳಾ ಮಣಿ ಕಿತ್ತೂರು ರಾಣಿ ಚನ್ನಮ್ಮ. ೧೮೨೪ ರ ಅಕ್ಟೋಬರ್ ೨೩ ರಂದು ಬ್ರಿಟೀಷ ಸರಕಾರ ಕಿತ್ತೂರು ಸಂಸ್ಥಾನದ ಮೇಲೆ ದಾಳಿ ಮಾಡಿದಾಗ ಅದನ್ನು ಸಮರ್ಥವಾಗಿ ಎದುರಿಸಿ ಬ್ರಿಟೀಷರನ್ನು ಸೋಲಿಸಿ ವಿಜಯಗೈದ ದಿನವಾಗಿದೆ. ಅಕ್ಟೋಬರ್ ೨೩ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.

Contact Your\'s Advertisement; 9902492681

ಈ ಸಂಧರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾಧ ಕುಶ ಮಂಠಾಳ, ಅನಂತಕುಮಾರ ಪಾಟೀಲ, ಸಂತೋಷ ಹಂಡ್ಗೆ, ಸಂತೋಷ ಪಾಟೀಲ, ನಾಗೇಶ ವೀರಣ್ಣ, ಬಸವರಾಜ, ಶಿವಾನಂದ, ವಿನೋದ ಮತ್ತು ವಿದ್ಯಾರ್ಥಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here