ಸಗರನಾಡು ಶಾಲಾ ಆವರಣದಲ್ಲಿ ವನ್ಯ ಜೀವಿ ಸಪ್ತಾಹ

0
52

ಸುರಪುರ: ತಾಲ್ಲೂಕಿನ ಪೇಠ ಅಮ್ಮಾಪುರದ ಸಗರನಾಡು ಪ್ರೌಢ ಶಾಲೆಯ ಆವರಣದಲ್ಲಿ ವಿಶ್ವಗಂಗಾ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಸುರಪುರ ಹಾಗೂ ವಲಯ ಅರಣ್ಯಧಿಕಾರಿಗಳ ಕಾರ್ಯಲಯ ಸುರಪುರ ಇವರ ಸಹಯೋಗದೊಂದಿಗೆ ವನ್ಯ ಜೀವಿ ಸಪ್ತಾಹ ಹಾಗೂ ಶಾಲಾ ಮಕ್ಕಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯಧಿಕಾರಿ ಶಾಂತರಡ್ಡಿ ಮಾತನಾಡಿ,ಪರಿಸರ ನಮ್ಮ ಪ್ರಾಣ ,ಪರಿಸರ ಸಂರಕ್ಷಣೆ ನಮ್ಮೇಲ್ಲರ ಜವಬ್ದಾರಿ ,ಪರಿಸರ ನಾಶದಿಂದ ಪ್ರಾಣಿ,ಪಕ್ಷಿ, ಗಿಡಮರಗಳು ಇಲ್ಲದಂತಾಗಿ ಮಾನವನಿಗೆ ಉಸಿರಾಡಲು ಶುದ್ದ ಗಾಳಿಯ ಕೊರೆತಯುಂಟಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಪರಿಸರ ನಾಶದಿಂದ ಮಾನವ ಸಂಕುಲವೆ ನಾಶವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಗಿಡಮರಗಳು ನೆಡಬೇಕು .ವನ್ಯ ಜೀವಿಗಳನ್ನು ಉಳಿಸಿ ಬೆಳಸಬೇಕಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವಗಂಗಾ ಗ್ರಾಮೀಣ ಸಂಸ್ಥೆಯ ಅಧ್ಯಕ್ಷ ಚಂದಪ್ಪ ಯಾದವ್,ಮಾತನಾಡಿ ವನ್ಯಜೀವಗಳು ನಾಶ ಮಾಡಬಾರದು ಅವುಗಳ ರಕ್ಷಣೆ ನಮ್ಮೆಲ್ಲರ ಜವಬ್ದಾರಿ ಪರಿಸರ ರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆ ಉಳಿಯಲು ಸಾಧ್ಯ. ಇಲ್ಲದಿದ್ದರೆ ಮಾನವನ ವಿಶಾನಕಾಲ ಬಂದಂತಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಗರನಾಡು ಪ್ರೌಢ ಶಾಲೆಯ ಮಕ್ಕಳು ಅನೇಕ ಬಗೆಯ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿಶೇಷವಾಗಿ ಕೋಲಾಟ, ಶೋಭಾನೆ ಪದಗಳು , ಬೀಸಕಲ್ಲು ಪದಗಳು ಹಾಡಿ ನೋಡುಗರ ಕಣ್ಮನ ಸೇಳೆದವು. ಮುಖ್ಯ ಅತಿಥಿಗಳಾಗಿ ಅರಣ್ಯಾಧಿಕಾರಿ ಶರಣಪ್ಪ ಕುಂಬಾರ,ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಭಾಗವಹಿಸಿದರು. ಬಸವಣ್ಣಪ್ಪ ಹಂಗರಿಗಿ ನಿರೂಪಿಸಿದರು. ಮಹಾಂತೆಶ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here