ಸುರಪುರ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸುಮಾರು ನಲವತ್ತಕ್ಕು ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶಾಂತಪ್ಪ ಬೂದಿಹಾಳರ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ ಹಾಗು ಸುರಪುರ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ನಡೆದ ವರ್ಷದ ವ್ಯಕ್ತಿ ಆಯ್ಕೆ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ಇದುವರೆಗಿನ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಎಲ್ಲರು ಒಮ್ಮತದಿಂದ ಬೂದಿಹಾಳರನ್ನು ಆಯ್ಕೆಗೊಳಿಸಿದ್ದು ಸೂಕ್ತವಾಗಿದೆ ಎಂದರು.ಅಲ್ಲದೆ ಇಂದು ಸಾಹಿತ್ಯ ಚಟುವಟಿಕೆಗಳು ಕಡಿಮೆಯಾಗುತ್ತಿವೆ.ಅದರಂತೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ಕೂಡ ಚಟುವಟಿಕೆಗಳನ್ನು ಕಡಿಮೆಗೊಳಿಸಿದೆ.ಮುಂದೆ ಕಸಾಪ ಪ್ರತಿ ತಿಂಗಳಿಗೆ ಒಂದರಂತೆ ದತ್ತಿ ಉಪನ್ಯಾಸ,ಕಾವ್ಯ ಕಮ್ಮಟದಂತಹ ಕಾರ್ಯಕ್ರಮಗಳನ್ನು ನಡೆಸುವ ಅವಶ್ಯವಿದೆ.ಇಂತಹ ಚಟುವಟಿಕೆಗಳಿಗೆ ಸದಾಕಾಲ ನಾನು ಮತ್ತು ಸಾಹಿತ್ಯ ಸಂಘವು ಸಹಕಾರ ನೀಡಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ,ಶಾಂತಪ್ಪ ಬೂದಿಹಾಳವರನ್ನು ಎಲ್ಲರು ಸೇರಿ ವರ್ಷದ ವ್ಯಕ್ತಿಯನ್ನಾಗಿ ಆಯ್ಕೆಗೊಳಿಸಿದ್ದು ಸಂತೋಷದ ಸಂಗತಿಯಾಗಿದೆ.ನಮ್ಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅನೇಕ ವರ್ಷಗಳಿಂದ ವರ್ಷದ ವ್ಯಕ್ತಿ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು,ಇಡೀ ರಾಜ್ಯದಲ್ಲಿಯೇ ನಮ್ಮ ತಾಲ್ಲೂಕು ಪರಿಷತ್‌ನ ಈ ಸೇವೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾದ ಶಾಂತಪ್ಪ ಬೂದಿಹಾಳವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಎ.ಕೃಷ್ಣಾ.ನಬಿಲಾಲ ಮಕಾಂದಾರ,ಟಿ.ವೀರಪ್ಪ ಹಾಗು ಮುಖಂಡರಾದ ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ ದೇಶಮುಖ,ಜಯಲಲಿತ ವಿ ಪಾಟೀಲ,ಪ್ರಕಾಶ ಅಲಬನೂರ,ಬೀರಣ್ಣ ಆಲ್ದಾಳ,ಅನ್ವರ ಜಮಾದಾರ,ಶ್ರೀಹರಿ ಆದವಾನಿ,ಯಲ್ಲಪ್ಪ ಹುಲಕಲ್,ವೆಂಕಟೇಶ ಸುರಪುರ,ಶರಣಬಸಪ್ಪ ಯಳವಾರ,ಪ್ರಕಾಶಚಂದ್ ಜೈನ,ಹಸಿನಾ ಬಾನು ಸೇರಿದಂತೆ ಅನೇಕರಿದ್ದರು ಕಸಾಪ ಕಾರ್ಯದರ್ಶಿ ದೇವು ಹೆಬ್ಬಾಳ ನಿರೂಪಿಸಿ ವಂದಿಸಿದರು.