’ವಿಶ್ವದ ಸಮಗ್ರ ಅಭಿವೃದ್ಧಿಗೆ ವಿಶ್ವಶಾಂತಿ ಕೊಡುಗೆ ಅನನ್ಯ’

0
32

ಕಲಬುರಗಿ: ವಿಶ್ವದ ಸಮಗ್ರ ಅಭಿವೃದ್ಧಿಗೆ ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿ ತುಂಬಾ ಅವಶ್ಯಕವಾಗಿದೆ. ಅಶಾಂತವಾದ ಮತ್ತು ಅನಿಶ್ಚಿತದಿಂದ ಕೂಡಿರುವ ರಾಷ್ಟ್ರ ಏನನ್ನು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಮೊದಲನೆ ವಿಶ್ವ ಸಮರದ ನಂತರ ಯುದ್ಧವನ್ನು ತಡೆಗಟ್ಟಲು ರಾಷ್ಟ್ರ ಸಂಘ ವಿಫಲವಾಯಿತು. ಎರಡನೇ ಮಹಾ ಯುದ್ಧ ನಂತರ ವಿಶ್ವದೆಲ್ಲೆಡೆ ಶಾಂತಿ ಹಾಗೂ ಅಭಿವೃದ್ಧಿಗಾಗಿ ಉದಯಿಸಿದ ಸಂಸ್ಥೆ ವಿಶ್ವಸಂಸ್ಥೆಯಾಗಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಹೇಳಿದರು.

ಅವರು ನಗರದ ನೆಹರು ಗಂಜ್‌ನಲ್ಲಿರುವ ’ಶಾರದಾ ಪದವಿ ಕಾಲೇಜ್’ನಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ’ವಿಶ್ವ ಸಂಸ್ಥೆ ಸಂಸ್ಥಾಪನಾ ದಿನ’ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅಮೇರಿಕದ ಅಧ್ಯಕ್ಷರಾಗಿದ್ದ ಎಫ್.ಡಿ.ರೂಸ್‌ವೆಲ್ಟ್ ,ಇಂಗ್ಲೆಂಡಿನ ಪ್ರಧಾನಿಯಾಗಿದ್ದ ವಿನ್ಸಟನ್ ಚರ್ಚಿಲ್ ಮತ್ತು ರಷ್ಯಾದೇಶದ ಸ್ಟ್ಯಾಲಿನ್ ಇವರುಗಳು ಈ ಸಂಸ್ಥೆಯ ಸ್ಥಾಪನೆಗೆ ಕಾರಣರಾದ ಮಹಾನ ವ್ಯಕ್ತಿಗಳಾಗಿದ್ದಾರೆ. ಈ ನಾಯಕರು ೧೯೪೫ರಲ್ಲಿ ಯಾಲ್ಟಾದಲಿ ಜರುಗಿದ ಸಮ್ಮೇಳನದಲ್ಲಿ ಇದರ ಸ್ಥಾಪನೆಗೆ ನಿರ್ಧಾರಕೈಗೊಂಡರು. ಈ ನಿರ್ಧಾರದಂತೆ, ಅಕ್ಟೋಬರ ೨೪, ೧೯೪೫ ರಲ್ಲಿ ವಿಶ್ವಸಂಸ್ಥೆ ಅಸ್ಥಿತ್ವಕ್ಕೆ ಬಂದಿತೆಂದರು.

Contact Your\'s Advertisement; 9902492681

ಭಾರತವು ವಿಶ್ವಶಾಂತಿ, ಸ್ನೇಹ, ಸಹಕಾರ ತತ್ವಗಳಿಗಾಗಿ ಹಿಂದಿನಿಂದಲೂ ಶ್ರಮಿಸುತ್ತಿದೆ.ಅದುಎಲ್ಲಾ ರಾಷ್ಟ್ರಗಳ ಜೊತೆಗೆಉತ್ತಮವಾದ ಬಾಂಧ್ಯವ್ಯವನ್ನು ಸದಾ ಬಯಸುತ್ತದೆ.ವಿಶ್ವಸಂಸ್ಥೆಯು ಸಾಕಷ್ಟು ಸಾದಿಸಿದೆ ಜೊತೆಗೆಇನ್ನೂ ಸಾಧಿಸಬೇಕಾಗಿದೆ.ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಸಂಸ್ಥೆಯುಅಮೇರಿಕದ ಪರಕಾರ್ಯನಿರ್ವಹಿಸುತ್ತದೆ ಎಂಬ ಕೂಗು ಕೇಳಿಬರುತ್ತಿದೆ.ಅದಕ್ಕಾಗಿ ಈ ಸಂಸ್ಥೆಯುಇನ್ನೂ ಹೆಚ್ಚಿನ ಮಟ್ಟದಲ್ಲಿ ನ್ಯಾಯಯುತವಾಗಿ ಸರ್ವ ರಾಷ್ಟ್ರಗಳನ್ನು ಸಮಾನದೃಷ್ಟಿಯಿಂದಕಂಡುಜಗತ್ತಿನ ಅನೇಕ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿ, ಅಭಿವೃದ್ಧಿಗೆ ಶ್ರಮಿಸಬೇಕಾಗಿದೆಯೆಂದು ನುಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲ ಪ್ರೊ.ಎಸ್.ಕೆ.ಕಲ್ಯಾಣರಾವ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು, ಸಮಾನತೆ ಆಧಾರದ ಮೇಲೆ ವಿಶ್ವದಲ್ಲಿನ ರಾಷ್ಟ್ರಗಳಲ್ಲಿನ ಸ್ನೇಹ ಸಂಬಂಧಗಳನ್ನು ಬೆಳೆಸುವುದು, ಅಂತರರಾಷ್ಟ್ರೀಯ ಸಹಾಯಕ್ಕೆ ಬೆಂಬಲ ನೀಡಿ ವಿರ್ಶವದಲ್ಲಿನಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ ಸಮಸ್ಯೆಗಳಿಗೆ ಪರಿಹಾರವನು ಒದಗಿಸುವ ಮತ್ತು ಮಾನವನ ಮೂಲಭೂತ ಹಕ್ಕುಗಳನ್ನು ಉತ್ತೇಜಿಸುವಂತಹ ಮುಂತಾದ ಕಾರ್ಯಗಳನ್ನು ವಿಶ್ವಸಂಸ್ಥೆ ಮಾಡುತ್ತಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಶಿಲ್ಪಾ ಬಿರಾದಾರ, ಭುವನೇಶ್ವರಿ ಕುರಕೋಟಾ, ಶಿವನಾಗಮ್ಮ ಪಾಟೀಲ, ಪ್ರಮುಖರಾದ ಅಮರ ಬಂಗರಗಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here