ಸುರಪುರ: ನಗರದಲ್ಲಿರುವ ತರಕಾರಿ ಮಾರುಕಟ್ಟೆಯೂ ತಿಪ್ಪೆಗುಂಡಿಯಂತಾಗಿದ್ದು,ಮಾರಟಗಾರರು ಅಂತಹ ಸ್ಥಳದಲ್ಲಿಯೇ ಕುಳಿತು ತರಕಾರಿ ಮಾರುತ್ತಿದ್ದು ಕೂಡಲೆ ಮೂಲಭೂತ ಸೌಲಭ್ಯಗಳು ಕಲ್ಪಿಸುವಂತೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿದರು.
ವೇಣುಗೋಪಾಲಸ್ವಾಮಿ ದೇವಸ್ಥಾನ ಬಳಿ ಬೀದಿ ವ್ಯಾಪಾರಿಗಳೊಂದಿಗೆ ಹೋರಾಟ ನಡೆಸಿ ಮಾತನಾಡಿ,ವ್ಯಾಪಾರಿಗಳು ರಸ್ತೆಯ ಬದಿಯಲ್ಲಿ ಕುಳಿತು ತರಕಾರಿ ಮಾರುವುದರಿಂದ ಧೂಳು ಮಣ್ಣಿನಲ್ಲಿ ಕುಳಿತು ಆರೋಗ್ಯ ಹಾಳಾಗುತ್ತಿದೆ.ಅಲ್ಲದೆ ತರಕಾರಿಗಳು ಹಾಳಾಗುತ್ತಿವೆ.ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.ಅಲ್ಲದೆ ವ್ಯಾಪಾರಸ್ಥರಿಗೆ ಸರಿಯಾದ ಮಳಿಗೆಗಳಿಲ್ಲ.
ಅನೇಕ ಸಮಸ್ಯೆಗಳು ತರಕಾರಿ ವ್ಯಾಪಾರಸ್ಥರಿಗೆ ಬಾಧಿಸುತ್ತಿದ್ದು ಕೂಡಲೆ ಸರಕಾರ ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣ ಮಾಡಿ ಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ನಗರಸಭೆ ನೈರ್ಮಲ್ಯ ವಿಭಾಗದ ಜೆಇ ಸುನೀಲ ನಾಯಕ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೇಶಣ್ಣ ದೊರೆ,ದೇವಿಂದ್ರಪ್ಪ ನಾಯಕ ಸೇರಿದಂತೆ ಅನೇಕ ಜನ ವ್ಯಾಪರಿಗಳಿದ್ದರು.