ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

0
139

ಬೆಂಗಳೂರು: ಇಡೀ ದೇಶವೇ ಅಯೋಧ್ಯೆ ತೀರ್ಪಿಗೆ ಕಾದು ಕೂತಿದೆ. ನಾಳೆ ಅಯೋಧ್ಯೆ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕರ್ನಾಟಕದಲ್ಲಿಯೂ ಸಹ, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆಯನ್ನು ಘೋಷಿಸಿದೆ.‌ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿದ್ದು, ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Contact Your\'s Advertisement; 9902492681

ಕಲಬುರಗಿಯಲ್ಲಿ ಎರಡು ದಿನ  ಸೆಕ್ಸೆನ್ 144 ಜಾರಿ

ಕಲಬುರಗಿ: ಅಯೋಧ್ಯಾ ತೀರ್ಪು ಹಿನ್ನಲೆ, ಕಲಬುರಗಿ ಜಿಲ್ಲೆಯಾದ್ಯಂತ ಭಾನುವಾರ ಬೆಳಗ್ಗೆ 8 ರವರೆಗೆ ಸೆಕ್ಸೆನ್ 144 ಜಾರಿಗೊಳಿಸಲಾಗಿದ್ದು, ಮದ್ಯ ನಿಷೇಧ ಮಾಡಿ ಕಲಬುರಗಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಗರದ್ಯಾಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ. ಭದ್ರತೆಗಾಗಿ ನಗರದಲ್ಲಿ ನಾಲ್ಕು ಸಾವಿರ ಪೊಲೀಸರ ನಿಯೋಜನೆ. 4 ಕೆ‌ ಎಸ್ ಆರ್ ಪಿ ತುಕಡಿ ಸಿ ಎ ಆರ್ , ಡಿ ಎ ಆರ್ ಮತ್ತು ಸಿವಿಲ್ ಪೊಲೀಸರು ಸೇರಿ ನಾಲ್ಕು ಸಾವಿರ ನಿಯೋಜನೆ.

ಸಾಮಾಜಿಕ ಜಾಲತಾಣಗಳಲ್ಲಿ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡದಂತೆ ಮತ್ತು ಪ್ರಚೋದನಕಾರಿ ಸ್ಟೆಟಸ್ ಹಾಕಿದ್ದವರ ವಿರುದ್ದ ಕಠಿಣ ಕ್ರಮ ಹಾಗೂ ಗಡಿಪಾರು ಮಾಡುವದಾಗಿ ಪೊಲೀಸ್ ಕಮೀಷನರ್ ಎಂ.ಎನ್.ನಾಗರಾಜ್ ಖಡಕ್ ಸೂಚನೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here