ಸಾಹಿತ್ಶಕ್ಕೆ ಔಷದಿಯ ಗುಣಗಳಿವೆ: ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಶ

0
103

ಕಲಬುರಗಿ: ಸಾಹಿತ್ಶಕ್ಕೆ ಔಷದಿಯ ಗುಣಗಳಿವೆ. ಉತ್ತಮ ಸಾಹಿತ್ಶ ಇಂದಿನ ಜಾಗತಿಕ ತಲ್ಲಣಗಳಿಗೆ ಪರಿಹಾರ ಒದಗಿಸುತ್ತದೆ ಎಂದು ಖ್ಶಾತ ವಿಮರ್ಶಕ ಹಾಗೂ ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಶ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಶಾಲಯದ ಕನ್ನಡ ಅಧ್ಶಯನ ಮತ್ತು ಸಂಶೋಧನ ಸಂಸ್ಥೆ ವತಿಯಿಂದ ಪ್ರೊ.ಎಸ್.ಆರ್.ನಿರಂಜನ್ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ‘ಭೂಮಿ ಮತ್ತು ಸಾಹಿತ್ಶ’ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಗಿನ ಕಾಲದಲ್ಲಿ ಭೂಮಿಯನ್ನು ತಾಯಿˌ ಹೆಂಡತಿಯಾಗಿ ಕಾವ್ಶದಲ್ಲಿ ಬಳಸುತ್ತಿದ್ದರೆˌ ಇಂದು ಅದೇ ಭೂಮಿ ಮಾರಾಟದ ಸರಕಾಗಿˌ ಉದ್ಶಮವಾಗಿ ಬಳಸುತ್ತಿದ್ದಾರೆ ಎಂದು ವಿಷಾಧ ವ್ಶಕ್ತಪಡಿಸಿದರು.

Contact Your\'s Advertisement; 9902492681

ಅನೇಕ ಕಾವ್ಶಗಳುˌ ಸಾಹಿತ್ಶಗಳು ಮನುಷ್ಶನನ್ನು ತನ್ನೋಳಗೆ ತಾನು ಪ್ರವೇಶಿಸಿಕೊಳ್ಳಲು ಸಹಾಯಕವಾಗಿದ್ದವು. ಇಂತಹ ಸಾಹಿತ್ಶ ಇಂದು ಮರೆಯಾಗುತ್ತಿದೆ. ಇಡೀ ಕರ್ನಾಟಕದ ಸಾಹಿತ್ಶವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಒಂದೇ ಒಂದು ಗ್ರಂಥಾಲಯ ನಮ್ಮ ರಾಜ್ಶದಲ್ಲಿ ಇಲ್ಲ. ಸಾಹಿತ್ಶ ಸಮ್ಮೇಳನಗಳಿಗೆ ಕೋಟಿ ರೂ. ಖರ್ಚು ಮಾಡುವ ಸರಕಾರ ಕನ್ನಡದ ಪ್ರಮುಖ ಲೇಖಕರ ಕೃತಿಗಳನ್ನು ಒಟ್ಟುಗೂಡಿಸುವ ಗ್ರಂಥಾಲಯಗಳಿಗೆ ಸ್ಥಾಪನೆಗೆ ಹಿಂದೇಟು ಹಾಕುತ್ತಿದೆ ಎಂದು ಬೇಸರವ್ಶಕ್ತಪಡಿಸಿದರು.

ಅನಕೃ ಮತ್ತು ಜೆ.ಎಸ್.ಎಸ್ ಅವರ ಮನೆಗಳು ಸ್ಮಾರಕವಾಗಿ ಮಾಡಬೇಕು. ಭೂಮಿˌ ಪ್ರಕೃತಿ ಗಾಳಿಗಳ ಮೇಲೆ ಸಾಹಿತ್ಶ ಬರೆಯುವ ಕಾಲ ಮರೆತು ಹೋಗುತ್ತಿದ್ದುˌ ಭೂಮಿಯ ಮೇಲೆ ಆಕ್ರಮಣಕಾರಿ ಪ್ರವ್ರತ್ತಿ ಹೆಚ್ಚಾಗುತ್ತಿದೆ. ಮನುಷ್ಶ ತಾನು ಮಾತ್ರ ಬದುಕಿ ಎಲ್ಲವನ್ನು ಹಾಳು ಮಾಡುತ್ತಿದ್ದಾನೆ ಎಂದರು.

ನಂತರ ಮಾತನಾಡಿದ ಲೇಖಕಿ ಡಾ. ಪಿ.ಚಂದ್ರಿಕಾˌ ಭೂಮಿ ಮತ್ತು ಮನುಷ್ಶನಿಗೆ ಅವಿನಾಭಾವ ಸಂಬಂಧ ಇದೆ. ಭೂಮಿ ನಮಗೆ ಸಹನೆˌ ತಾಳ್ಮೆˌ ಸೂಕ್ಷ್ಮತೆಯ ಗುಣಗಳನ್ನು ಕಲಿಸಿದೆ. ಸಾಹಿತ್ಶ ಮತ್ತು ಕವಿತೆಯ ಮೂಲ ಭೂಮಿಯಾಗಿದ್ದು ಮುಂದಿನ ಪೀಳಿಗೆ ಇದೆಲ್ಲವನ್ನು ಮರೆಯುವ ಕಾಲ ದೂರವಿಲ್ಲವೆಂದು ಹೇಳಿದರು.

ಅಧ್ಶಕ್ಷತೆ ವಹಿಸಿ ಮಾತನಾಡಿದ ಪ್ರೊ.ಎಚ್.ಟಿ ಪೋತೆˌ ಸಾಹಿತಿಗಳ ವಿಷಯವಸ್ತುವಾಗಬೇಕಿದ್ದ ಭೂಮಿ ಹಣವಂತರˌ ರಾಜಕಾರಣಿಗಳ ಪಾಲಾಗುತ್ತಿದೆ. ಭೂಮಿ ಮತ್ತು ಮಣ್ಣಿನ ಜೊತೆಗೆ ಸಂಬಂಧ ಹೊಂದಿದವರು ದಲಿತರುˌ ಬಡವರು. ಭೂಮಿಯ ಎದೆಹಾಲು ಕುಡಿದ ನಿಜವಾದ ಮಕ್ಕಳು ದಲಿತರು ಎಂದರು. ಡಾ.ವಿಕ್ರಮ ವಿಸಾಜಿ ಪ್ರಾಸ್ತಾವಿಕ ಮಾತನಾಡಿದರು.

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರˌ ಪ್ರಭಾಕರ್ ಜೋಶಿˌ ಬಿ.ಹೆಚ್.ನಿರಗುಡಿˌ ಸಂಗಮನಾಥ ರೇವತಗಾಂವˌ ಈಶ್ವರ್ ಇಂಗಿನ ಇದ್ದರು. ಡಾ.ಎಂ.ಬಿ.ಕಟ್ಟಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here