ಒಕ್ಕೂಟದ ವ್ಯವಸ್ಥೆಯಲ್ಲಿ ಪಟೇಲರ ಪಾತ್ರ ಸ್ಮರಣೀಯ: ಬಿರೇಶಕುಮಾರ

0
30

ಕಲಬುರಗಿ: ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಹಲವು ಸಂಸ್ಥಾನಗಳನ್ನು ಅಖಂಡ ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ವಿಲಿನಗೊಳಿಸುವಲ್ಲಿ ಸರ್ದಾರ ವಲ್ಲಬಭಾಯಿ ಪಟೇಲರ ಕೊಡುಗೆ ಸ್ಮರಣಿಯವಾಗಿದೆ ಎಂದು ಉಪನ್ಯಾಸಕ ಬಿರೇಶ ಕುಮಾರ ದೇವತ್ಕಲ್ ಹೇಳಿದರು.

ಸಗರನಾಡು ಯುವಕಸಂಘ ಕನ್ನೆಳ್ಳಿ, ನೇಹರು ಯುವ ಕೇಂದ್ರ ಕಲಬುರಗಿ ಸಹಯೋಗದೊಂದಿಗೆ ರಂಗಂಪೇಟೆಯ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ಸರ್ಧಾರ ವಲ್ಲಬಭಾಯಿ ಪಟೇಲ ರವರ ಜನ್ಮ ದಿನೋತ್ಸವ ನಿಮಿತ್ಯ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮದ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು ಭಾರತದ ಪ್ರಥಮ ಗೃಹ ಮಂತ್ರಿಗಳಾಗಿ ಭಾರತದ ಉಕ್ಕಿನ ಮನುಷ್ಯ ಎಂಬ ಬಿರುದಿಗೆ ಪಾತ್ರರಾಗಿದ್ದ ಪಟೇಲರು ಹೈದರಬಾದ್ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸಿ ನಿಜಾಮನ ಕಪಿಮುಷ್ಠಿಯಿಂದ ವಿಮೊಚನಾ ಗೊಳಿಸಿ ಈ ಭಾಗವನ್ನು ಭಾರತದ ಒಕ್ಕೂಟಕ್ಕೆ ಸೆರ್ಪಡೆಗೊಳಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ ಇಂದಿನ ಯುವಜನರು ಮತ್ತು ವಿದ್ಯಾರ್ಥಿಗಳಿಗೆ ಸರ್ದಾರ ಪಟೇಲರ ಜೀವನ ಆದರ್ಶ ಮಾದರಿಯಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಕಾಲೇಜಿನ ಪ್ರಾಚಾರ್ಯ ವಿರೇಶ ಹಳೀಮನಿ, ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು, ಸಗರನಾಡು ಯುವಕ ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಉದ್ಯಮಿ ಬೊಜಪ್ಪ ಸಜ್ಜನ್ ಇಳಕಲ್, ಶಿವಶರಣಪ್ಪ ಹೆಡಿಗಿನಾಳ, ಶಿವರಾಜ್ ಕಲಿಕೇರಿ, ಅಂಬ್ರೇಶ ಕುಂಬಾರ, ಬಲಭೀಮ ಪಾಟೀಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಬಸವರಾಜ ಚನ್ನಪಟ್ನ ನಿರೂಪಿಸಿದರು, ಸಂತೋಷ ಬಿಶೇಟ್ಟಿ ಸ್ವಾಗತಿಸಿ ವಂದಿಸಿದರು ರಾಷ್ಟ್ರೀಯ ಏಕತಾದಿವಸ ಪ್ರಯುಕ್ತ ಸರ್ದಾರ ವಲ್ಲಬಭಾಯಿ ಪಟೇಲರ ಕುರಿತು ವಿದ್ಯಾರ್ಥಿಗಳಿಗೆ ಪ್ರಭಂದ ಮತ್ತು ಭಾಷಣ ಸ್ಪರ್ದೆ ಆಯೋಜಿಸಲಾಗಿತ್ತು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here