ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಾಳೆ ಶಾಸಕಿ ಕನೀಝ್ ಫಾತೀಮಾ ನೇತೃತ್ವದಲ್ಲಿ ಪ್ರತಿಭಟನೆ

0
79

ಕಲಬುರಗಿ: ರಾಜ್ಯದ ಮತ್ತು ಕೇಂದ್ರದ ಬಿಜೆಪಿ ಸರಕಾರದ ನೀತಿಗಳನ್ನು ವಿರೋಧಿಸಿ ನಾಳೆ 11ಕ್ಕೆ ನಗರದ ಜಗತ್ ವೃತದಿಂದ ಜಿಲ್ಲಾಧಿಕರಿ ಕಚೇರಿಯವರೆಗೆ ಮೆರವಣಿಗೆ ನಡೆಸಲಾಗುವುದೆಂದು ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಝ್ ಫಾತೀಮಾ ಅವರು ಕರೆ ನೀಡಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಪೂರ್ವ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು ರಾಜ್ಯ ಮತ್ತು ಕೇಂದ್ರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಬೃಹತ ಪ್ರತಿಭಟನೆ ನಡೆಸಿಲಾಗುವುದು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿಲು ಅವರು ಕರೆ ನೀಡಿದ್ದಾರೆ.

Contact Your\'s Advertisement; 9902492681

ಸಭೆಯಲ್ಲಿ ಮಾಜಿ ಮೇಯರ್ ಸೈಯದ್ ಅಹ್ಮದ್, ಯುವ ಮುಖಂಡ ಫರಾಜು ಉಲ್ ಇಸ್ಲಾಂ, ಆದೀಲ್ ಸುಲೇಮಾನ್ ಸೇಠ್,ಮಜರ್ ಆಲಂ, ವಾಹೇದ್ ಅಲಿ ಫಾತೇಖಾನಿ, ಸೈಯದ್ ದಸ್ತೆಗೀರ್ ಅಹ್ಮದ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here