ಸುರಪುರ: ಮಾಜಿ ಪ್ರಧಾನಿ ಡಾ: ಬಾಬು ಜಗಜೀವನರಾಮ ಅವರು ಈ ದೇಶ ಕಂಡ ಮಹಾನ್ ಮುತ್ಸದ್ದಿ ರಾಜಕಾರಣಿಯಾಗಿದ್ದು,ಅಸ್ಪೃಷ್ಯತೆ ನಿವಾರಣೆಗೆ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ.ಅಲ್ಲದೆ ಹಸಿರು ಕ್ರಾಂತಿಯ ಹರಿಕಾರರೆಂದು ದೇಶದ ಜನತೆ ನಮಿಸುತ್ತಾರೆ.ಇಂತಹ ಮಹಾನ್ ವ್ಯಕ್ತಿಯ ಆದರ್ಶವನ್ನು ನಾವೆಲ್ಲರು ಪಾಲನೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಪಿ.ಕನ್ನೆಳ್ಳಿ ಮಾತನಾಡಿದರು.
ತಾಲ್ಲೂಕಿನ ಕೂಡಲಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಮಾದಿಗ ಯುವ ಸೇನೆಯ ಗ್ರಾಮ ಘಟಕ ಡಾ: ಬಾಬು ಜಗಜೀವನರಾಮ್ ವೃತ್ತ ಉದ್ಘಾಟಿಸಿ ಮಾತನಾಡಿ, ಇಂದು ರಾಜ್ಯದಲ್ಲಿ ಮಾದಿಗ ಸಮುದಾಯ ಅನೇಕ ಸಮಸ್ಯೆಗಳನ್ನು ಹೆದರಿಸುತ್ತಿದೆ.ಸದಾಶಿವ ಆಯೊಗದ ವರದಿ ಜಾರಿಗಾಗಿ ಅನೇಕ ಹೋರಾಟ ನಡೆಸಿದರು ಸರಕಾರ ನಿರ್ಲಕ್ಷ್ಯ ತೋರುತ್ತಿವೆ.ಆದ್ದರಿಂದ ನಾವು ಉಗ್ರ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗುತ್ತಿದೆ.ಆದ್ದರಿಂದ ನಮ್ಮ ಮಾದಿಗ ಸಮುದಾಯದ ಜನತೆ ಎಚ್ಚೆತ್ತುಕೊಂಡು ಸಂಘಟಿತರಾಗುವ ಮೂಲಕ ಸರಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದರು.
ನಂತರ ಡಾ: ಬಾಬು ಜಗಜೀವನರಾಮ್ ಅವರ ನಾಮಫಲಕ ಉದ್ಘಾಟಿಸಿ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.ಸೇನೆಯ ಹುಣಸಗಿ ತಾಲ್ಲೂಕು ಅಧ್ಯಕ್ಷ ಬಸವರಾಜ ಹಗರಟಿಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆ ಮೇಲೆ ಮಾದಿಗ ಸಮುದಾಯದ ಮುಖಂಡ ಭೀಮಾಶಂಕರ ಬಿಲ್ಲವ್,ಕೃಷ್ಣಾರಡ್ಡಿ ಮುದನೂರ,ಗ್ರಾ.ಪಂ ಅಧ್ಯಕ್ಷ ನಿಂಗಣ್ಣ ಗೋಡಿಹಾಳ,ವಿಜಯಕುಮಾರ ಕುಲಕರ್ಣಿ,ಶರಣಗೌಡ,ಶಿವಪ್ಪ ಮಳ್ಳಿಕೇರಿ ಸೇರಿದಂತೆ ಅನೇಕರಿದ್ದರು.ಇದೇ ಸಂದರ್ಭದಲ್ಲಿ ಗ್ರಾಮ ಶಾಖೆಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.